*ಗೋಣಿಕೊಪ್ಪ, ಸೆ. ೨೬: ಕಾವೇರಿ ನೀರಾವರಿ ನಿಗಮದ ೫೦ ಲಕ್ಷ ಅನುದಾನದಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ ಬೋಪಯ್ಯ ಚಾಲನೆ ನೀಡಿದರು.

ತಿತಿಮತಿ ಮರೂರುವಿನಲ್ಲಿ ಕಾಮಗಾರಿ ಪ್ರಾರಂಭದ ಶುಭ ಗಳಿಗೆಗೆ ಭೂಮಿಪೂಜೆ ನೆರವೇರಿಸಿದ ಶಾಸಕರು ಕಾಲೋನಿಗಳು ಅಭಿವೃದ್ಧಿ ಕಂಡರಷ್ಟೇ, ದೇಶ ಸಮೃದ್ಧಿ ಹೊಂದಲು ಸಾಧ್ಯ, ಸರ್ಕಾರದ ಹಲವು ಯೋಜನೆಗಳನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸ ಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸವನ್ನು ಹೊಂದುವ ಮೂಲಕ ದೇಶದ ಮೌಲ್ಯಾಧಾರಿತ ವ್ಯಕ್ತಿಯಾಗಬೇಕು ಎಂದು ಹೇಳಿದರು.

ತಿತಿಮತಿ ಗಾಮಪಂಚಾಯಿತಿ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ವಿಜಯ, ಗ್ರಾ.ಪಂ. ಸದಸ್ಯ ಹಾಗೂ ಶಕ್ತಿ ಕೇಂದ್ರದ ಪ್ರಮುಖ್ ಅನೂಪ್ ಎನ್.ಎನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ತಾಲೂಕು ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್, ತಾಲೂಕು ಖಜಾಂಚಿ ಚೆಪುö್ಪಡಿರ ಮಾಚು, ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಶಶಿ ಹಾಗೂ ಗ್ರಾಮಪಂಚಾಯಿತಿ ಸದಸ್ಯರುಗಳು, ಗ್ರಾಮದ ಪ್ರಮುಖರು ಇದ್ದರು.