ಮೂರ್ನಾಡು, ಸೆ. ೨೭: ಕಿಗ್ಗಾಲು ಗ್ರಾಮದ ಎಲ್ಲ ಸದಸ್ಯರೂ ದವಸ ಭಂಡಾರದ ಮುಂದಿನ ಮಹಾ ಚುನಾವಣೆಯಲ್ಲಿ ಕಣಕ್ಕಿಳಿದು ಆಡಳಿತ ಮಂಡಳಿಯಲ್ಲಿ ಪಾಲ್ಗೊಳ್ಳಬೇಕು. ಹೊಸಬರು ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂದು ದವಸ ಭಂಡಾರದ ಅಧ್ಯಕ್ಷ ಪುದಿಯೊಕ್ಕಡ ಪೂಣಚ್ಚ ಅಭಿಪ್ರಾಯಪಟ್ಟರು.
ನಂ. ೪೭೨ನೇ ಕಿಗ್ಗಾಲು ಶ್ರೀ ಚಾಮುಂಡೇಶ್ವರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ಮಹಾಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ದವಸ ಭಂಡಾರವು ತೊಡಗಿರುವುದನ್ನು ವಿವರಿಸಿದರು.
ಸಿಂಧು ಮತ್ತು ಸಿಂಚನ ಪ್ರಾರ್ಥಿಸಿದರೆ, ಅಧ್ಯಕ್ಷ ಪೂಣಚ್ಚ ಸ್ವಾಗತಿಸಿದರು. ಕುಂತೋಡಿ ಶರತ್ ಸಭೆಯನ್ನು ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.