ವೀರಾಜಪೇಟೆ, ಅ. ೪: ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿವೆ. ಇದರೊಂದಿಗೆ ಅಮ್ಮತ್ತಿಯಿಂದ ವೀರಾಜಪೇಟೆ ಹಾಗೂ ಸಿದ್ದಾಪುರಕ್ಕೆ ಹೋಗುವ ಮುಖ್ಯ ರಸ್ತೆಗಳು ಕಳೆದ ಎರಡು ವರ್ಷಗಳಿಂದ ದುಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಮುಂದಿನ ೧೫ ದಿನಗಳಲ್ಲಿ ಮುಖ್ಯ ರಸ್ತೆಗಳನ್ನು ಸರಿಪಡಿಸದಿದ್ದರೆ ಅಮ್ಮತ್ತಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದೆಂದು ಅಮ್ಮತ್ತಿ ರೈತ ಸಂಘದ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಮ್ಮತ್ತಿ ರೈತ ಸಂಘದ ಗೌರವಾಧ್ಯಕ್ಷ ಕಾವಾಡಿಚಂಡ ಯು.ಗಣಪತಿ ಅವರ ಅಧ್ಯಕ್ಷತೆಯಲ್ಲಿ ಅಮ್ಮತ್ತಿಯ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಅಮ್ಮತ್ತಿನಾಡು ರೈತ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಮ್ಮತ್ತಿಯಿಂದ ಪಾಲಿಬೆಟ್ಟ, ಹೊಸೂರು ಮತ್ತು ಒಂಟಿಯAಗಡಿಗೆ ಹೋಗುವ ರಸ್ತೆಗಳು ವಾಹನ ಸಂಚಾರಕ್ಕೆ ಅಯೋಗ್ಯ ವಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸದ ಕಾರಣ ಪ್ರತಿಭಟನೆ ಅನಿವಾರ್ಯ ವಾಗಿದೆ ಎಂದು ನಿರ್ಧರಿಸಲಾಯಿತು.
ರೈತರಿಗೆ ೧೦ ಹೆಚ್‌ಪಿ ಮೋಟರ್ ಪಂಪ್‌ಸೆಟ್‌ಗೆ ವಿದ್ಯುತ್ ಶುಲ್ಕವನ್ನು ಇತರ ಜಿಲ್ಲೆಗಳಲ್ಲಿ ಮನ್ನಾ ಮಾಡಲಾಗಿದೆ ಆದರೆ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಶುಲ್ಕ ಕಟ್ಟುವಂತೆ ಸೆಸ್ಕಾಂ ಇಲಾಖೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ. ರಾಜ್ಯದ ಇಂಧನ ಸಚಿವರು ವಿದ್ಯುತ್ ಶುಲ್ಕ ಬೇಡ ಎನ್ನುತ್ತಿದ್ದಾರೆ. ಮಂತ್ರಿಗಳು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಈ ಸಂಬAದ ರಾಜ್ಯದ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಿಗೆ ರೈತ ಸಂಘದಿAದ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ರೈತ ಸಂಘದ ಅಧ್ಯಕ್ಷ ಕೇಚಂಡ ಎಂ.ಕುಶಾಲಪ್ಪ ಮಾತನಾಡಿ ಕಾಡಾನೆ ಮತ್ತು ವನ್ಯ ಜೀವಿಗಳಿಂದ ಸಣ್ಣ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಭತ್ತದ ಗದ್ದೆ ಬೆಳೆ ಬಂದಾಗ ಕಾಡಾನೆ ಮತ್ತು ಕಾಡುಹಂದಿಗಳ ಹಾವಳಿ ದಿನ ದಿನಕ್ಕೆ ಹೆಚ್ಚುತ್ತಿದ್ದು ಫಸಲಿಗೆ ಬಂದ ಬೆಳೆ ರೈತನ ಕೈ ಸೇರುವಂತಿಲ್ಲ. ಕಾಫಿ ತೋಟಗಳಲ್ಲಿ ಮಂಗಗಳ ಹಾವಳಿಯಿಂದ ಫಸಲು ನಷ್ಟವಾಗು ತಿದೆ. ಕಾಡುಹಂದಿಗೆ ಗುಂಡುಹೊಡೆ ಯುವ ಅಧಿಕಾರವನ್ನು ಅರಣ್ಯ ಇಲಾಖೆ ರೈತರಿಗೆ ನೀಡುವಂತಾಗ ಬೇಕು. ರೈತರನ್ನು ಅರಣ್ಯ ಇಲಾಖೆ ಕಾಲ ಕಸಕ್ಕಿಂತ ಕೀಳಾಗಿ ನೋಡುತ್ತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ. ಅರಣ್ಯ ಮಂತ್ರಿಗಳು ಕೂಡಲೇ ಎಚ್ಚೆತ್ತುಕೊಂಡು ರೈತರ ಸಂಕಷ್ಟದಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದರು.
ರೈತ ಸಂಘದ ಕಾನೂನು ಸಲಹೆಗಾರ ಬಿ.ಸಿ. ಸುಬ್ಬಯ್ಯ ಅವರು ಮಾತನಾಡಿ ರೈತರಿಗೆ ರಸಗೊಬ್ಬರ ಸರಿಯಾಗಿ ಸಿಗುತ್ತಿಲ್ಲ. ಇದರ ಬಗ್ಗೆ ಅಮ್ಮತ್ತಿಯ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳನ್ನು ಕರೆದು ಸಭೆ ನಡೆಸುವಂತಾಗಬೇಕು ಎಂದಾಗ ಸಭೆಯಲ್ಲಿ ಅನೇಕ ರೈತರು ಧ್ವನಿಗೂಡಿಸಿದರು. ನಂತರ ಸಭೆಯಲ್ಲಿ ಪೌತಿ ಖಾತೆ ಬಗ್ಗೆ ಚರ್ಚೆ ನಡೆದು ಕೊಡಗಿನಲ್ಲಿ ಆಸ್ತಿಯ ಆರ್.ಟಿ.ಸಿ.ಯಲ್ಲಿ ಮರಣ ಹೊಂದಿದವರ ಹೆಸರುಗಳು ಸೇರ್ಪಡೆಗೊಂಡಿದ್ದು ಕೂಡಲೇ ಅದನ್ನು ಸರಿಪಡಿಸಿಕೊಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆಯು ವಂತೆ ತೀರ್ಮಾನಿ ಸಲಾಯಿತು.
ವೇದಿಕೆಯಲ್ಲಿ ರೈತ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ಕುಟ್ಟಂಡ ಎನ್.ಚಿಣ್ಣಪ್ಪ, ಮತ್ತು ಮಾಚಿಮಂಡ ಎಂ.ಉತ್ತಪ್ಪ, ಕಾರ್ಯದರ್ಶಿ ಮನೆಯಪಂಡ ಜಿ.ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಪಳೆಯತಂಡ ಬಿ.ಹರಿ, ಖಜಾಂಚಿ ಪಟ್ಟಡ ಬಿ.ಚಂಗಪ್ಪ, ಸಂಚಾಲಕ ಮಂಡೇಪAಡ ಸಿ.ವಿಜಯ ಮಾತನಾಡಿದರು.