ಮಡಿಕೇರಿ, ಅ. ೪: ಬೊಟ್ಟಿಯತ್‌ನಾಡ್ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವರ್ಷಂಪ್ರತಿ ನಡೆಯುವ ಶ್ರೀ ದುರ್ಗಾ ನಮಸ್ಕಾರ ಪೂಜೆ ತಾ. ೫ ರಂದು (ಇಂದು) ವಿಜೃಂಭಣೆಯಿAದ ನಡೆಯಲಿದೆ ಎಂದು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.

ನವರಾತ್ರಿ ಉತ್ಸವದ ಪ್ರಯುಕ್ತ ಕಳೆದ ೯ ದಿನಗಳು ರಾತ್ರಿ ವಿವಿಧ ಫೂಜೆಗಳನ್ನು ನಡೆಸಲಾಗುತ್ತಿದ್ದು ದಸರಾ ಕೊನೆಯ ದಿನವಾದ ವಿಜಯ ದಶಮಿಯಂದು ಬೆಳಿಗ್ಗೆ ೭ಗಂಟೆಯಿAದಲೇ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಮಹಾಮಂಗಳಾರತಿ ಬಳಿಕ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.