ಮೂರ್ನಾಡು, ಸೆ. ೨೯: ಇತ್ತೀಚಿಗೆ ಚೇರಂಬಾಣೆಯಲ್ಲಿ ನಡೆದ ಮಡಿಕೇರಿ ತಾಲೂಕು ಮಟ್ಟದ ೨೦೨೨-೨೩ರ ಸಾಲಿನ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮೂರ್ನಾಡಿಗೆ ಸಮಗ್ರ ಪ್ರಶಸ್ತಿ ದೊರಕಿದೆ. ಬಾಲಕರ ಖೋ-ಖೋ, ಬಾಲಕಿಯರ ಖೋ ಖೋ, ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕಿಯರ ಥ್ರೋಬಾಲ್, ಬಾಲಕಿಯರ ಕಬಡ್ಡಿ ದ್ವಿತೀಯ ಸ್ಥಾನ ಪಡೆದು ತಾಲೂಕು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತರಬೇತಿ ನೀಡಿದ ದೈಹಿಕ ಶಿಕ್ಷಕ ಶಿಕ್ಷಕಿ ಪ್ರೇಮಲತಾ ಶೆಡ್ತಿ, ಹಿರಿಯ ಮುಖ್ಯ ಶಿಕ್ಷಕಿ ವಿ.ಕೆ. ಲಲಿತಾ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.