ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಸೆ. ೨೯: ಪ್ರಸ್ತುತದ ಸಮಾಜದಲ್ಲಿ ಸಣ್ಣಪುಟ್ಟ ಸಹಾಯಗಳು - ಸೇವೆಗಳ ಬಗ್ಗೆ ಭಾರೀ ಪ್ರಚಾರಗಳನ್ನು ಪಡೆದು ಕೊಳ್ಳುತ್ತಿರುವ ಹತ್ತಾರು ಪ್ರಕರಣಗಳು ಸಾಮಾನ್ಯವಾಗಿವೆ. ಆದರೆ ಇಲ್ಲೊಂದು ನೋಂದಾಯಿತ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರೂ ಪ್ರಚಾರ ದಿಂದ ದೂರವೇ ಉಳಿದಿದ್ದು, ಇದು ಒಂದು ರೀತಿಯಲ್ಲಿ ಮಾದರಿ ಎಂಬAತಿವೆ.
ಕೊಡಗು ಎಜುಕೇಷನಲ್ ಅಂಡ್ ಸೋಷಿಯಲ್ ಸರ್ವೀಸ್ ಟ್ರಸ್ಟ್ ಎಂಬ ಸಂಸ್ಥೆ ಸುಮಾರು ೨೦೧೦ ರಿಂದಲೇ ಹಲವು ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆ ೨೦೧೫ರಲ್ಲಿ ಅಧಿಕೃತವಾಗಿ ನೋಂದಾ ವಣೆಯೂ ಆಗಿದ್ದು, ಪಾರದರ್ಶಕ ವಾಗಿ ತನ್ನ ಚಿಂತನೆಯAತೆ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ವರ್ಷಂಪ್ರತಿ ಹಲವು ವಿದ್ಯಾರ್ಥಿ ಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಈ ಪ್ರೋತ್ಸಾಹ ಕೊಡವ ಜನಾಂಗದಲ್ಲಿನ ಬಡ ಹಾಗೂ ಇನ್ನಿತರ ರೀತಿಯಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೀಡಲ್ಪಡುತ್ತಿದೆ. ಇದು ಒಂಡೆದೆ ಯಾದರೆ ಕೊಡಗಿನ ಇತರ ಎಲ್ಲಾ ಜಾತಿ - ಜನಾಂಗದ ವಿದ್ಯಾರ್ಥಿಗಳಿಗೆ ಮತ್ತೊಂದು ರೀತಿಯಲ್ಲಿ ಪ್ರಯೋಜನ ವನ್ನು ಕಲ್ಪಿಸುತ್ತಿದೆ. ಸೈನಿಕಶಾಲೆಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಉಚಿತ ತರಬೇತಿ, ಕಂಟೈನ್ಡ್ ಡಿಫೆನ್ಸ್ ಸರ್ವೀಸ್, (ಸಿ.ಡಿ.ಎಸ್.) ಸೇರ್ಪಡೆಗೆ, ಎನ್ಡಿಎ ಪರೀಕ್ಷೆಗೆ, ತರಬೇತಿ, ವೃತ್ತಿ ಕೌಶಲ್ಯ ತರಬೇತಿಗಳನ್ನು ಪರಿಣಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಉಚಿತವಾಗಿ ಒದಗಿಸಲಾಗುತ್ತಿದೆ. ಇದಕ್ಕಾಗಿ ಪಾಟಿಯಾಲದಿಂದ ಪರಿಣಿತರನ್ನು ಕರೆಸಿಕೊಳ್ಳಲಾಗುತ್ತದೆ. ಗೋಣಿಕೊಪ್ಪದ ಲಯನ್ಸ್ಶಾಲೆ, ಕುಶಾಲನಗರ ಗಿಂಡಿ ಕಾಲೇಜು, ಪೊನ್ನಂಪೇಟೆಯ ಸಿಐಟಿ ಕಾಲೇಜುಗಳನ್ನು ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತಿದೆ. ಈ ಮೇಲಿನ ತರಬೇತಿಗಳೊಂದಿಗೆ ಇದೀಗ ಅಗ್ನಿವೀರ್ ಸೇನಾ ಸೇರ್ಪಡೆಗೂ ತರಬೇತಿ ಒದಗಿಸಲಾಗುತ್ತಿದೆ. ಸೂಕ್ತ ಮಾರ್ಗದರ್ಶನ - ತರಬೇತಿ ಯೊಂದಿಗೆ ಆಸಕ್ತರನ್ನು ತಯಾರು ಮಾಡಲಾಗುತ್ತಿದೆ.
ವಾರ್ಷಿಕ ರೂ. ೩೫ ರಿಂದ ೪೦ ಲಕ್ಷ
ಈ ಎಲ್ಲಾ ಸೇವೆಗಳನ್ನು ಟ್ರಸ್ಟ್ ಮೂಲಕ ಉಚಿತವಾಗಿ ಒದಗಿಸ ಲಾಗುತ್ತಿದೆ. ಪಾಟಿಯಾಲ ಮತ್ತಿತರ ಕಡೆಯಿಂದ ಕರೆಸಿಕೊಳ್ಳುವ ಸಂಪನ್ಮೂಲ ವ್ಯಕ್ತಿಗಳ ಖರ್ಚನ್ನು ಸಂಸ್ಥೆಯೇ ಭರಿಸುತ್ತಿದೆ.
