ಮಡಿಕೇರಿ, ಸೆ. ೩೦: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು.
ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದಿಂದ ಸಂಗೀತ ನೃತ್ಯ ವೈಭವ, ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ಅಂಡ್ ಫಿಟ್ನೆಸ್ ಸ್ಟುಡಿಯೋದವರಿಂದ ನೃತ್ಯ, ಕುಶಾಲನಗರದ ಸುವೇದಿತ ಸುಭಾಶ್ ಅವರಿಂದ ಗೀತ ಗಾಯನ, ಅವಂದೂರಿನ ಇಂಚರ ಕಲಾ ತಂಡದಿAದ ನೃತ್ಯ, ಕೊಡಗು ಪತ್ರಕರ್ತರ ಸಂಘದ ಕಲಾವಿದರಿಂದ ಗಾನ ವೈವಿಧ್ಯ, ಕೂರ್ಗ್ ಹನಿ ಮೆಲೋಡೀಸ್ನ ತಾತಂಡ ಪ್ರತಾಪ್ ಬೆಳ್ಯಪ್ಪ ಮತ್ತು ಸಂಗಡಿಗರಿAದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಮೂಡಿಬಂದವು.