ಮಡಿಕೇರಿ, ಅ. ೨: ಚೆಟ್ಟಳ್ಳಿಯ ಚೇರಳ ಗೌಡ ಸಂಘದ ೧೪ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಅವಿರತ ಶ್ರಮದಿಂದ ಮಾತ್ರ ಪ್ರತಿ ಕ್ಷೇತ್ರದಲ್ಲಿ ಗೆಲುವು ಸಾಧ್ಯ. ಸಮಾಜ ನಮಗೆ ಏನು ಮಾಡಿದೆ ಎಂದು ಕೇಳುವ ಬದಲು, ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದನ್ನು ಚಿಂತನೆ ನಡೆಸಬೇಕು ಎಂದರು.

ಹಾಕಿ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ನಂತರ ಅಂತರಾಜ್ಯ ಕ್ರೀಡಾಕೂಟದಲ್ಲಿ ಹೆಚ್ಚಿನ ಗೋಲುಗಳಿಸಿ ಖೇಲೋ ಇಂಡಿಯಾ ಟೂರ್ನಮೆಂಟ್‌ನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಸಂಘದ ಸದಸ್ಯ ಮರದಾಳು ಗೋಪಾಲ ಅವರ ಪುತ್ರಿ ಯಶಿಕಾ, ಟೇಕ್ವಾಂಡೋ ಕ್ರೀಡೆಯಲ್ಲಿ ರಾಷ್ಟçಮಟ್ಟದಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ಪಡೆದುಕೊಂಡ ಸಂಘದ ಸದಸ್ಯ ಕೊಳಂಬೇರ ಚೇತನ್ ಅವರ ಪುತ್ರಿ ಚಾರ್ವಿ ಹಾಗೂ ಸಂಘದ ಅಧ್ಯಕ್ಷ ಅಯಂಡ್ರ ರಾಘವಯ್ಯ ಅವರನ್ನು ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹೊಸಮನೆ ಟಿ. ಪೂವಯ್ಯ, ವಿಶೇಷ ಸಲಹೆಗಾರ ಮೇಚನ ವಾಸು, ಉಪ ಕಾರ್ಯದರ್ಶಿಗಳಾದ ನೂಜಿಬೈಲು ನಾಣಯ್ಯ, ಮರದಾಳು ಜನಾರ್ಧನ, ನಿರ್ದೇಶಕರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಮುಕ್ಕಾಟಿರ ಪಿ. ಲಿಖಿತ ಮತ್ತು ಪೇರಿಯನ ರಕ್ಷಿತಾ ಪ್ರಾರ್ಥಿಸಿದರು. ಸಂಘದ ಖಜಾಂಚಿ ಮುಕ್ಕಾಟಿರ ಪಳಂಗಪ್ಪ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಆಜೀರ ಧನಂಜಯ ೨೦೨೧-೨೨ನೇ ಸಾಲಿನ ವಾರ್ಷಿಕ ವರದಿಯನ್ನು ಮತ್ತು ಉಪ ಖಜಾಂಚಿ ಪೇರಿಯನ ಉದಯ ಕುಮಾರ್ ಲೆಕ್ಕ ಪರಿಶೋಧನಾ ವರದಿ ಯನ್ನು ಸಭೆಯಲ್ಲಿ ಮಂಡಿಸಿದರು. ಕಾರ್ಯದರ್ಶಿ ಸಿ. ಆಜೀರ ಧನಂಜಯ ಕಾರ್ಯಕ್ರಮ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಪೇರಿಯನ ಪೂಣಚ್ಚ ವಂದಿಸಿದರು. ರಾಷ್ಟçಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.