ಕುಶಾಲನಗರ, ಸೆ.೨೬: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಕ್ರೀಡಾ ಸ್ಪರ್ಧೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯ ಬಾನು ಚಾಲನೆ ನೀಡಿದರು.

ಮಹಿಳೆಯರು ಮತ್ತು ಪುರುಷ ರಿಗೆ ಪ್ರತ್ಯೇಕ ಸ್ಪರ್ಧಾ ಕಾರ್ಯಕ್ರಮ ಗಳು ಜರುಗಿದವು. ಸೀನಿಯರ್ ಮತ್ತು ಜೂನಿಯರ್ ತಂಡಗಳಾಗಿ ೨ ತಂಡಗಳ ನಡುವೆ ಕ್ರಿಕೆಟ್, ಭಾರದ ಗುಂಡು ಎಸೆತ, ಮ್ಯೂಸಿಕಲ್ ಚೇರ್, ರಂಗೋಲಿ ಸ್ಪರ್ಧೆ ಮತ್ತಿತರ ಕ್ರೀಡೆಗಳು ನಡೆದವು. ಇದೇ ಸಂದರ್ಭ ಜೀವಿತ ಪ್ರಯೋಗಾಲಯದ ವತಿಯಿಂದ ಎಲ್ಲಾ ಪೌರಕಾರ್ಮಿಕರಿಗೆ ಉಚಿತ ರಕ್ತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಆರೋಗ್ಯಾಧಿಕಾರಿ ಉದಯ್ ಕುಮಾರ್ ಮತ್ತಿತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ದಲ್ಲಿ ಇದ್ದರು.

ಪೌರಕಾರ್ಮಿಕರ ಸಂಘದ ಎಸ್.ಆರ್. ಗಣೇಶ್, ಗೌರವಾಧ್ಯಕ್ಷ ರಾದ ಮೋಹನ್‌ಕುಮಾರ್, ಕಾರ್ಯದರ್ಶಿ ನಂಜುAಡ ಮತ್ತಿತರರು ಇದ್ದರು.