ಚೆಯ್ಯಂಡಾಣೆ, ಅ. ೪: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಜಮಾಬಂದಿ ಸಭೆ ನೋಡೆಲ್ ಅಧಿಕಾರಿ ಶೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಳೆದ ೨೦೨೧-೨೨ರಲ್ಲಿ ನಡೆದ ಕಾಮಗಾರಿಗಳ ಮಾಹಿತಿಯನ್ನು ಕಾರ್ಯದರ್ಶಿ ಬಿದ್ದಪ್ಪ ಸಭೆಯಲ್ಲಿ ಮಂಡಿಸಿದರು.

ಇದಕ್ಕೆ ಪವನ್ ತೋಟಂಬೈಲು ಮಾಹಿತಿ ಬಯಸಿದಾಗ ಅಭಿವೃದ್ದಿ ಅಧಿಕಾರಿ ಆಶಾ ಕುಮಾರಿ ರೆಕಾರ್ಡ್ನಲ್ಲಿದ್ದ ಪೂರ್ಣ ದಾಖಲೆ ಹಾಗೂ ಫೋಟೋವನ್ನು ಪ್ರದರ್ಶಿಸಿದರು. ಅಧ್ಯಕ್ಷ ರಾಜೇಶ್ ಅಚ್ಚಯ್ಯ ಮಾತನಾಡಿ ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ -ಗ್ರಾಮೀಣ ವಸತಿ ಯೋಜನೆಯ ಪಲಾನುಭವಿಗಳಿಗೆ ಮನೆ ಮಂಜೂರಾತಿ ಹಾಗೂ ಆದೇಶ ಪತ್ರ ನೀಡಲಾಗಿದೆ. ಆದೇಶ ಪತ್ರ ದೊರೆತವರು ಕೂಡಲೇ ಮನೆ ಕಾಮಗಾರಿ ಆರಂಭಿಸಬೇಕೆAದರು.

ನAತರ ಸಂಜೀವಿನಿ ಒಕ್ಕೂಟದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಮಾಹಿತಿಯ ಬಗ್ಗೆ ತರಗತಿಯನ್ನು ಮಡಿಕೇರಿ ತಾಲೂಕು ವಲಯ ಸಂಯೋಜಕಿ ಪವಿತ್ರ ನಡೆಸಿಕೊಟ್ಟರು. ಇದೆ ಸಂದರ್ಭ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಪಟ್ಟಣಗಳ ಕಸ ವಿಲೇವಾರಿ ಮಾಡಲು ಸಂಜೀವಿನಿ ಒಕ್ಕೂಟಕ್ಕೆ ವಹಿಸಿಕೊಡಲಾಯಿತು. ಈ ಸಂದರ್ಭ ಕರ್ನಾಟಕ ಬ್ಯಾಂಕ್ ಪ್ರತಿನಿಧಿ ಚೇತನ್ ಮಾತನಾಡಿ ಬ್ಯಾಂಕ್‌ನಿAದ ದೊರೆಯುವ ವಿಮಾ ಸೌಲಭ್ಯಗಳÀ ಬಗ್ಗೆ ಗ್ರಾಮಸ್ಥರಿಗೆ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯೆಯರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಕೋಡಿರ ವಿನೋದ್ ನಾಣಯ್ಯ, ಮುಂಡಿಯೋಳAಡ ಈರಪ್ಪ, ಬೆಪುಡಿಯಂಡ ವಿಲೀನ್, ಸುಬೈರ್ ಸಿ.ಇ, ಮಮ್ಮದ್, ಮಂಜುಳಾ, ಪುಷ್ಪ, ಪೆಮ್ಮಂಡ ಕಾವೇರಮ್ಮ, ವಾಣಿ, ಕವಿತಾ, ನೇತ್ರವತಿ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಗಾಯತ್ರಿ, ಸ್ವಾಗತವನ್ನು ಕಾರ್ಯದರ್ಶಿ ಬಿದ್ದಪ್ಪ, ವಂದನೆಯನ್ನು ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ನೆರವೇರಿಸಿದರು.