ಮಡಿಕೇರಿ, ಅ. ೧: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಮಹಿಳಾ ದಸರಾ ಪ್ರಯುಕ್ತ ದಸರಾ ಸಾಂಸ್ಕೃತಿಕ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಿದವು.

ನಗರಸಭಾ ಸದಸ್ಯೆಯರಿಂದ ಸ್ವಾಗತ ನೃತ್ಯ, ಕೊಡವ ಪೊಮ್ಮಕ್ಕಡ ಕೂಟದಿಂದ ಕಲಾ ವೈವಿಧ್ಯ, ಮಂಗಳೂರಿನ ವೈಷ್ಣವಿ ಭಟ್ ಅವರಿಂದ ಸ್ಯಾಕ್ಸೊ ಫೋನ್ ವಾದನ, ಗೋಣಿಕೊಪ್ಪ ನಿಸರ್ಗ ಕಲಾ ತಂಡದಿAದ ನೃತ್ಯ, ಕೊಡಗು ಜಿಲ್ಲಾ ಸಹಕಾರಿ ಮಹಿಳಾ ನೌಕರರಿಂದ ನೃತ್ಯ ವೈವಿಧ್ಯ, ಹಿಂದೂ ಮಲಯಾಳಿ ಸಂಘದಿAದ ತಿರುವಾದಿರ ಕಳಿ, ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಯಕ್ಷಗಾನ ವೈಭವ, ಲಯನ್ಸ್ ಕ್ಲಬ್ ಸದಸ್ಯೆಯರಿಂದ ದಾಂಡಿಯಾ ನೃತ್ಯ, ಪ್ರೀತಾಕೃಷ್ಣ ತಂಡದಿAದ ನೃತ್ಯ ವೈವಿಧ್ಯ, ಮೈಸೂರಿನ ಗಾನಲಹರಿ ತಂಡದ ದಿವ್ಯಾರಾಮಚಂದ್ರ, ಶರಥಿ ಪಾಟೀಲ್ ಅವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮಗಳು ನಡೆದವು.