ಕೊಡವ ಜನಾಂಗದಲ್ಲಿ ಬಹಳಷ್ಟು ಬಡವಿದ್ಯಾರ್ಥಿಗಳಿದ್ದರೆ, ಹಲವು ಸಂಕಷ್ಟಗಳನ್ನು ಹೇಳಿಕೊಳ್ಳಲಾಗದು. ಈ ನಿಟ್ಟಿನಲ್ಲಿ ಜನಾಂಗದ ಇಂತಹ ಮಕ್ಕಳನ್ನು ಗುರುತಿಸಿ ಆರ್ಥಿಕವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ತಿಳಿಸಿದ್ದಾರೆ. ಇದರೊಂದಿಗೆ ಸೇನೆ ಸೇರ್ಪಡೆ ಇನ್ನಿತರ ತರಬೇತಿ - ಸಹಕಾರವನ್ನು ಜಿಲ್ಲೆಯ ಎಲ್ಲಾ ಜಾತಿ - ಜನಾಂಗ ದವರಿಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಕೊರೊನಾ ಸಮಯ ದಲ್ಲಿ ಆಹಾರ ಕಿಟ್, ಪಿಪಿಇ ಕಿಟ್, ಮಾಸ್ಕ್ ಇತ್ಯಾದಿಗಳನ್ನು ವಿತರಿಸ ಲಾಗಿದೆ. ಹಲವು ಶಾಲೆಗಳಿಗೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ನೀಡಲಾಗಿದೆ. ಭೂಕುಸಿತ ಸಂದರ್ಭ ಹಲವಾರು ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ. ತಾರೇ ಜಮೀನ್ ಪರ್ ಎನ್ಜಿಓ ಸಂಸ್ಥೆಯ ಸಹಕಾರ ದೊಂದಿಗೆ ಹಲವು ಶಾಲೆಯ ೭ನೇ ತರಗತಿ ಹಾಗೂ ೯ನೇ ತರಗತಿ ವಿದ್ಯಾರ್ಥಿಗಳಿಗೆ ಸೈನ್ಸ್ ಕಿಟ್ ಅನ್ನೂ ವಿತರಿಸಲಾಗಿದೆ. ಸೈನಿಕ ಶಾಲೆಗೆ ಕೊಡವ ವಿದ್ಯಾರ್ಥಿಗಳು ಸೇರಿದಲ್ಲಿ ಅವರಿಗೆ ರೂ. ೧೦ ಸಾವಿರ ಪ್ರೋತ್ಸಾಹ ನೀಡಲಾಗುತ್ತಿದೆ. ೧೦ನೇ ತರಗತಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೂ ತಲಾ ರೂ. ೧೦ ಸಾವಿರ ನೀಡಲಾಗುತ್ತಿದೆ. ಟ್ರಸ್ಟ್ನ ಈ ಸೇವೆಗೆ ಬಹಳಷ್ಟು ದಾನಿಗಳು ವಾರ್ಷಿಕವಾಗಿ ಸಹಕಾರ ನೀಡುತ್ತಿದ್ದು, ಇವರನ್ನು ಸ್ಮರಿಸಿಕೊಳ್ಳುವುದಾಗಿ ಗಣೇಶ್ ಪೊನ್ನಪ್ಪ ಹೇಳಿದರು.
ಕಳೆದ ವರ್ಷದ ೧೧೯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ರೂ. ೧೭ ಲಕ್ಷ ನೀಡಲಾಗಿದೆ. ಈ ಬಾರಿ ೧೪೪ ವಿದ್ಯಾರ್ಥಿಗಳಿಗೆ ರೂ. ೨೦ ಲಕ್ಷವನ್ನು ವಿತರಿಸಲಾಗಿದೆ. ಪೋಷಕರು ಇಲ್ಲದ ಕೊಡವ ಜನಾಂಗದ ಮಕ್ಕಳು, ಸಿಂಗಲ್ ಪೇರೆಂಟ್, ಗುರುತರವಾದ ಕಾಯಿಲೆಗೆ ತುತ್ತಾದವರ ಮಕ್ಕಳು, ಈ ರೀತಿಯಾಗಿ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಇಂತಹ ಸಂಕಷ್ಟ ಇರುವ ಹಲವರು ಮತಾಂತರದ ಆಮಿಷಕ್ಕೆ ಬಲಿಯಾಗುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸುವದು ಕೂಡ ಈ ಟ್ರಸ್ಟ್ನ ಚಿಂತನೆಗಳಲ್ಲಿ ಒಂದಾಗಿದೆ.
ಟ್ರಸ್ಟ್ನ ಪ್ರಮುಖರು
ವೀರಾಜಪೇಟೆ ಕೊಡವ ಸಮಾಜದ ಹಳೆಯ ಕಚೇರಿಯಲ್ಲಿ ಈ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಯಾಗಿ ನಿವೃತ್ತ ಮೇಜರ್ ಜನರಲ್ ಕೊಡಂದೆರ ಅರ್ಜುನ್ಮುತ್ತಣ್ಣ, ಅಧ್ಯಕ್ಷರಾಗಿ ಉದ್ಯಮಿ ಮಂದಪAಡ ಸದಾ ಚಂಗಪ್ಪ, ಕಾರ್ಯದರ್ಶಿಯಾಗಿ ಮಾರ್ಚಂಡ ಗಣೇಶ್ ಪೊನ್ನಪ್ಪ, ಖಜಾಂಚಿಯಾಗಿ ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ, ಟ್ರಸ್ಟಿಗಳಾಗಿ ಪಂದ್ಯAಡ ಸೂರಜ್ ಮಾಚಯ್ಯ, ಬೊಪ್ಪಂಡ ಕೆ. ಸುಬ್ರಮಣ್ಯ, ಪಟ್ಟಡ ಧನು ಉತ್ತಯ್ಯ ಅವರುಗಳಿದ್ದಾರೆ.