ಮಡಿಕೇರಿ, ಸೆ. ೨೯: ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯಯುತ ಸದೃಢ ದೇಹ ಮತ್ತು ಮನಸ್ಸಿಗೆ ಪೌಷ್ಟಿಕಾಂಶಯುಕ್ತ ಆಹಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪೌಷ್ಟಿಕ ಆಹಾರದ ಬಗ್ಗೆ ಜಾಗೃತರಾಗಿ ಶಿಶು ಮತ್ತು ತಾಯಿ ಮರಣವನ್ನು ತಡೆಯುವಂತಾಗಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಸಲಹೆ ಮಾಡಿದರು.

ನಗರದ ಮಕ್ಕಳ ಹೊರ ರೋಗಿ ವಿಭಾಗ ಮುಂಭಾಗ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಮಂಗಳವಾರ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ರಾಷ್ಟಿçÃಯ ಪೌಷ್ಟಿಕ ಮಾಸಾಚಾರಣೆ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟಿçÃಯ ಪೌಷ್ಟಿಕ ಮಾಸಾಚರಣೆಯು ವಾರಕ್ಕೆ ಅಥವಾ ತಿಂಗಳ ಆಚರಣೆಗೆ ಸೀಮಿತವಾಗ ಬಾರದು. ವರ್ಷವಿಡೀ ಪೌಷ್ಟಿಕ ಆಹಾರದ ಬಗ್ಗೆ ಜನರು ಜಾಗೃತರಾಗಿ ಪೌಷ್ಟಿಕ ಆಹಾರವನ್ನು ಸೇವಿಸಿ, ಆರೋಗ್ಯವಂತ ಜೀವನ ನಡೆಸು ವಂತಾಗಬೇಕು ಎಂದು ಅವರು ಹೇಳಿದರು.

ದೇಶದಲ್ಲಿ ಶೇ.೪೨.೫ ರಷ್ಟು ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ ಶೇ. ೫೦ ರಷ್ಟು ಗರ್ಭಿಣಿಯರು ರಕ್ತ ಹೀನತೆ ಹಾಗೂ ಇನ್ನಿತರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆ, ರಕ್ತಹೀನತೆ ಹಾಗೂ ನಿಗದಿತ ಸಮಯಕ್ಕಿಂತ ಮೊದಲೇ ಮಕ್ಕಳ ಜನನ ಹೀಗೆ ಹಲವಾರು ಕಾರಣಗಳಿಂದಾಗಿ ಗರ್ಭದಲ್ಲಿಯೇ ಮಗು ಮರಣ ಹೊಂದುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಹೊಟ್ಟೆ ತುಂಬಾ ಆಹಾರ ಸೇವಿಸುವುದು ಮುಖ್ಯವಲ್ಲ. ಬದಲು ನಾವು ಸೇವಿಸುವ ಆಹಾರದಲ್ಲಿ ಎಷ್ಟರಮಟ್ಟಿಗೆ ಪೌಷ್ಟಿಕಾಂಶಗಳನ್ನು ಕಾಯ್ದುಕೊಂಡಿದ್ದೇವೆ ಎಂಬುದು ಮುಖ್ಯ ಎಂದು ಅವರು ತಿಳಿಸಿದರು.

