ಮಡಿಕೇರಿ, ಅ. ೭: ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆ, ಮಡಿಕೇರಿ ಮತ್ತು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಂಪಾಜೆ ಕೊಡಗು ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ ಚೆಂಬು, ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣೆ ಚಿಕಿತ್ಸೆ ಮತ್ತು ಸಲಹಾ ಶಿಬಿರ ಬಾಲಂಬಿಯ ಪಯಸ್ವಿನಿ ಸೊಸೈಟಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಪಯಸ್ವಿನಿ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲು ಶಿಬಿರಕ್ಕೆ ಚಾಲನೆ ನೀಡಿ, ಗ್ರಾಮೀಣ ಜನತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮತ್ತು ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ತಪಾಸಣೆ ನಡೆಸಿಕೊಳ್ಳುವಂತೆ ಸಲಹೆ ನೀಡಿದರು. ಮಕ್ಕಳ ತಜ್ಞ ಡಾ. ಡಿ.ಸಿ. ರವಿಚಂದ್ರ ಮಾತನಾಡಿ ಗ್ರಾಮ ಗ್ರಾಮಗಳಲ್ಲಿ ಬಡಜನತೆಗೆ ತಜ್ಞ ವೈದ್ಯರಿಂದ ಉಚಿತ ಚಿಕಿತ್ಸೆ ನೀಡುತ್ತಿದ್ದು, ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು. ಶಿಬಿರದಲ್ಲಿ ಮಕ್ಕಳ ತಜ್ಞರಾದ ಡಾ. ಖುಶ್ವಂತ್ ಕೋಳಿಬೈಲು, ಡಾ. ಡಿ.ಸಿ. ರವಿಚಂದ್ರ, ಡಾ. ಕುಮಾರ್, ಚರ್ಮರೋಗ ತಜ್ಞೆ ಡಾ. ಕವನ, ನೇತ್ರ ತಜ್ಞ ಡಾ. ಮಹಮ್ಮದ್ ಅಬ್ದುಲ್ ಕಯೂಮ್, ದಂತತಜ್ಞ ಡಾ. ಸಾಗರ್ ಚಿಕಿತ್ಸೆ ನೀಡಿದರು. ಗ್ರಾಮದ ನೂರಾರು ಜನರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.