ಶ್ರೀಮಂಗಲ, ಸೆ. ೨೭: ಸತತ ಐದು ವರ್ಷಗಳಿಂದ ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಿರಂತರ ಬೆಳೆ ನಷ್ಟ ಅನುಭವಿಸುತ್ತಿರುವ ಕೊಡಗು ಜಿಲ್ಲೆಯ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಹಾಗೂ ಪ್ರಸ್ತುತ ವರ್ಷ ಬೆಳೆ ನಷ್ಟ ಪರಿಹಾರವನ್ನು ಪರಿಷ್ಕರಣೆ ಮಾಡಿ ಶೀಘ್ರದಲ್ಲಿ ಪರಿಹಾರ ವಿತರಿಸಬೇಕೆಂದು ಸರ್ಕಾರವನ್ನು ಕೊಡಗು ಬೆಳೆಗಾರ ಒಕ್ಕೂಟ ಆಗ್ರಹಿಸಿದೆ.

ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರನ್ನು ಕೊಡಗು ಬೆಳೆಗಾರ ಒಕ್ಕೂಟ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈಗಾಗಲೇ ಬೆಳೆನಷ್ಟ ಸಮೀಕ್ಷೆ ಇಲಾಖೆಗಳು ಜಂಟಿಯಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಇತರ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಬೆಳೆನಷ್ಟ ಪರಿಹಾರ ಮೊತ್ತ ಮತ್ತು ಕಳೆದ ಹಲವು ವರ್ಷದಿಂದ ಪರಿಷ್ಕರಣೆಗೊಂಡಿಲ್ಲ.ಆದರೆ ರಸಗೊಬ್ಬರ ದರ ಕಳೆದ ಏಳೆಂಟು ತಿಂಗಳಿನಿAದ ಶೇ. ೫೦ ರಿಂದ ೮೦ರಷ್ಟು ಏರಿಕೆಯಾಗಿದೆ. ಕಳೆದ ಐದು ವರ್ಷಗಳಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ಬೆಳೆಗಾರರು ಅತ್ಯಂತ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಇದಲ್ಲದೆ ಕೋವಿಡ್ ೧೯ ಲಾಕ್‌ಡೌನ್ ಸಂದರ್ಭ ಸಕಾಲದಲ್ಲಿ ಕಾರ್ಮಿಕರು ದೊರೆಯದೆ ಕೃಷಿ ಚಟುವಟಿಕೆ,ತೋಟ ನಿರ್ವಹಣೆ ಕುಂಠಿತವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಬೆಳೆಗಾರರಿಗೆ ಕೋವಿಡ್ ೧೯ ಲಾಕ್‌ಡೌನ್ ಹಿನ್ನೆಲೆಯಲ್ಲಿಯು ಯಾವುದೇ ಪರಿಹಾರವನ್ನು ಸರ್ಕಾರ ನೀಡಿಲ್ಲ.ಇದೀಗ ರಸಗೊಬ್ಬರ ಕಳೆದ ಆರು ಏಳು ತಿಂಗಳದಿAದ ಶೇ. ೮೦ರಷ್ಟು ಹಾಗೂ ಕಾಂಪ್ಲೆಕ್ಸ್ಯುಕ್ತ ರಸಗೊಬ್ಬರಗಳ ದರ ಶೇಕಡ ೪೫ ರಿಂದ ೬೦ರಷ್ಟು ಏರಿಕೆಯಾಗಿದೆ. ಹಾಗೆಯೇ ರೈತರ ಬಳಸುವ ಸಿಂಪಡಣೆ ದ್ರಾವಣಗಳು, ಯಂತ್ರೋಪಕರಣಗಳ ದರ ಸಹ ದರ ಏರಿಕೆಯಾಗಿದೆ ಆದರೆ ಅತಿವೃಷ್ಟಿಯಿಂದ ನಿರಂತರವಾಗಿ ಬೆಳೆ ನಷ್ಟ ಅನುಭವಿಸುತ್ತಿದ್ದು ಜಿಲ್ಲೆಯ ಬೆಳೆಗಾರರ ಚೇತರಿಕೆಗೆ ವಿಶೇಷ ಪ್ಯಾಕೇಜ್ ಸರಕಾರ ಪ್ರಕಟಿಸಬೇಕು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ರಸಗೊಬ್ಬರ ದರ, ಯಂತ್ರೋಪಕರಣಗಳ ದರ ಏರಿಕೆಯಾಗಿದೆ ಹಾಗೆಯೇ ಸಂಸದರು ಮತ್ತು ಶಾಸಕರ ವೇತನ ಭತ್ಯೆ ಸಹ ಏರಿಕೆಯಾಗಿದೆ.ರಾಜ್ಯ ಶಾಸಕರು ತಮಗೆ ಅನುಕೂಲವಾಗುವಂತೆ ತಮ್ಮ ಮನಸ್ಸು ಇಚ್ಛೆ ವೇತನ ಹಾಗೂ ಭತ್ಯೆ ಏರಿಸಿಕೊಂಡಿದ್ದಾರೆ.ಇದೇ ಫೆಬ್ರವರಿ ತಿಂಗಳಲ್ಲಿ ಶೇ. ೫೦ರಷ್ಟು ಶಾಸಕರ ವೇತನ-ಭತ್ಯೆ ಏರಿಕೆಯಾಗಿದೆ. ಆದರೆ ಬೆಳೆ ನಷ್ಟ ಪರಿಹಾರಕ್ಕೆ ನೀಡುವ ಮೊತ್ತವನ್ನು ಸರಕಾರ ಹಲವು ವರ್ಷದಿಂದ ಪರಿಷ್ಕರಣೆ ಮಾಡಿಲ್ಲ. ಇದು ಅತ್ಯಂತ ಅನ್ಯಾಯವಾದ ವಿಚಾರ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ. ರೈತರ ಆಯ್ಕೆಯ ರಸಗೊಬ್ಬರಗಳ ಕೊರತೆ ಕಾಡುತ್ತಿದೆ ಮುಂಗಾರು ಪೂರ್ವದಲ್ಲಿ ಡಿಎಪಿ ಮತ್ತು ಯುರಿಯ ಗೊಬ್ಬರ ಸಿಗದೇ ಸಂಕಷ್ಟ ಎದುರಿಸಿದ ಬೆಳೆಗಾರರು ಕಳೆದ ಮುಂಗಾರುವಿನಿAದ ರೈತರ ಆಯ್ಕೆಯ ವಿಶ್ವಾಸಾರ್ಹತೆಯ ಬ್ರಾಂಡಿನ ರಸಗೊಬ್ಬರಗಳು ಸಿಗುತ್ತಿಲ್ಲ.ಕಳೆದ ಒಂದು ತಿಂಗಳಿನಿAದ ಜಿಲ್ಲೆಯಲ್ಲಿ ಮುಂಗಾರು ನಂತರ ಬೆಳೆಗಳಿಗೆ ರಸಗೊಬ್ಬರ ಪೂರೈಸುವ ಕ್ರಮವಿದ್ದು, ಪ್ರಸ್ತುತ ರಸಗೊಬ್ಬರ ಅಲಭ್ಯತೆ ಉಂಟಾಗಿದೆ. ಒಂದು ಕಡೆ ಅತಿವೃಷ್ಟಿಯಿಂದ ಮತ್ತು ವನ್ಯಪ್ರಾಣಿಗಳಿಂದ ನಿರಂತರವಾಗಿ ಬೆಳೆ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಇನ್ನೊಂದು ಕಡೆ ಸಕಾಲದಲ್ಲಿ ಸೂಕ್ತ ರಸಗೊಬ್ಬರ ದೊರೆಯದೆ ಬೆಳೆಗಾರರು ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಕಾಫಿ ಕಾಳು ಮೆಣಸು ಅಡಿಕೆ ಬಹುವಾರ್ಷಿಕ ಬೆಳೆಯಾಗಿದ್ದು ಆರ್.ಟಿ.ಸಿ ಯಲ್ಲಿ ಪ್ರತಿವರ್ಷ ನಮೂದಿಸುವ ಪ್ರಕ್ರೀಯೆ ಜಿಲ್ಲೆಯಲ್ಲಿ ಅಗತ್ಯತೆ ಇರುವುದಿಲ್ಲ.ಬಯಲು ಸೀಮೆಯಲ್ಲಿ ವಾರ್ಷಿಕವಾಗಿ ಎರಡು ಮೂರು ಬೆಳೆ ಬದಲಾಯಿಸುತ್ತಿರುವುದರಿಂದ ಅಲ್ಲಿಯ ನೀತಿಯನ್ನು ಕೊಡಗು ಜಿಲ್ಲೆಗೆ ಅನ್ವಯಿಸದಂತೆ ಅವರು ಒತ್ತಾಯಿಸಿದರು.

ಜಿಲ್ಲೆಯಿಂದ ಕಾಫಿ ಮಂಡಳಿಗೆ ಕೇವಲ ಒಬ್ಬರನ್ನು ನಾಮ ನಿರ್ದೇಶನ ಮಾಡಿರುವುದು ಸರಿಯಲ್ಲ.ಅತಿ ಹೆಚ್ಚು ಕಾಫಿ ಬೆಳೆಯುವ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಪರ ಧ್ವನಿ ಎತ್ತುವ ಬೆಳೆಗಾರರಿಗೆ ಸೂಕ್ತ ಸ್ಥಾನಮಾನವನ್ನು ಕಾಫಿ ಮಂಡಳಿಯಲ್ಲಿ ನೀಡಬೇಕು ಎಂದು ಅವರು ಒತ್ತಾಯಿಸಿದರು.ಸಹಕಾರ ಸಂಘಗಳಿAದ ಕೃಷಿ ಸಾಲ ಪಡೆಯಲು ಫ್ರೂಟ್ಸ್ ತಂತ್ರಾAಶದಲ್ಲಿ ಸ್ಥಗಿತಗೊಳಿಸಿ,ಮಾರ್ಟಿಗೇಜ್ ಮಾಡಿ ಸಾಲದ ಪ್ರಮಾಣದ ಶೇ.೧.೫ ರಷ್ಟು ಮುದ್ರಾಂಕ ಶುಲ್ಕದ ಹೊರೆಯನ್ನು ಕಾಫಿ ಬೆಳೆಗಾರರ ಮೇಲೆ ಹೇರಲಾಗಿದೆ. ಇದನ್ನು ಈ ಹಿಂದಿನAತೆ ಶುಲ್ಕ ರಹಿತವಾಗಿ ಯಥಾ ಸ್ಥಿತಿ ಮುಂದುವರೆಸಲು ಒತ್ತಾಯಿಸಿದರು.

ಈ ಸಂದರ್ಭ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ,ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ,ಖಜಾಂಚಿ ಮಾಣೀರ ವಿಜಯ ನಂಜಪ್ಪ,ಸದಸ್ಯರಾದ ಅಜ್ಜಿಕುಟ್ಟಿರ ಬೋಪಣ್ಣ ಹಾಜರಿದ್ದರು.