ಡಾ.ರಾಮಚಂದ್ರ ಕಾಮತ್ ಅವರು ಮಾತನಾಡಿ ಅಪೌಷ್ಟಿಕತೆ ಯನ್ನು ಹೆಚ್ಚಾಗಿ ಮಕ್ಕಳಲ್ಲಿ ಕಾಣಬಹು ದಾಗಿದೆ. ಆ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟಿçÃಯ ಪೌಷ್ಟಿಕ ಮಾಸಾಚರಣೆ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳು ಸರಿಯಾಗಿ ಆಹಾರ ಸೇವಿಸುತ್ತಿಲ್ಲ ಎಂಬುವುದು ಪ್ರತಿಯೊಬ್ಬ ಪೋಷಕರ ದೂರಾಗಿದೆ. ಸಾತ್ವಿಕ ಆಹಾರವನ್ನು ಪ್ರತಿಯೊಬ್ಬರೂ ಸೇವಿಸುವಂತಾಗ ಬೇಕು. ಶಿಸ್ತಿನ ಜೀವನ ನಡೆಸುವವರು ಆರೋಗ್ಯವಂತರಾಗಿರುತ್ತಾರೆ. ಆದ್ದರಿಂದ ಸೊಪ್ಪು ಮತ್ತು ತರಕಾರಿ ಯನ್ನು ಹೆಚ್ಚು ಸೇವಿಸುವಂತಾಗಬೇಕು ಎಂದರು.

ಸದೃಢ ಹಾಗೂ ಆರೋಗ್ಯವಂತ ಜೀವನಕ್ಕೆ ಪೌಷ್ಟಿಕ ಆಹಾರ ಸಹಕಾರಿ. ಮುಂದೊAದು ದಿನ ಪ್ರತಿಯೊಬ್ಬರೂ ಪೌಷ್ಟಿಕ ಆಹಾರದ ಕುರಿತು ಜಾಗೃತರಾಗಿ ಪೌಷ್ಟಿಕ ಆಹಾರವನ್ನು ಹುಡುಕಿಕೊಂಡು ಹೋಗುವ ಸನ್ನಿವೇಶ ಎದುರಾಗುತ್ತದೆ ಎಂದರು.

ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ ಮಾತನಾಡಿ, ಬದಲಾದ ಆಹಾರ ಪದ್ಧತಿ ಹಾಗೂ ಜೀವನಶೈಲಿಗಳಿಂದ ಪ್ರತಿಯೊಬ್ಬರೂ ಪೌಷ್ಟಿಕ ಆಹಾರದಿಂದ ವಂಚಿತ ರಾಗುತ್ತಿದ್ದಾರೆ. ಹಿಂದಿನ ಕಾಲದ ಆಹಾರ ಪದ್ಧತಿಗೂ ಈಗಿನ ಕಾಲದ ಆಹಾರ ಪದ್ಧತಿಗೂ ಬಹಳಷ್ಟು ವ್ಯತ್ಯಾಸ ಕಾಣಬಹುದು ಎಂದು ಅವರು ತಿಳಿದರು.

ಪ್ರತಿಯೊಬ್ಬರೂ ಎಲ್ಲಾ ರೀತಿಯ ಸೊಪ್ಪು, ತರಕಾರಿ, ಹಸಿರು ಕಾಳುಗಳು ಇನ್ನಿತರ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವಂತಾಗಬೇಕು. ಆರೋಗ್ಯಯುತ ಚಟುವಟಿಕೆಗಳಾದ ವ್ಯಾಯಮ, ಕ್ರೀಡೆ ಇನ್ನಿತರ ಆರೋಗ್ಯಕರ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ತೊಡಗಿ ಕೊಳ್ಳುವಂತಾಗಬೇಕು ಎಂದರು.

