ಮಡಿಕೇರಿ, ಅ. ೧: ಯು.ಎ.ಇ ಯಲ್ಲಿ ನೆಲೆಸಿರುವ ಅರೆಭಾಷೆ ಗೌಡ ಕುಟುಂಬದವರು ಇತ್ತೀಚೆಗೆ ಅಜ್ಮಾನ್ ಬೀಚ್ ಹೋಟೆಲ್‌ನಲ್ಲಿ ಕೈಲ್ ಮುಹೂರ್ತ ಸಮಾರಂಭವನ್ನು ಆಚರಿಸಿದರು.
ಆಯುಧ ಪೂಜೆಯಿಂದ ಸಮಾರಂಭ ಪ್ರಾರಂಭಿಸಿ, ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ ಅವರು ಸೇರಿದಂತೆ ಹಲವಾರು ಕೊಡಗು ಗೌಡ ಜನಾಂಗದ ಪ್ರಮುಖರು ಹಾಗೂ ಹಿತೈಷಿಗಳು ವೀಡಿಯೊ ಮುಖಾಂತರ ಶುಭ ಹಾರೈಸಿದರು.
ಸಮಿತಿ ಸದಸ್ಯರಾದ ಆನೇರ, ಬೆಳ್ಯನ, ಗುಡ್ಡನ, ಕಡ್ಲೆರ, ಕಲ್ಲಂಬಿ, ಕರ್ಣಯ್ಯನ, ಕತ್ರಿಕೊಲ್ಲಿ, ಕುದುಪಜೆ, ಕೊಂಪುಳಿರ, ಮುಕ್ಕಾಟಿರ, ಮೊಟ್ಟನ ಕುಟುಂಬದವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ಏರ್ಪಡಿಸಲಾಗಿತ್ತು.
ಅಲ್ಲಿ ನೆರೆದ ಎಲ್ಲಾ ಕೊಡಗು ಗೌಡ ಬಾಂಧವರು ಸಕ್ರಿಯವಾಗಿ ಭಾಗವಹಿಸಿ, ಅದ್ಧೂರಿಯಿಂದ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಿದರು.