*ಗೋಣಿಕೊಪ್ಪ, ಸೆ. ೨೯: ಕಾವೇರಿ ಕಲಾ ವೇದಿಕೆಯಲ್ಲಿ ನಡೆದ ಮೂರನೇ ದಿನದ ಸಾಂಸ್ಕöÈತಿಕ ಸಂಭ್ರಮದಲ್ಲಿ ಸ್ಥಳೀಯ ಪ್ರತಿಭೆಗಳ ಕಲೆ ಅನಾವರಣಗೊಂಡವು. ಕೊಡವ ನೈಟ್ಸ್, ನಾಟ್ಯನಿಕೇತನ ತಂಡದ ನೃತ್ಯ, ಪಂಚಮ್ ತ್ಯಾಗರಾಜ್ ತಂಡ ಸುಗಮ ಸಂಗೀತ, ಕಾರ್ಯಕ್ರಮಗಳು ನಡೆದವು.

ಚೆಕ್ಕೇರ ಪಂಚಮ್ ತ್ಯಾಗರಾಜ್ ಬೋಪಣ್ಣ ತಂಡ ನಡೆಸಿಕೊಟ್ಟ ಸುಗಮ ಸಂಗೀತದಲ್ಲಿ ಕೊಡವ ಗೀತೆಗಳು ಕೇಳುಗರಿಗೆ ಕರ್ಣಾನಂದ ನೀಡಿತ್ತು. ಪೊನ್ನಂಪೇಟೆ ಠಾಣೆಯ ಪೊಲೀಸ್ ಪೇದೆ ಮಹದೇವಸ್ವಾಮಿ ಮತ್ತು ವೀಣಾ ಇವರ ಕಂಠದಿAದ ಸಂಗೀತ ರಸಮಂಜರಿ ಮನತಣಿಸಿತು.

ಇಂದಿನ ಕಾರ್ಯಕ್ರಮ: ಬೆಳಿಗ್ಗೆ ೭ ಗಂಟೆಗೆ ಮತ್ತು ಸಂಜೆ ೭ ಗಂಟೆಗೆ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪಿಸಿರುವ ದೇವಿ ಚಾಮುಂಡೇಶ್ವರಿಗೆ ಪೂಜೆ. ಬೆಳಿಗ್ಗೆ ೯ ಗಂಟೆಗೆ ಸ್ವಾತಂತ್ರ÷್ಯ ಹೋರಾಟಗಾರರ ಭವನದಲ್ಲಿ ಚಿತ್ರಕಲಾ ಸ್ಪರ್ಧೆ, ಸಂಜೆ ೬ ಗಂಟೆಗೆ ಶಂಕ್ರಯ್ಯ ತಂಡದಿAದ ಸುಗಮ ಸಂಗೀತ, ವಿ.ಟಿ. ಶ್ರೀನಿವಾಸ್ ತಂಡದ ವಾದ್ಯ ಸಂಗೀತ, ದೇಶಭಕ್ತಿ ಗೀತೆ, ೭ ಗಂಟೆಗೆ ಜಗನ್ಮೋಹನ ನಾಟ್ಯಾಲಯ ತಂಡದ ನೃತ್ಯ, ೮ ಗಂಟೆಗೆ ರಿಫ್ಲೆಕ್ಷನ್ ಡ್ಯಾನ್ಸ್ ಇನ್ಟಿಟ್ಯೂಟ್ ತಂಡದ ನೃತ್ಯ ನಡೆಯಲಿದೆ.