ಮಡಿಕೇರಿ, ಸೆ. ೨೯: ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜನೋತ್ಸವ ಅಂಗವಾಗಿ ಗಾಂಧಿಮೈದಾನದಲ್ಲಿನ ಕಲಾ ಸಂಭ್ರಮ ವೇದಿಕೆಯಲ್ಲಿ ಪ್ರಸ್ತುತಪಡಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.

ಮಡಿಕೇರಿಯ ಟೀಂ ಆ್ಯಟಿಟ್ಯೂಡ್ ತಂಡದಿAದ ಫ್ಯೂಶನ್ ಡ್ಯಾನ್ಸ್, ಸ್ನೇಹ ಮಧುಕರ್, ಸ್ವಪ್ನ ಮಧುಕರ್‌ಶೇಟ್ ಸಹೋದರಿಯರಿಂದ ಸಂಗೀತ ಸುಧೆ, ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯದಿಂದ ಭಾರತೀಯ ಶಾಸ್ತಿçÃಯ ನೃತ್ಯ ಪ್ರಕಾರ, ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡದಿAದ ಹಾಡು - ನೃತ್ಯವೈವಿಧ್ಯ, ಕುಶಾಲನಗರ ನಟರಾಜ್ ಸಂಗೀತ ನೃತ್ಯ ಕಲಾವೃಂದದವರಿAದ ನೃತ್ಯ ರೂಪಕ, ಕುಶಾಲನಗರದ ಉದಯ ನಂಜಪ್ಪ ಅವರಿಂದ ಭಾವಸಂಗೀತ ಕಾರ್ಯಕ್ರಮಗಳು ಮೂಡಿಬಂದವು.