ಚೆಟ್ಟಳ್ಳಿ, ಅ. ೨: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ಕೊಡಗು ಜಿಲ್ಲೆಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಹುತಾತ್ಮರ ಚೌಕ ನಿರ್ಮಾಣಗೊಳ್ಳುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನಿತ್ವ ಕುಲಪತಿಗಳಾದ ಪ್ರೊಫೆಸರ್ ಸುಬ್ರಮಣ್ಯ ಎಡಪಡಿತ್ತಾಯ ಮಾಹಿತಿ ನೀಡಿದರು.

ಕಾಲೇಜು ಸಭಾಂಗಣದಲ್ಲಿ ಕೊಡವ ಪಠ್ಯಪುಸ್ತಕ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನಿಂದ ಭಾರತಾಂಬೆಯ ಸೇವೆ ಸಲ್ಲಿಸಿ ವೀರ ಮರಣವಪ್ಪಿದ ಎಲ್ಲಾ ಸೈನಿಕರ ಹೆಸರು, ಪದವಿ, ಕೊಡಗಿನಲ್ಲಿ ಯಾವ ಕುಟುಂಬಕ್ಕೆ ಸೇರಿದವರು, ಊರು, ಇಸವಿ, ಮರಣವಪ್ಪಿದ ಜಾಗದ ಮಾಹಿತಿ ಎಲ್ಲವೂ ಕೂಡ ಇಲ್ಲಿ ಲಭ್ಯವಾಗುತ್ತದೆ ಅಂದರು. ಈ ಎಲ್ಲಾ ಮಾಹಿತಿಯನ್ನು ‘ವಾಲ್ ಆಫ್ ಫೇಮ್’ ಎಂಬ ಶಿರೋನಾಮೆಯಡಿ ಸ್ಮಾರಕದ ಹಿಂಬದಿಯ ಕಲ್ಲಿನ ಗೋಡೆಯಲ್ಲಿ ಪ್ರತಿಯೊಬ್ಬ ವೀರ ಹುತಾತ್ಮ ಸೈನಿಕನಿಗೆ ಒಂದೊAದು ಸಣ್ಣ ಗಾತ್ರದ ಕಲ್ಲನ್ನು ಅವರ ಹೆಸರಿನಲ್ಲಿ ಅಳವಡಿಸಲಾಗುವುದು.

ಆದುದರಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳು

(ಮೊದಲ ಪುಟದಿಂದ) ಹಾಗೂ ಇತರರು ಕೊಡಗಿನ ಎಲ್ಲಾ ವೀರ ಸೈನಿಕರ ಬಗ್ಗೆ ಮಾಹಿತಿ ಪಡೆದಂತಾಗುವುದು ಮತ್ತು ಸ್ಮಾರಕವು ಸುಮಾರು ೮೦೦ ಚದರದಲ್ಲಿ ಸಂಪೂರ್ಣ ಕಲ್ಲು ಹಾಗೂ ಗ್ರಾನೈಟ್‌ನಿಂದ ನಿರ್ಮಾಣಗೊಳ್ಳುತ್ತಿದ್ದು ಸ್ಮಾರಕದ ಮಧ್ಯದಲ್ಲಿ ನಾಲ್ಕು ಕಾಲಿನ ಎಂಟು ಅಡಿಯ ಸ್ತಂಭದಲ್ಲಿ ಅಶೋಕ ಲಾಂಛನವನ್ನು ಇರಿಸಲಾಗುವುದು ಎಂದರು.

