ಸುಂಟಿಕೊಪ್ಪ, ಅ. ೫: ಸುಂಟಿಕೊಪ್ಪದಲ್ಲಿ ವಾಹನ ಚಾಲಕರ ಸಂಘದವರು ಎಲ್ಲಾ ಜನಾಂಗದವರನ್ನು ಒಗ್ಗೂಡಿಸಿ ಸೌಹಾರ್ದತೆಯಿಂದ ಕಳೆದ ೪೯ ವರ್ಷಗಳಿಂದ ಆಯುಧ ಪೂಜಾ ಸಮಾರಂಭವನ್ನು ಆಚರಿಸಿಕೊಂಡು ಬರುತ್ತಿರುವುದು ಮಾದರಿಯಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ನಡೆದ ೫೦ನೇ ವರ್ಷದ ಸುವರ್ಣ ವಾರ್ಷಿಕೋತ್ಸವÀ ಅದ್ಧೂರಿ ಆಯುಧ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಂಟಿಕೊಪ್ಪ ವಾಹನ ಚಾಲಕರ ಸಂಘಕ್ಕೆ ೨ ಲಕ್ಷ ಮಂಜೂರು ಮಾಡುವುದಾಗಿ ಹಾಗೂ ಸುಂಟಿಕೊಪ್ಪದಲ್ಲಿ ಮಾರುಕಟ್ಟೆಗೆ ಹಾಗೂ ಬಸ್ ನಿಲ್ಧಾಣಕ್ಕೆ ೨ ಕೋಟಿ ರೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲರ ಮನೆಗಳಿಗೆೆ ಕುÀಡಿಯುವ ನೀರು ಸಂಪರ್ಕಕ್ಕೆ ೩ ಕೋಟಿ ರೂ. ಮಂಜೂರು ಮಾಡುವುದಾಗಿ ಹೇಳಿದರು. ಅಲ್ಲದೆ ೭ನೇ ಹೊಸಕೋಟೆಯಲ್ಲಿ ವಿಕಾಸ್ ಜನ ಸೇವಾ (ಟ್ರಸ್ಟ್) ಜೀವನ ದಾರಿ ಅನಾಥ ಆಶ್ರಮ ಕಾರ್ಯ ನಿರ್ವಹಿಸುತ್ತಿದ್ದು ಸ್ವಂತ ಕಟ್ಟಡವಿಲ್ಲದೆ ಪರದಾಡುತ್ತಿದ್ದಾರೆ. ಆಶ್ರಮಕ್ಕೆ ಸರಕಾರಿ ಜಾಗವನ್ನು ಗುರುತಿಸಿದ್ದು ೫೦ ಲಕ್ಷ ರೂ. ವೆಚ್ಚದಲ್ಲಿ ನನ್ನ ಸ್ವಂತ ಹಣದಲ್ಲಿ ಕಟ್ಟಡ ನಿರ್ಮಿಸಿ ಕೊಡುವುದಾಗಿ ಭರÀವಸೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ಎ. ಜೀವಿಜಯ ವಾಹನ ಚಾಲಕರ ಸಂಘ ನಡೆದು ಬಂದ ದಾರಿಯನ್ನು ಸ್ಮರಿಸಿದರಲ್ಲದೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದು ಮುಂದೆ ಮಂಡಲ ಪಂಚಾಯಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿಯ ಉಪಾಧÀ್ಯಕ್ಷರಾಗಿ ಈಗ ಸಂಘದ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಆ್ಯಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ ಜರ್ಮಿಡಿಸೋಜ ಅವರನ್ನು ಶ್ಲಾಘಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸರಕಾರಿ ಡಿಗ್ರಿ ಕಾಲೇಜು ಮಂಜೂರು ಮಾಡ ಬೇಕೆಂದು ಮನವಿ ಮಾಡಿದರು. ಆ್ಯಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ ಜರ್ಮಿ ಡಿಸೋಜ ಮಾತನಾಡಿ, ಸಮಾಜದ ಮುಖ್ಯವಾಹಿನಿಯಲ್ಲಿ ಸ್ಥಾನ ಮಾನಗಳನ್ನು ಪಡೆಯುವಂತೆ ಮಾಡಿದ ಈ ಸಂಘಕ್ಕೆ ತಾನು ಚಿರಋಣಿ. ಆ್ಯಂಬ್ಯುಲೆನ್ಸ್ ನಿರ್ವಹಣೆ ಮತ್ತು ಉಪಯೋಗವನ್ನು ಚೆನ್ನಾಗಿ ಮಾಡಬೇಕು. