ಕುಶಾಲನಗರ, ಅ.೪: ಕುಶಾಲನಗರ ಗಣಪತಿ ದೇವಾಲಯಕ್ಕೆ ದೇವರ ಬೆಳ್ಳಿ ಕವಚವನ್ನು ದಾನಿಗಳು ಹಸ್ತಾಂತರಿಸಿದರು. ಕುಶಾಲನಗರದ ಉದ್ಯಮಿ ಎಸ್.ಟಿ ಕೃಷ್ಣರಾಜು ಮತ್ತು ಮಕ್ಕಳು ದೇವಾಲಯದ ಅಧ್ಯಕ್ಷರಾದ ವಿ.ಎನ್ ವಸಂತ ಕುಮಾರ್ ಮತ್ತು ಪ್ರಧಾನ ಅರ್ಚಕರಾದ ಆರ್.ಕೆ ನಾಗೇಂದ್ರ ಅವರ ಮೂಲಕ ಬೆಳ್ಳಿ ಕವಚವನ್ನು ದೇವಾಲಯಕ್ಕೆ ಹಸ್ತಾಂತರ ಮಾಡಿದರು. ಈ ಸಂಬAಧ ದೇವಾಲಯದಲ್ಲಿ ಗಣಪತಿಗೆ ಹೋಮ ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಗಣಪತಿಯ ೩೨ ಅವತಾರಗಳಲ್ಲಿ ಈಗಾಗಲೇ ೬ ಅವತಾರಗಳ ಬೆಳ್ಳಿ ಕವಚಗಳನ್ನು ದಾನಿಗಳು ನೀಡಿದ್ದು, ೭ ನೇ ಅವತಾರ ವಿಜಯ ವಿನಾಯಕ ಅವತಾರ ಇದಾಗಿದೆ ಎಂದು ಪ್ರಧಾನ ಅರ್ಚಕರಾದ ಆರ್,ಕೆ ನಾಗೇಂದ್ರ ಅವರು ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಶಿಲ್ಪಿ ಕಾರ್ಕಳದ ಸಚಿನ್, ದಾನಿಗಳಾದ ಕೃಷ್ಣರಾಜು ದಂಪತಿಗಳು, ಕುಟುಂಬ ಸದಸ್ಯರು ಇದ್ದರು.