ಕೊಡಗು ಜಿಲ್ಲೆಯು ವೀರರ ನಾಡಾಗಿದ್ದು ಜಿಲ್ಲೆಯ ಎಲ್ಲಾ ಮೂಲೆಗಳಲ್ಲಿಯು ದೇಶಸೇವೆಯ ಒಂದೊAದು ಕಥೆಗಳಿವೆ. ಆದುದರಿಂದ ಕೊಡಗು ಜಿಲ್ಲೆಯಲ್ಲಿ ಸುಮಾರು ೧೦೪ ಗ್ರಾಮ ಪಂಚಾಯಿತಿ ಗಳಿದ್ದು, ಅವುಗಳಲ್ಲಿ ಇದುವರೆಗೂ ೯೪ ಗ್ರಾಮ ಪಂಚಾಯಿತಿಗಳಿAದ ಸಂಗ್ರಹಿಸಿದ ಮಣ್ಣನ್ನು ತಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ಈಗಾಗಲೇ ತಂದು ಇರಿಸಲಾಗಿದೆ. ಇನ್ನುಳಿದ ಗ್ರಾಮ ಪಂಚಾಯಿತಿಗಳಿAದಲೂ ಸಹ ಮಣ್ಣನ್ನು ಸಂಗ್ರಹ ಮಾಡಿ ದೇಶದ ರಕ್ಷಣೆಗಾಗಿ ತ್ಯಾಗ ಬಲಿದಾನದ ಮೂಲಕ ಹುತಾತ್ಮರಾದ ನಮ್ಮ ಕೊಡಗಿನ ಹೆಮ್ಮೆಯ ವೀರ ಯೋಧರ ಸ್ಮಾರಕದ ಒಳಗೆ ಸುರಿದು ಈ ಮೂಲಕ ಆ ಸ್ಮಾರಕಕ್ಕೆ ಒಂದು ಕಲೆ ತುಂಬುವ ಸಣ್ಣ ಪ್ರಯತ್ನ ಕೂಡ ನಡೆಯುತ್ತಿದೆ.

ಈ ಸ್ಮಾರಕವನ್ನು ದೇಶಭಕ್ತಿ ಮತ್ತು ದೇಶಾಭಿಮಾನವನ್ನು ಹೊಂದಿರುವ ಕೊಡುಗೈ ದಾನಿಗಳಿಂದ ಸಂಗ್ರಹಿಸಿದ ಹಣದಿಂದಲೇ ಈಗಾಗಲೇ ನಿಗದಿಪಡಿ ಸಿರುವ ಕಾಲೇಜಿನ ಆವರಣದಲ್ಲಿ ‘ಹುತಾತ್ಮರ ಚೌಕ'ದ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು. ದೇಶದ ಬಗೆಗಿನ ಅಪಾರವಾದ ಪ್ರೇಮ, ಸೈನಿಕರ ಬಗ್ಗೆ ಅಭಿಮಾನವನ್ನು, ಮುಂದಿನ ಪೀಳಿಗೆಗೆ ಉಳಿಸಿಕೊಡುವ ನಿಟ್ಟಿನಲ್ಲಿ,ಈ ಕೆಲಸ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಆರ್ಥಿಕ ನೆರವಿನ ಅವಶ್ಯಕತೆ ಇದ್ದು, ದಾನಿಗಳು ಸ್ವಇಚ್ಛೆಯಿಂದ ಮುಂದೆ ಬಂದು ಸಹಕಾರ ನೀಡಿದರೆ ಒಂದು ಉತ್ತಮ ಮತ್ತು ಶಾಶ್ವತವಾದ 'ಹುತಾತ್ಮರ ಚೌಕ'ವು ಐತಿಹಾಸಿಕವಾಗಿ ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಿ ಉಳಿಯುತ್ತದೆ ಎಂದು ನುಡಿದರು.

ಈ ಸಂದರ್ಭ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಂಗಳೂರು ವಿವಿ ಕುಲಸಚಿವರಾದ ಡಾ. ಸಿ.ಕೆ. ಕಿಶೋರ್, ಕೊಡವ ಸ್ನಾತಕೋತರ ವಿಭಾಗದ ಸಂಯೋಜಕ ಎಂ.ಎನ್. ರವಿಶಂಕರ್, ಕೊಡವ ಪಠ್ಯಕ್ರಮ ರಚನ ಸಮಿತಿ ಸಂಚಾಲಕ ಚಂದ್ರು ಹೆಗಡೆ, ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.