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಂಘ ದಾನಿಗಳು ಮತ್ತು ಹಿತೈಷಿಗಳ ಮೂಲಕ ನೆರವಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಮತ್ತು ಕಾಂಗ್ರೆಸ್ ಯುವ ಮುಖಂಡ ಮಂತರ್ ಗೌಡ ಮಾತನಾಡಿ, ಸುವರ್ಣ ಸಾರಥಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಶುಭಕೋರಿದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಎಂಎಲ್‌ಸಿ ಅನುದಾನದಲ್ಲಿ ೨ ಲಕ್ಷ ನೀಡಿದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಆ್ಯಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ ಜರ್ಮಿ ಡಿಸೋಜ ದಂಪತಿಗಳಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಬಿ.ಬಿ. ಭಾರತೀಶ್, ವಿ.ಪಿ. ಶಶಿಧರ್, ಪಿ.ಎಂ. ಲತೀಫ್ ಮಾತನಾಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಪಂಚಾಯಿತಿ ಸದಸ್ಯರಾದ ರಫೀಕ್‌ಖಾನ್, ಆಲಿಕುಟ್ಟಿ, ಸೋಮನಾಥ್, ಮಂಜುಳ (ರಾಸತಿ), ಗೀತಾ, ವಸಂತಿ, ಮಂಗಳ, ಕುಶಾಲನಗರ ಉದ್ಯಮಿ ಮೊಯ್ದು, ಕೃಷಿಕ ರಾಮಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷರುಗಳಾದ ಜಿ.ಎಲ್. ನಾಗರಾಜ್, ಕೆ.ವಿ. ಕಿಟ್ಟಣ್ಣರೈ, ಕೆ.ಎಚ್. ಕೃಷ್ಣಪ್ಪ, ಗೌರವ ಹಂಸ (ಅಚ್ಚುಪ್ಪ), ಎಂ.ಎ. ಉಸ್ಮಾನ್, ಎ.ಎ. ಜಬ್ಬರ್, ಕೆ.ಎಂ. ವಿನೇಶ್, ಅಧ್ಯಕ್ಷ ಪೂವಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಉಪಸ್ಥಿತರಿದ್ದರು.
ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ಸ್ವಾಗತಿಸಿ ಡಿ.ಎಂ. ಮಂಜುನಾಥ್ ನಿರೂಪಿಸಿ, ಸ್ವಾಗತಿಸಿದರು. ಕೊನೆಯಲ್ಲಿ ಝೀ ಕನ್ನಡ ವಾಹಿನಿಯ ಮಹೇಂದರ್ ತಂಡದವರಿAದÀ ಸಂಗೀತ ರಸಮಂಜರಿ ನೃತ್ಯ ತಂಡದಿAದ ನಡೆದ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಸಹಸ್ರಾರು ಮಂದಿ ಸೇರಿ ಕಾರ್ಯಕ್ರಮ ಅಸ್ವಾದಿಸಿದರು. ೫೦ನೇ ವರ್ಷದ ಸುವರ್ಣ ವಾರ್ಷಿಕೋತ್ಸವÀ ಅದ್ಧೂರಿ ಆಯುಧ ಪೂಜಾ ಸಮಾರಂಭದ ಸಲುವಾಗಿ ಸುಂಟಿಕೊಪ್ಪ ಸೆಸ್ಕಾಂ ವತಿಯಿಂದ ನಿರ್ಮಿಸಲಾಗಿದ್ದ ತಾರಕಾಸುರನ ವಧೆ ಜನರನ್ನು ಆಕರ್ಶಿಸಿತು.
ಸುಂಟಿಕೊಪ್ಪ ಪೊಲೀಸ್ ಠಾಣೆ ದೀಪಾಲಂಕಾರದಿAದ ಕಂಗೊಳಿಸಿತ್ತು. ಸಂಘ ಸಂಸ್ಥೆ ಅಲಂಕಾರದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘವು ತನ್ನ ಸಾಧನೆಯ ಪ್ರತಿಬಿಂಬವನ್ನು ಪ್ರತಿನಿಧಿಸುವ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತ ಗೊಳಿಸಲಾಗಿತ್ತು. ವಾಹನ ಅಲಂಕಾರಗಳು ಎಲ್ಲರ ಗಮನ ಸೆಳೆದವು.