ಮಡಿಕೇರಿ, ಅ. ೪: ಕೊಡಗು ಅರಣ್ಯ ವೃತ್ತದ ವತಿಯಿಂದ ೬೮ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ತಾ. ೭ ರವರೆಗೆ ನಡೆಯಲಿದೆ.

ಜನಸಾಮಾನ್ಯರಲ್ಲಿ ವನ್ಯಜೀವಿ ಸಂರಕ್ಷಣೆ ಹಾಗೂ ಅವುಗಳ ಆವಾಸಸ್ಥಾನದ ಮಹತ್ವದ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಇದಾಗಿದ್ದು, ಮಾನವನ ಸಂತತಿ, ಭೂಮಂಡಲದಲ್ಲಿ ಉಳಿಯಲು ಪರಿಸರ ಹಾಗೂ ಅರಣ್ಯದ ಸಮತೋಲನೆ ಹಾಗೂ ಸುಸ್ಥಿರ ನಿರ್ವಹಣೆ ಅತ್ಯಗತ್ಯವಾಗಿದ್ದು, ಪರಿಸರ ಸಮತೋಲನೆ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಅತ್ಯಮೂಲ್ಯ ವಾಗಿದೆ. ಆದ್ದರಿಂದ ವನ್ಯಜೀವಿ ಸಂರಕ್ಷಣೆಯಿAದ ಮಾನವ ಸಂಕುಲಕ್ಕೆ ಆಗುತ್ತಿರುವ ಪ್ರಯೋಜನ ಮತ್ತು ಪರಿಸರ ಸಮತೋಲನೆಯಲ್ಲಿ ವನ್ಯಜೀವಿಗಳ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಪಕ್ಷಿ ವೀಕ್ಷಣೆ: ಸ್ವಚ್ಛಭಾರತ ಆಂದೋಲನದ ಪ್ರಯುಕ್ತ ಸೋಮವಾರ ಕಾಲೇಜು ವಿದ್ಯಾರ್ಥಿ ಗಳಿಗೆ ಪಕ್ಷಿ ವೀಕ್ಷಣಾ ಕಾರ್ಯಕ್ರಮವು ಮಡಿಕೇರಿ ನಗರದ ಸಮೀಪದಲ್ಲಿರುವ ಬೊಟ್ಲಪ್ಪ ದೇವರ ಕಾಡಿನಲ್ಲಿ ಹವ್ಯಾಸಿ ಪಕ್ಷಿ ಛಾಯಾಗ್ರಕರು ಮತ್ತು ಪಕ್ಷಿ ವೀಕ್ಷಕ ವೀರಾಜಪೇಟೆ ಶ್ರೀಕಂಠರಾವ್ ಅವರ ಸಹಕಾರದಿಂದ ನಡೆಯಿತು.

ತಾ. ೫ ರಂದು ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಲಕಾವೇರಿ, ಮಾಂದಲಪಟ್ಟಿ ಹಾಗೂ ಇರ್ಪುವಿಗೆ ಚಾರಣ ಹಮ್ಮಿಕೊಳ್ಳಲಾಗಿದೆ.

ತಾ.೬ ರಂದು ಬ್ರಹ್ಮಗಿರಿ ವನ್ಯಜೀವಿ ವಲಯದ ಮೂಲಕ ಹಾದುಹೋಗುವ ಅಂತರ ರಾಜ್ಯ ಹೆದ್ದಾರಿಯ ಎರಡು ಬದುವಿನಲ್ಲಿ ಪ್ಲಾಸ್ಟಿಕ್ ನಿರ್ಮೂಲನಾ ಸ್ವಚ್ಛತಾ ಕಾರ್ಯವನ್ನು ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಇಲಾಖಾ ಸಿಬ್ಬಂದಿಗಳ ಸಹಯೋಗದೊಂದಿಗೆ ನಡೆಯಲಿದೆ. ತಾ. ೭ ರಂದು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನ ಸ್ವಚ್ಛತಾ ಕಾರ್ಯ, ಕಾಲು ನಡಿಗೆ, ಸೈಕಲ್ ಜಾಥಾ ಕಾರ್ಯಕ್ರಮ ನಡೆಯಲಿದೆ.

ಅರಣ್ಯ ಭವನದಿಂದ ಸ್ವಾಗತ ಬೆಟ್ಟ ಟ್ರೀ ಪಾರ್ಕ್ವರೆಗೆ ಜಾಥಾ ಮುಖಾಂತರ ಮಡಿಕೇರಿಯನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ಹಾಗೂ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವದ ಸಂದೇಶ ಸಾರುವ ಆಶಯದೊಂದಿಗೆ ಅಂತಿಮವಾಗಿ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭವು ಮಡಿಕೇರಿಯ ಸ್ವಾಗತಬೆಟ್ಟ ಟ್ರೀ ಪಾರ್ಕ್ನಲ್ಲಿ ಆಯೋಜಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಅವರು ತಿಳಿಸಿದ್ದಾರೆ.