ಮೂರ್ನಾಡು, ಅ. ೩: ಮೂರ್ನಾಡು ಪಟ್ಟಣ ಅದ್ಧೂರಿ ಆಯುಧ ಪೂಜಾ ಸಮಾರಂಭಕ್ಕೆ ಸಜ್ಜಾಗಿದ್ದು, ಇಲ್ಲಿನ ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾಗಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ ೨೯ನೇ ವರ್ಷದ ಆಯುಧ ಪೂಜೆಯ ಸಂಭ್ರಮಾಚರಣೆ ತಾ. ೪ ರಂದು (ಇಂದು) ನಡೆಯಲಿದೆ.

ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯೋಜಿಸಲಾ ಗಿರುವ ವಿಜೃಂಭಣೆಯ ಆಯುಧ ಪೂಜಾ ಕಾರ್ಯಕ್ರಮವು ಅಪರಾಹ್ನ ೨.೩೦ ಗಂಟೆಗೆ ಅಲಂಕೃತ ವಾಹನ ಗಳಿಗೆ ಸಾಮೂಹಿಕ ಪೂಜೆಯೊಂದಿಗೆ ಪ್ರಾರಂಭವಾಗಲಿದೆ. ನಂತರ ಮುಖ್ಯ ರಸ್ತೆಯಲ್ಲಿ ಅಲಂಕೃತ ವಾಹನಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಯಲ್ಲಿ ಅಲಂಕೃತ ವಾಹನಗಳೊಂದಿಗೆ ವಿಶೇಷವಾಗಿ ಈ ವರ್ಷ ಹುಣಸೂರಿನ ಮಹದೇಶ್ವರ ಯುವಕರ ಕಲಾ ತಂಡದಿAದ ಗೊಂಬೆ ಕುಣಿತ ಮತ್ತು ವಾದ್ಯಗೋಷ್ಠಿಯೂ ಇರಲಿದೆ.

ಸಂಜೆ ವೇಳೆಗೆ ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಎಸ್. ಅರುಣ್ ರೈ (ಬಾಬಾ) ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೂರ್ನಾಡು ಗ್ರಾ.ಪಂ. ಅಧ್ಯಕ್ಷೆ ಸುಜಾತ ಚಂದ್ರಶೇಖರ್, ಉಪಾಧ್ಯಕ್ಷೆ ಮುಂಡAಡ ವಿಜು ತಿಮ್ಮಯ್ಯ, ಮಡಿಕೇರಿ ಆರ್.ಆರ್ ಆಸ್ಪತ್ರೆಯ ವೈದ್ಯ ಡಾ. ನವೀನ್ ಕುಮಾರ್ ಬಿ.ಸಿ, ಕೊಡಗು ವೈದ್ಯಕೀಯ ಆಸ್ಪತ್ರೆಯ ಉಪ ಪ್ರೊ. ಡಾ. ಅಯ್ಯಪ್ಪ ಡಿ.ಎನ್, ಪ್ರಮುಖರಾದ ಬಡುವಂಡ ಅರುಣ್ ಅಪ್ಪಚ್ಚು, ಪೆಬ್ಬಾಟಂಡ ಎ. ಪೆಮ್ಮಯ್ಯ, ಮುಕ್ಕಾಟೀರ ರವಿ ಚೀಯಣ್ಣ, ಕೆರೆಮನೆ ಭರತ್ ನಾಯಕ್, ದೇರಜೆ ಟಿ. ಬಿದ್ದಪ್ಪ, ನೆರವಂಡ ಸಂಜಯ್ ಪೂಣಚ್ಚ, ಸಿ.ಎಂ. ಮುನೀರ್, ಎನ್.ಕೆ. ಕಂಞರಾಮ, ಉಮೇಶ್ ಬಂಗೇರ ಇವರುಗಳು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಾವಿತ್ರಿಬಾಯಿ ಪುಲೆ ರಾಷ್ಟç ಪ್ರಶಸ್ತಿ ವಿಜೇತೆ ಹೆಚ್.ಎನ್. ಶಾಂತಿ ಮತ್ತು ಮೂರ್ನಾಡು ಕೊರೊನಾ ವಾರಿರ‍್ಸ್ ಸಜೀವ, ಮೋಹನ್, ನವೀನ್, ಪ್ರವೀಣ್, ಕುಟ್ಟಪ್ಪ ಮತ್ತು ದಿನೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು. ಅಲಂಕೃತ ಗೊಂಡ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು.

ರಾತ್ರಿ ೮.೩೦ ಗಂಟೆಯಿAದ ಮೈಸೂರಿನ ಡೈಮಂಡ್ ಮಾಯಾ ಜಾದುಗಾರ್ ಅವರಿಂದ ಜಾದೂ ಪ್ರದರ್ಶನ ಮತ್ತು ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. -ಟಿ.ಸಿ.ಎನ್.