ಮುಳ್ಳೂರು, ಅ. ೨: ಸಮೀಪದ ಕೊಡ್ಲಿಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸಿ.ವಿ. ಶಂಭುಲಿAಗಪ್ಪ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಕೆ.ಆರ್. ವಿರೂಪಾಕ್ಷಯ್ಯ ಕಳೆದ ಸಾಲಿನ ವಾರ್ಷಿಕ ವರದಿ, ಆಡಳಿತ ಮಂಡಳಿಯ ವಾರ್ಷಿಕ ವರದಿ ಮತ್ತು ಸದರಿ ಸಾಲಿನ ಲೆಕ್ಕಪರಿಶೋಧನಾ ವರದಿ ಮತ್ತು ಮುಂದಿನ ಆಯವ್ಯಯವನ್ನು ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ಸಂಘವು ಗೋಕುಲ ಕಂಪೆನಿಯ ನಕಲಿ ರಸಗೊಬ್ಬರವನ್ನು ರೈತ ಸದಸ್ಯರಿಗೆ ವಿತರಣೆ ಮಾಡಿರುವ ಕುರಿತು ಸಂಘದ ಸದಸ್ಯರಾದ ಸುದೀಂದ್ರಕುಮಾರ್, ಕ್ಯಾತಿ ಕುಮಾರಸ್ವಾಮಿ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿ ನಕಲಿ ರಸಗೊಬ್ಬರ ಖರಿದಿಸಿ ನಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಹಣ ಹಿಂತುರಿಗಿಸುವAತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಂಘದ ಹಿರಿಯ ನಿರ್ದೇಶಕ ಬಿ.ಕೆ. ಚಿಣ್ಣಪ್ಪ, ಜಿಲ್ಲೆಯ ಸಂಘಗಳು ಇದೆ ಕಂಪೆನಿಯ ರಸಗೊಬ್ಬರವನ್ನು ಮಾರಾಟ ಮಾಡಿದ್ದು, ಆದರೆ ಇದು ನಕಲಿ ರಸಗೊಬ್ಬರ ಎಂದು ಕೃಷಿಕರು ಸಂಘಗಳಿಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಗೊಬ್ಬರ ದಾಸ್ತಾನು ಮಾಡಿರುವ ಎಲ್ಲಾ ಸಂಘಗಳ ಅಹವಾಲು ಪಡೆದು ಜಿಲ್ಲಾ ಕೇಂದ್ರ ಬ್ಯಾಂಕ್ ನಕಲಿ ರಸಗೊಬ್ಬರ ವಿಷಯವಾಗಿ ಗೋಕುಲ್ ಕಂಪೆನಿ ವಿರುದ್ಧ ದೂರು ದಾಖಲಿಸಿ ಸರಕಾರ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು. ಸಂಸ್ಥೆಯಿAದ ಹಣ ಹಿಂತಿರುಗಿಸುವ ಭರವಸೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಭುವನೇಶ್, ನಿರ್ದೇಶಕರಾದ ಮೋಹನ್, ಅಶೋಕ್, ರಾಮಕೃಷ್ಣ, ಶಿವಣ್ಣ, ಚನ್ನಕೇಶವ, ಯತೀಶ್, ನೇತ್ರಾವತಿ, ಚನ್ನಮಣಿ, ನಾಮ ನಿರ್ದೇಶಕ ಶಿವಲಿಂಗ ಸಂಘದ ಸಿಬ್ಬಂದಿ ಪುಟ್ಟರಾಜು, ಶರತ್ ಹಾಜರಿದ್ದರು.