*ಗೋಣಿಕೊಪ್ಪ, ಸೆ. ೨೯: ಕಾವೇರಿ ಕಲಾವೇದಿಕೆಯಲ್ಲಿ ನಡೆದ ೭ನೇ ವರ್ಷದ ಗೋಣಿಕೊಪ್ಪ ಮಹಿಳಾ ದಸರಾದ ಅಂಗವಾಗಿ ಸಾಧಕರು ಹಾಗೂ ಕೊರೊನ ವಾರಿಯರ್ಸ್ಗಳಿಗೆ ಮಹಿಳಾ ದಸರಾ ಅಧ್ಯಕ್ಷೆ ಚೈತ್ರ ಬಿ. ಚೇತನ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಸನ್ಮಾನಿಸಿದರು.

೪೪ನೇ ದಸರಾ ಜನೋತ್ಸವ ಅಂಗವಾಗಿ ಆಯೋಜಿಸಿದ್ದ ಮಹಿಳಾ ದಸರಾದಲ್ಲಿ ಚಲನ ಚಿತ್ರ ನಟಿ ಬಲ್ಲಚಂಡ ಅಕ್ಷಿತಾ ಬೋಪಯ್ಯ, ಶ್ರೀ ರೋಗ ತಜ್ಞೆ ಡಾ. ಗ್ರೀಷ್ಮಾ ಬೋಜಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಮಲ್ಚೀರ ಯಶೋಧ ದೇವಯ್ಯ, ರಾಷ್ಟçಮಟ್ಟದ ಆಟಗಾರ್ತಿ ಸುಮಿ ವಸಂತ್, ಅಂಗನವಾಡಿ ಶಿಕ್ಷಕಿ ಸುಶೀಲಾ, ಪ್ರಗತಿಪರ ಕೃಷಿ ಮಹಿಳೆ ಕಳ್ಳಿಚಂಡ ಸುಜ್ಯೋತಿ ಸುಬ್ಬಯ್ಯ ಹಾಗೂ ಕೊರೊನ ವಾರಿಯರ್ಸ್, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಕಿಯರು, ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಫ್ಯಾಷನ್ ಶೋ ಗಮನ ಸೆಳೆಯಿತು. ಕಿರಿಯರ ಎದುರು ಹಿರಿಯ ಮಹಿಳೆಯರು ಬಿಳಿ ಸೀರೆ ತೊಟ್ಟು ಪ್ರದರ್ಶನ ನೀಡಿದ ಅಜ್ಜಿಯ ಪಾತ್ರ ಜನಮನ ಗೆದ್ದಿತು.

ಫಲಿತಾಂಶ: (ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ) ಜಾನಪದ ಹಾಡಿನಲ್ಲಿ ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ, ವಿ. ಫ್ರೆಂಡ್ಸ್, ಪದ್ಮ ತಂಡ, ಜಾನಪದ ನೃತ್ಯದಲ್ಲಿ ವೀರಾಜಪೇಟೆಯ ಇಂಟೋಪಿಸ್ ಡ್ಯಾನ್ಸ್ ಸುಡಿಯೋಸ್, ಪಿಎನ್‌ಎಂ, ನಿಸರ್ಗ ಯುವತಿ ಮಂಡಳಿ, ಫ್ಯಾನ್ಸಿ ಡ್ರೆಸ್‌ನಲ್ಲಿ ಗೀತಾನಾಯ್ಡು, ಪುತ್ತಾಮನೆ ವಿದ್ಯಾ ಜಗದೀಶ್, ವಾಮನಾ, ಹೂವಿನ ಅಲಂಕಾರದಲ್ಲಿ ಚೇಂದAಡ ಸುಮಿ ಸುಬ್ಬಯ್ಯ, ಅರಮಣಮಡ ಮಮತಾ, ಕೆ.ಆರ್. ಮಲ್ಲಿಗೆ, ಬೆಂಕಿ ರಹಿತ ಅಡುಗೆಯಲ್ಲಿ ಶೋಭಾರಾಣಿ, ಕೆ.ಬಿ. ಶಾರದಾ, ಗೀತಾ ಗಣೇಶ್, ಕಸದಿಂದ ರಸ ಸ್ಪರ್ಧೆಯಲ್ಲಿ ಗೀತಾ ಗಣೇಶ್, ಕೆ.ಆರ್. ಮಲ್ಲಿಗೆ, ಆರ್. ನಯನಾ, ಬಾಂಬ್ ಇನ್ ದ ಸಿಟಿಯಲ್ಲಿ ಮಂಜುಳ, ಪಿ.ಎನ್. ನಳಿನಿ, ವಿ.ಎನ್. ಸುನಿತಾ, ನಟನೆ ಸ್ಪರ್ಧೆಯಲ್ಲಿ ಟಿ.ವಿ. ಶೈಲಾ, ಸುಶೀಲಾ, ಸೀತಮ್ಮ, ಪಾಸಿಂಗ್ ದ ಬಾಲ್‌ನಲ್ಲಿ ಪಿ.ಆರ್. ಸಂಧ್ಯಾ, ಬಿ.ಪಿ. ಭವಾನ, ಬಿ.ಎಸ್. ಯಮುನಾ ಪಡೆದುಕೊಂಡರು.