*ಗೋಣಿಕೊಪ್ಪ, ಸೆ. ೨೯: ಶ್ರೀ ಕಾವೇರಿ ದಸರಾ ಸಮಿತಿಯ ೪೪ನೇ ದಸರಾ ಆಚರಣೆಯ ಹಿನ್ನೆಲೆ ಆಯೋಜಿಸಿದ ದಸರಾ ಚೆಸ್ ಪಂದ್ಯಾಟದಲ್ಲಿ ೪ ವಿಭಾಗಗಳಲ್ಲಿ ೧೪೪ ಸ್ಪರ್ಧಿಗಳು ಭಾಗವಹಿಸಿ ಬಹುಮಾನಕ್ಕಾಗಿ ಹೋರಾಟ ನಡೆಸಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಚೆಸ್ ಮುಕ್ತ ವಿಭಾಗದಲ್ಲಿ ರಜತ್ ಗುರುರಾಜ್ (ಪ್ರ), ಸುದೀಶ್ (ದ್ವಿ), ಪ್ರಮೋದ್ ಹಾಗೂ ನಾಗೇಂದ್ರ ಪ್ರಸಾದ್ (ತೃ). ಪ್ರೌಢಶಾಲೆ ವಿಭಾಗದಲ್ಲಿ ಜಿಜೋ ಜೇಮ್ಸ್ (ಪ್ರ), ಎಂ.ಎA. ತೇಜಸ್ (ದ್ವಿ), ಆರೋಮಲ್ (ತೃ), ದಿಗಂಶ್ ದೇವಯ್ಯ (ಚತು) ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಚೈತನ್ಯ (ಪ್ರ), ಕವನ್ ಕಾರ್ಯಪ್ಪ (ದ್ವಿ), ಅನುಷ್ಕ (ತೃ), ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕೆ.ಎಸ್. ಚಿನ್‌ಮಿತ್ (ಪ್ರ), ಎನ್. ಧ್ಯಾನ್ (ದ್ವಿ), ಸೂರ್ಯನಾಶ್ ಲತರ್ (ತೃ), ಸನಾ ರಾಘವನ್ (ಚ).

ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್, ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ, ಪ್ರ. ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಗೋಣಿಕೊಪ್ಪ ಪೊಲೀಸ್ ಠಾಣೆಯ ಉಪ ನಿರೀಕ್ಷಕ ದೀಕ್ಷಿತ್‌ಕುಮಾರ್, ಗೋಣಿಕೊಪ್ಪ ಗ್ರಾ.ಪಂ. ಸದಸ್ಯರಾದ ರತಿ ಅಚ್ಚಪ್ಪ, ರಾಮದಾಸ್, ಪಿ.ಎಂ. ಹಕೀಮ್, ಶರತ್‌ಕಾಂತ್, ಸುಲೇಖಾ, ಪಿಡಿಒ ಶ್ರೀನಿವಾಸ್ ಬಹುಮಾನ ವಿತರಿಸಿದರು. ಪಂದ್ಯಾವಳಿ ಸಂಚಾಲಕರಾಗಿ ಪೊನ್ನಿಮಾಡ ಪ್ರದೀಪ್, ಡಿ.ಜೆ ಆಂಥೋನಿ, ಇರ್ಷಾದ್ ನಡೆಸಿಕೊಟ್ಟರು.