ಗರ್ಭಿಣಿಯರು ಪೌಷ್ಟಿಕ ಆಹಾರದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಪೌಷ್ಟಿಕ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳುವುದರ ಜೊತೆಗೆ ಇತರರಿಗೂ ಅರಿವು ಮೂಡಿಸು ವಂತಾಗಬೇಕು. ಎಷ್ಟು ಬೇಕೋ ಅಷ್ಟೇ ಆಹಾರವನ್ನು ಉಪಯೋಗಿಸ ಬೇಕು. ಯಾವುದೇ ಕಾರಣಕ್ಕೂ ಆಹಾರವನ್ನು ಬಿಸಾಡಬಾರದು. ನಾವು ಬಿಸಾಡಿದ ಆಹಾರ ಇನ್ನೊಬ್ಬರ ಹಸಿವನ್ನು ನೀಗಿಸಬಹುದು ಎಂದು ಡಾ.ಪುರುಷೋತ್ತಮ ಅವರು ತಿಳಿಸಿದರು. ನರ್ಸಿಂಗ್ ಪ್ರಿನ್ಸಿಪಲ್ ಮಂಜುಳಾ ಮಾತನಾಡಿ, ಪೋಷಣ್ ಮಾಸಾಚರಣೆಯನ್ನು ಪ್ರಧಾನಮಂತ್ರಿ ಅವರು ೨೦೧೮ ರಲ್ಲಿ ಆರಂಭಿಸಿದರು. ಇದರ ಉದ್ದೇಶ (ಸಮಗ್ರ ಪೌಷ್ಟಿಕಾಂಶ ಒದಗಿಸುವ ಪ್ರಧಾನಮಂತ್ರಿ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮ) ದೇಶದಲ್ಲಿ ಅಪೌಷ್ಟಿಕತೆ ಹೋಗಲಾಡಿಸಿ, ಪೌಷ್ಟಿಕತೆ ಹೆಚ್ಚಿಸುವುದಾಗಿದೆ ಎಂದು ಅವರು ತಿಳಿಸಿದರು.

ನಾವು ಎಷ್ಟು ತಿಂದಿದ್ದೇವೆ ಎಂಬುದು ಮುಖ್ಯವಲ್ಲ, ನಾವು ತಿನ್ನುವ ಆಹಾರದಲ್ಲಿ ಎಷ್ಟರಮಟ್ಟಿಗೆ ಪೌಷ್ಟಿಕಾಂಶಗಳನ್ನು ಸೇವಿಸುತ್ತಿದ್ದೇವೆ ಎಂಬುದು ಮುಖ್ಯ. ಬಾಣಂತಿಯರು, ಗರ್ಭಿಣಿಯರು ಗುಣಮಟ್ಟದ ಆಹಾರವನ್ನು ಪ್ರತಿದಿನ, ಪ್ರತಿ ಹೊತ್ತು ಸೇವಿಸಬೇಕು ಇದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದು ಅವರು ಹೇಳಿದರು.

ಪ್ರಸ್ತುತ ಸರ್ಕಾರವು ಅಪೌಷ್ಟಿಕತೆ ಯನ್ನು ಹೋಗಲಾಡಿಸಲು ಹಲವಾರು ಜಾಗೃತಿ ಮೂಡಿಸು ವಂತಹ ಕಾರ್ಯಕ್ರಮ ಆಯೋಜಿ ಸುತ್ತಿದೆ. ಜೊತೆಗೆ ಅವಶ್ಯವಿರುವವರಿಗೆ ಆಹಾರ ಕಿಟ್‌ಗಳನ್ನು ಕೂಡ ನೀಡುತ್ತಿದೆ. ಜೊತೆಗೆ ಕಬ್ಬಿನಾಂಶಯುಕ್ತ ಮಾತ್ರೆಗಳನ್ನು ಕೂಡ ಪ್ರತಿಯೊಬ್ಬರಿಗೆ ಸರ್ಕಾರದ ವತಿಯಿಂದ ನೀಡಲಾ ಗುತ್ತಿದೆ. ಇವೆಲ್ಲವೂ ಪೋಷಣ್ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ನರ್ಸಿಂಗ್ ಸೂಪರ್‌ಡೆಂಟ್ ವೀಣಾ ಅವರು ಮಾತನಾಡಿ ಪ್ರತಿಯೊಬ್ಬರು ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಿ ಇರಬೇಕು ಎಂದು ಅವರು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ ವರ್ಗದವರು, ವೈದ್ಯಕೀಯ ವಿದ್ಯಾರ್ಥಿಗಳು, ಬಾಣಂತಿಯರು ಇತರರು ಇದ್ದರು.