ವೀರಾಜಪೇಟೆ, ಅ. ೪: ವ್ಯಕ್ತಿಯು ಯಾವುದೇ ಕೆಲಸ ಕಾರ್ಯವನ್ನು, ಯಶಸ್ವಿಯಾಗಿ ನಿಭಾಯಿಸಲು ಶ್ರಮವೆಂಬುದು ಮುಖ್ಯ, ಶ್ರಮದಿಂದಲೇ ಪ್ರಗತಿ ಸಾಧಿಸಬಹುದು ಎಂದು ಕಾವೇರಿ ವಿದ್ಯಾಸಂಸ್ಥೆಗಳ ನಿರ್ದೇಶಕ ಪಿ.ಟಿ. ಸುಭಾಷ್ ಸುಬ್ಬಯ್ಯ ಅವರು ಹೇಳಿದರು.
ಕಾವೇರಿ ಪದವಿಪೂರ್ವ ಕಾಲೇಜು ವೀರಾಜಪೇಟೆಯ ರಾಷ್ಟಿçÃಯ ಸೇವಾ ಯೋಜನ ಘಟಕದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಸುಭಾಷ್ ಸುಬ್ಬಯ್ಯ ಅವರು. ರಾಷ್ಟಿçÃಯ ಸೇವಾ ಯೋಜನ ಘಟಕ ಮತ್ತು ಎನ್.ಸಿ.ಸಿ ಘಟಕಗಳು ಯುವಕರಿಗೆ ಹೊಸ ದೃಷ್ಟಿಕೊನ ನೀಡುವ ಘಟಕಗಳಾಗಿವೆ. ಒಂದು ದೇಶ ರಕ್ಷಣೆಗೆ ಸಿಮಿತವಾದರೆ ಮತ್ತೊಂದು ಸಮಾಜಮುಖಿ ಸೇವೆಗೆ ಕಾರ್ಯನಿರ್ವಹಿಸುತ್ತದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವೀರಾಜಪೇಟೆ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ದೇಶದಲ್ಲೇಡೆ ಭ್ರಷ್ಟಾಚಾರ ಎಲ್ಲೆ ಮೀರಿ ಸಾಗುತ್ತಿದೆ ಯುವ ಸಮೂದಾಯವು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸದೆ ತಡೆಗಟ್ಟಲು ಧಿಟ್ಟವಾಗಿ ಹೋರಾಟ ಮಾಡಬೇಕು ಎಂದರು.
ಕಾವೇರಿ ಕಾಲೇಜು ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಧ್ಯಾರ್ಥಿಗಳ ಜೀವನದಲ್ಲಿ ಶಿಬಿರಗಳು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ವಿದ್ಯಾರ್ಥಿಯನ್ನು ಗುಣಮಟ್ಟದ ನಾಯಕನಾಗಿಸವಲ್ಲಿ ಶಿಬಿರವು ಪ್ರಮುಖ ಪಾತ್ರ ವಹಿಸುತ್ತದೆ. ವಿಧ್ಯಾರ್ಥಿಗಳು ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಂದ ಸೇವಾ ಯೋಜನಾ ಗೀತೆ ಮೂಡಿಬಂದಿತ್ತು, ಕಾಲೇಜಿನ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಕೆ.ಪಿ. ಗಾಯತ್ರಿ ಅವರು ಸ್ವಾಗತಿಸಿದರು. ಉಪನ್ಯಾಸಕ ರಾದ ಎನ್.ಎಂ. ದಮಯಂತಿ ಅವರು ವಂದಿಸಿದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳು ಹಾಜರಿದ್ದರು.