ವೀರಾಜಪೇಟೆ, ಅ. ೧: ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ಇವರ ೧೫ನೇ ವರ್ಷದ ಆಯುಧ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಾ. ೪ ರಂದು ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕುಂಬೇಯAಡ ಸುರೇಶ್ ದೇವಯ್ಯ ಹೇಳೀದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಘದಲ್ಲಿ ೧೨೦ ಸದಸ್ಯರಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಸಾಮೂಹಿಕ ಆಯುಧ ಪೂಜೆಯನ್ನು ನಡೆಸುತ್ತಿದ್ದು, ಕಳೆದ ೪ ವರ್ಷದಿಂದ ಪ್ರಕೃತಿ ವಿಕೋಪ ಹಾಗೂ ಕೊರೊನಾದಿಂದಾಗಿ ಅದ್ದೂರಿ ಆಚರಣೆಗೆ ತೊಡಕು ಉಂಟಾಯಿತು. ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಿದ್ದು ಅಂದು ಪೂರ್ವಾಹ್ನ ೧೦.೩೦ ಗಂಟೆಗೆ ಸಂಘದ ಕಚೇರಿಯಲ್ಲಿ ಸಾಮೂಹಿಕ ಆಯುಧ ಪೂಜೆ. ಅಪರಾಹ್ನ ೧೨.೩೦ ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ, ಸಂಜೆ ೫ ಗಂಟೆಗೆ ಸಭಾ ಕಾರ್ಯಕ್ರöಮ ನಡೆಯಲಿದೆ. ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ನಗರ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಗಣಪತಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ ರಾಜೇಶ್, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಡಾಲು, ಕಾಫಿ ಬೆಳೆಗಾರ ಪಟ್ಟಚೇರಿರ ಪೂಣಚ್ಚ, ಬೊಳ್ಳಚಂಡ ರಮೇಶ್, ಬಿ.ವಿ ಹೇಮಂತ್, ವಿ.ಎಸ್ ದಿನೇಶ್ ಉಪಸ್ಥಿತಲಿರುವರು ಎಂದು ಹೇಳಿದರು.
ಸಂಜೆ ೭ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಬಸ್ ಕಾರ್ಮಿಕರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗುವುದು. ರಾತ್ರಿ ೯ ಗಂಟೆಗೆ ಸ್ಥಳೀಯ ಕಲಾ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ೧೦ ಗಂಟೆಗೆ ಡಿ.ಜೆ ನೈಟ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಖಜಾಂಚಿ ವಿ.ಎ. ದಿನೇಶ್ ಉಪಸ್ಥಿತರಿದ್ದರು.