ಸುಂಟಿಕೊಪ್ಪ, ಅ. ೩: ಸುಂಟಿಕೊಪ್ಪ ವಾಹನ ಚಾಲಕರ ಸಂಘದಿAದ ಆಯುಧ ಪೂಜೆಯ ಸುವರ್ಣ ಮಹೋತ್ಸವ ಆಚರಣೆ ತಾ. ೪ ರಂದು (ಇಂದು) ನಡೆಯಲಿದೆ.
ಜಾತಿ ಮತ ಧರ್ಮ ಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಸಂಭ್ರಮದಿAದ ಆಯುಧ ಪೂಜೆಯನ್ನು ವಾಹನ ಚಾಲಕರ ಸಂಘದವರು ನಡೆಸಿಕೊಂಡು ಬರುತ್ತಿರುವುದು ಇಲ್ಲಿನ ವೈಶಿಷ್ಠö್ಯವಾಗಿದೆ.
ಕಳೆದ ೩ ವರ್ಷದಲ್ಲಿ ಪ್ರಕೃತಿ ವಿಕೋಪ, ಕೊರೊನಾ ಮಹಾಮಾರಿ ಯಿಂದ ಆಯುಧ ಪೂಜೆಯನ್ನು ಸರಳವಾಗಿ ಆಚರಿಸಲಾಗಿತ್ತು.
ತಾ. ೪ ರಂದು (ಇಂದು) ಸಂಜೆ ೬ ಗಂಟೆಗೆ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ೫೦ನೇ ವರ್ಷದ ಸುವರ್ಣ ವಾರ್ಷಿಕೋತ್ಸವದ ಅದ್ಧೂರಿ ಆಯುಧಪೂಜೆ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿರುವರು. ಉದ್ಘಾಟನೆಯನ್ನು ಮೈಸೂರು ಕೊಡಗು ಕ್ಷೇತ್ರದ ಸಂಸದ ಪ್ರತಾಪ್‌ಸಿಂಹ ನೆರವೇರಿಸಲಿರುವರು, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜರ್ಮಿಡಿಸೋಜ, ಮಾಜಿ ಸಚಿವ ಬಿ.ಎ. ಜೀವಿಜಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ. ಸ್ಮರಣ ಸಂಚಿಕೆ ‘ಸುವರ್ಣ ಸಾರಥಿ’ಯನ್ನು ಕೊಡಗು ಜಿಲ್ಲಾಡಳಿತ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಹಾಗೂ ಕಾಂಗ್ರೆಸ್ ಯುವ ಮುಖಂಡ ಡಾ. ಮಂಥರ್‌ಗೌಡ ಬಿಡುಗಡೆಗೊಳಿಸಲಿರುವರು.
ಅತಿಥಿಗಳಾಗಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಕಾಫಿಬೆಳೆಗಾರ ವಿನೋದ್ ಶಿವಪ್ಪ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎ.ಸಿ. ಹಸೈನಾರ್ ಹಾಜಿ, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕುಂದಾಪುರದ ಸುಧಾಕರ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಕುಶಾಲನಗರದ ನೆಕ್ಸ್÷್ಟಸ್ಟೇ ಎಕ್ಸೆಲೆನ್ಸಿ ಮೊಯಿದು, ಸುಂಟಿಕೊಪ್ಪ ಅತ್ತೂರ್ ತೋಟ ಜಗನಾಥ್ ಶೆಣೈ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಬೆಳೆಗಾರ ಆನಂದ ಬಸಪ್ಪ, ಜೆ.ಡಿಎಸ್. ಮುಖಂಡ ನಾಪ್ಪಂಡ ಮುತ್ತಪ್ಪ, ಕೃಷಿಕ ರಾಮಣ್ಣ ಎ.ಎಸ್., ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್ ಆಗಮಿಸಲಿರುವರು.
ವರ್ಕ್ಶಾಪ್ ಅಲಂಕಾರ ಸ್ಪರ್ಧೆ, ಕಚೇರಿ ಮತ್ತು ಸಂಘ ಸಂಸ್ಥೆಗಳ ಅಲಂಕಾರ ಸ್ಪರ್ಧೆ, ಅಂಗಡಿ ಮಳಿಗೆ ಅಲಂಕಾರ ಸ್ಪರ್ಧೆ, ೬ ಚಕ್ರ ವಾಹನಗಳ ಅಲಂಕಾರ ಸ್ಪರ್ಧೆ, ೪ ಚಕ್ರ ವಾಹನಗಳ ಅಲಂಕಾರ ಸ್ಪರ್ಧೆ ಹಾಗೂ ಆಟೋರಿಕ್ಷಾ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ.
ಸಂಗೀತ ರಸಮಂಜರಿ: ಝೀ ಕನ್ನಡ ಖ್ಯಾತಿಯ ಸ.ರಿ.ಗ.ಮ.ಪ. ಜ್ಯೂರಿ ಖ್ಯಾತಿಯ ಸಾವಿರ ಹಾಡುಗಳ ಸರದಾರ ಮಹೇಂದರ್ ಮತ್ತು ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ, ಝೀ ಕನ್ನಡ ಖ್ಯಾತಿಯ ಡ್ಯಾನ್ಸ್ ಟ್ರೂಪ್‌ನಿಂದ ನೃತ್ಯ ಪ್ರದರ್ಶನ ಜನಮನ ತಣಿಸಲಿದೆ.