ಮಡಿಕೇರಿ, ಅ. ೭: ಮಾಧ್ಯಮ ಸ್ಪಂದನ ತಂಡದ ಮೂಲಕ ಅಗತ್ಯ ಉಳ್ಳವರಿಗೆ ಸದಾ ಆರ್ಥಿಕ ನೆರವು ನೀಡುವುದರ ಮೂಲಕ ಸ್ಪಂದಿಸುತ್ತಿದ್ದ ಮರಗೋಡಿನ ದಾನಿಯೊಬ್ಬರ ಸಂಕಷ್ಟಕ್ಕೆ ಮಾಧ್ಯಮ ಸ್ಪಂದನ ತಂಡವೇ ನೆರವಿನ ಹಸ್ತ ಚಾಚಿದೆ. ಇವರು ಆರ್ಥಿಕವಾಗಿ ತುಂಬಾ ಚೆನ್ನಾಗಿದ್ದವರು. ಮಾಧ್ಯಮ ಸ್ಪಂದನದ ಮನವಿಗೆ ಸ್ಪಂದಿಸಿ ಹಲವರಿಗೆ ಆರ್ಥಿಕ ನೆರವು ನೀಡಿದವರು. ಮರಗೋಡಿನಲ್ಲಿ ಮೊಬೈಲ್, ಮೊಬೈಲ್ ರೀಚಾರ್ಜ್ ಅಂಗಡಿ ಇಟ್ಟುಕೊಂಡಿದ್ದರು. ಆಸ್ಪತ್ರೆಯಲ್ಲಿ ಹಲವು ಶಸ್ತçಚಿಕಿತ್ಸೆಗೆ ಒಳಗಾದ ಬಳಿಕ ಬದುಕಿನ ಚಿತ್ರಣವೇ ಬದಲಾಗಿತ್ತು.

ಸ್ವಾಭಿಮಾನಿ ಆಗಿರುವ ಇವರು ಮಾಧ್ಯಮ ಸ್ಪಂದನದಿAದ ಸಹಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ಆಗಮಿಸಿ ಅಳಲು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಈ ದಾನಿಯ ಸಂಕಷ್ಟಕ್ಕೆ ಸ್ಪಂದಿಸುವAತೆ ಮಾಧ್ಯಮ ಸ್ಪಂದನ ತಂಡ ದಾನಿಗಳಲ್ಲಿ ಮನವಿ ಮಾಡಿತ್ತು. ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ದಾನಿಗಳು ಕೇವಲ ೮ ಗಂಟೆಗಳಲ್ಲಿ ೬೫ ಸಾವಿರ ರೂಪಾಯಿ ನೀಡಿದ್ದರು.

ದಾನವಾಗಿ ಬಂದ ಈ ಹಣವನ್ನು ಹಸ್ತಾಂತರಿಸಲಾಯಿತು. ಸಂಕಷ್ಟದ ಸಮಯದಲ್ಲಿ ತಮ್ಮ ನೆರವಿಗೆ ಬಂದ ಮಾಧ್ಯಮ ಸ್ಪಂದನ ತಂಡ ಮತ್ತು ದಾನಿಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.