ಮಡಿಕೇರಿ, ಅ. ೪ : ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ರಾಜ್ಯ ಮಟ್ಟದ ಮೈಸೂರು ಡಿವಿಷನ್ ಸಿಎಂ ಕಪ್ ಫುಟ್ಬಾಲ್ ಲೀಗ್‌ನಲ್ಲಿ ಕೊಡಗಿನ ಎಫ್‌ಎಂಸಿ ಕಾಲೇಜು ತಂಡ ಜಯಶಾಲಿಯಾಗುವ ಮೂಲಕ ದಾಖಲೆ ಸೃಷ್ಟಿಸಿದೆ.

೧೯೮೪ ರ ಬಳಿಕ ಇದೇ ಮೊದಲ ಬಾರಿಗೆ ಕೊಡಗು ತಂಡ ಮೈಸೂರು ಡಿವಿಷನ್ ಫುಟ್ಬಾಲ್ ಲೀಗ್‌ನ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

ಜಿಲ್ಲಾ ಮಟ್ಟದ ಪಂದ್ಯಾಟವನ್ನು ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಎಫ್‌ಎಂಸಿ ತಂಡ ಮೈಸೂರು ಡಿವಿಷನ್ ಲೀಗ್‌ನಲ್ಲಿ ಬೆಂಗಳೂರು ನಗರ ವಿರುದ್ಧ ೨-೦, ಬೆಳಗಾಂ ವಿರುದ್ಧ ೧-೦, ಬೀದರ್ ವಿರುದ್ಧ ೩-೦ ಹಾಗೂ ಬೆಂಗಳೂರು ಗ್ರಾಮಾಂತರ ವಿರುದ್ಧ ೧-೨ ಗೋಲುಗಳ ಅಂತರದಿAದ ಗೆಲುವು ಸಾಧಿಸುವ ಮೂಲಕ ರಾಜ್ಯ ದಸರಾ ಅಂಗವಾಗಿ ನಡೆದ ಸಿಎಂ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿ ಯನ್ ತಂಡವಾಗಿ ಹೊರಹೊಮ್ಮಿದೆ. ಎಫ್ ಎಂ ಸಿ ತಂಡಕ್ಕೆ ಮೋಹನ್ ಹಾಗೂ ನಿತಿನ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು.