ಮಡಿಕೇರಿ, ಸೆ. ೨೬: ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ವುಶು ಕ್ರೀಡಾಕೂಟದಲ್ಲಿ ಬೆಟ್ಟಗೇರಿ ವುಶು ಸಂಸ್ಥೆಯ ಆರು ಕ್ರೀಡಾಪಟುಗಳು ಬೆಳ್ಳಿ ಪದಕವನ್ನು ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಾದ ಪಿ.ಬಿ. ಧನುಷ್, ಸಿ.ಸಿ. ಗಗನ್, ಎ.ಎಸ್. ಸುದರ್ಶನ್, ಪಿ.ಎನ್. ಜೀವ, ಎ.ಎಸ್. ಪವನ್ ಹಾಗೂ ಬಿ.ಸಿ. ಗೌರವ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ತಾ.೨೬ ಮತ್ತು ೨೭ ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಕೊಡಗು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುದರ್ಶನ್ ಹಾಗೂ ತರಬೇತುದಾರ ಬಿ.ಎ.ಆನಂದ ಪೂಜಾರಿ ಬೆಟ್ಟಗೇರಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.