ವೀರಾಜಪೇಟೆ, ಸೆ. ೨೭: ವೀರಾಜಪೇಟೆ ಸಹಕಾರ ಮಾರಾಟ ಮಹಾಮಂಡಳದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಕೊಡಗು ಮಹಿಳಾ ಸಮಾಜ ಸಭಾಂಗಣದಲ್ಲಿ ವಾಟೇರಿರ ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ೨೩೪೯ ಸದಸ್ಯರಿದು ವರದಿ ಸಾಲಿನಲ್ಲಿ ರೂ. ೮.೦೭ ಕೋಟಿ ಮಾರಾಟ ವ್ಯವಹಾರ ನಡೆಸಿ ರೂ. ೯೦.೨೬ ಲಕ್ಷ ವ್ಯಾಪಾರ ಲಾಭಗಳಿಸಿದ್ದು, ನಿವ್ವಳ ಲಾಭ ರೂ. ೨೩.೯೪ ಲಕ್ಷಗಳಾಗಿರುತ್ತದೆ ಎಂದು ಸಭೆಗೆ ತಿಳಿಸಿದರು. ಅಲ್ಲದೇ ಸಂಘದ ಸರ್ವ ಸದಸ್ಯರು ಕನಿಷ್ಟ ವ್ಯಾಪಾರ ವ್ಯವಹಾರದಲ್ಲಿ ಭಾಗವಹಿಸಿ ಸಂಸ್ಥೆಯ ಏಳಿಗೆಗೆ ಸಹಕರಿಸಬೇಕಾಗಿ ಕೇಳಿಕೊಂಡರು.

ಸಭೆಯಲ್ಲಿ ಉಪಾಧ್ಯಕ್ಷ ಟಿ.ಎಂ. ಕಾವೇರಪ್ಪ, ನಿರ್ದೇಶಕರಾದ ಕೆ.ಕೆ. ಮಂದಣ್ಣ, ಎಂ.ಕೆ. ಭೀಮಯ್ಯ, ಕೆ.ಎಂ. ಪೂವಯ್ಯ, ಎಸ್.ಕೆ. ಮಂದಣ್ಣ, ಕೆ.ಎ. ಬಿದ್ದಪ್ಪ, ಎಂ.ಕೆ. ಕಾವೇರಪ್ಪ, ಎಂ.ಎA. ಕುಟ್ಟಪ್ಪ, ಸಿ.ಈ. ಗಿರೀಶ್ ಪೂಣಚ್ಚ, ಕೆ.ಬಿ. ಲತಾ, ಪಿ.ಎಂ. ವೀಣಾ ಮಹೇಶ್, ಹೆಚ್.ಟಿ. ಮರಿಯಪ್ಪ, ಕೆ.ಆರ್. ವಿನೋದ್ ಮತ್ತು ಸಂಘದ ಸಹಕಾರ್ಯದರ್ಶಿ ಜಿ.ಪಿ. ಅಪ್ಪಣ್ಣ ಅವರು ಉಪಸ್ಥಿತರಿದ್ದರು.