*ಗೋಣಿಕೊಪ್ಪ, ಸೆ. ೩೦: ಸುಗಮ ಸಂಗೀತ ಜಾನಪದ ನೃತ್ಯಗಳು, ಶ್ಯಾಡೊ ಶೋ ಕಾವೇರಿ ಕಲಾವೇದಿಕೆಯಲ್ಲಿ ನಾಲ್ಕನೇ ದಿನದ ಸಾಂಸ್ಕೃತಿಕ ಸಂಜೆಯಲ್ಲಿ ಗಮನ ಸೆಳೆಯಿತು.
೪೪ನೇ ಕಾವೇರಿ ದಸರಾ ಸಮಿತಿಯ ದಸರಾ ಜನೋತ್ಸವದ ಆಚರಣೆಯಲ್ಲಿ ನಡೆದ ಸಂಸ್ಕೃತಿ ಸಂಜೆಯಲ್ಲಿ ಬೆಂಗಳೂರಿನ ಪ್ರಹ್ಲಾದ್ ಆಚಾರಿ ಅವರ ನೆರಳು ಬೆಳಕಿನಾಟ, ಶ್ಯಾಡೊ ಶೋ, ಆಕಾಶವಾಣಿ ಕಲಾವಿದ ಬಿ.ಎ. ಗಣೇಶ್ ನಡೆಸಿಕೊಟ್ಟ ಗಾನಲಹರಿ, ಮೂರ್ನಾಡು ಭಾರತೀಯ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ, ಭರತನಾಟ್ಯಗಳು ನಡೆದವು.
ಪೊನ್ನಂಪೇಟೆ ನಿಸರ್ಗ ಕಲಾ ತಂಡ ಜಾನಪದ ಸೊಗಡಿನಲ್ಲಿ ಪೊನ್ನಂಪೇಟೆ ಸುಮೃತ ನಾಟ್ಯ ಶಾಲೆಯ ಲಿದಿನಾ ಸುವಾಸ್ ಅವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಿತು.
ಜಾನಪದ ಪರಿಷತ್ತಿನ ಪೊನ್ನಂಪೇಟೆ ಮತ್ತು ವೀರಾಜಪೇಟೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳು, ನೃತ್ಯಗಳು ಗಮನ ಸೆಳೆದವು.
ಇಂದಿನ ಕಾರ್ಯಕ್ರಮ : ಬೆಳಿಗ್ಗೆ ೧೦ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ದಸರಾ ಕವಿಗೋಷ್ಠಿ, ಸಂಜೆ ೬ಕ್ಕೆ ಲಾಲ್ಕುಮಾರ್ ತಂಡದ ಸುಗಮ ಸಂಗೀತ, ೭ ಗಂಟೆಗೆ ಶ್ರೀ ದುರ್ಗಾ ಮ್ಯೂಸಿಕಲ್ ನೈಟ್ಸ್ ರಸಮಂಜರಿ, ೮ ಗಂಟೆಗೆ ಮಯೂರಿ ಬಸವರಾಜ್ ತಂಡದ ಕುಚುಪುಡಿ, ನಂತರ, ಜೀ ಕನ್ನಡ ಕಾಮಿಡಿ ಕಿಲಾಡಿ ಕಲಾವಿದರ ಹಾಸ್ಯ ಹಬ್ಬ..
- ಎನ್.ಎನ್. ದಿನೇಶ್