ಗೋಣಿಕೊಪ್ಪಲು, ಸೆ. ೨೪: ಐತಿಹಾಸಿಕ ನಾಡಹಬ್ಬ ದಸರಾಕ್ಕೆ ದಿನಗಣನೆ ಶುರುವಾಗಿದೆ. ಜನೋತ್ಸವವೆಂದೆ ಖ್ಯಾತಿ ಪಡೆದು ಜನಮನ ಸೆಳೆಯುವ ಗೋಣಿಕೊಪ್ಪ ದಸರಾಕ್ಕೆ ಅದ್ಧೂರಿ ತಯಾರಿ ನಡೆದಿದೆ. ೪೪ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ೪೪ ವಿನೂತನ ಕಾರ್ಯಕ್ರಮಗಳನ್ನು ನಡೆಸಲು ಶ್ರೀ ಕಾವೇರಿ ದಸರಾ ಸಮಿತಿ ಮುಂದಾಗಿದೆ.

ನಗರದಲ್ಲಿ ೧೦ ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ವೇದಿಕೆ ನಗರದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಜ್ಜಾಗುತ್ತಿದೆ. ಹಲವು ಉಪಸಮಿತಿಗಳು ಉತ್ತಮ ಕಾರ್ಯಕ್ರಮಗಳನ್ನು ನೀಡುವ ಸಲುವಾಗಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಪ್ರಪ್ರಥಮ ಬಾರಿಗೆ ನಗರದ ಹರಿಶ್ಚಂದ್ರಪುರದಿAದ ಕಾವೇರಿ ಕಾಲೇಜಿನವರೆಗೆ ರಸ್ತೆಯ ಎರಡು ಬದಿಯಲ್ಲಿ ವಿದ್ಯುತ್ ದೀಪವನ್ನು ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ವೇದಿಕೆ ನಗರದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಜ್ಜಾಗುತ್ತಿದೆ. ಹಲವು ಉಪಸಮಿತಿಗಳು ಉತ್ತಮ ಕಾರ್ಯಕ್ರಮಗಳನ್ನು ನೀಡುವ ಸಲುವಾಗಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಪ್ರಪ್ರಥಮ ಬಾರಿಗೆ ನಗರದ ಹರಿಶ್ಚಂದ್ರಪುರದಿAದ ಕಾವೇರಿ ಕಾಲೇಜಿನವರೆಗೆ ರಸ್ತೆಯ ಎರಡು ಬದಿಯಲ್ಲಿ ವಿದ್ಯುತ್ ದೀಪವನ್ನು ಅವಕಾಶ ನೀಡಲಾಗಿದೆ.

ನಗರದಲ್ಲಿ ವಾಣಿಜ್ಯ ಮಳಿಗೆಗಳು ತಮ್ಮ ಮಳಿಗೆಗಳನ್ನು ವಿದ್ಯುತ್ ದೀಪಾಲಂಕೃತಗಳಿAದ ಕಂಗೊಳಿಸು ವಂತೆ ಮಾಡಬೇಕೆಂದು ಬಿ.ಎನ್. ಪ್ರಕಾಶ್ ಮನವಿ ಮಾಡಿದರು.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮದ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅತ್ಯುತ್ತಮವಾಗಿ ದೀಪಾಲಂಕೃತ ಮಾಡಿದ ಅಂಗಡಿಗಳಿಗೆ ೧೦ ವಿಭಾಗಗಳಲ್ಲಿ ಬಹುಮಾನಗಳನ್ನು ನೀಡಲು ಸಮಿತಿ ನಿರ್ಧಾರ ಕೈಗೊಂಡಿದೆ. ವರ್ತಕರು ಈ ನಿಟ್ಟಿನಲ್ಲಿ ಸಮಿತಿಯೊಂದಿಗೆ ಸಹಕರಿಸಬೇಕು. ಪ್ರಚಾರದ ಮೂಲಕ ಜನರನ್ನು ಆಕರ್ಷಿಸಲು ಕೆಎಸ್‌ಆರ್‌ಟಿಸಿ

(ಮೊದಲ ಪುಟದಿಂದ) ಬಸ್‌ಗಳಿಗೆ ಗೋಣಿಕೊಪ್ಪ ದಸರಾ ಬ್ಯಾನರ್‌ಗಳನ್ನು ಅಳವಡಿಸಿ ಜನರನ್ನು ಸೆಳೆಯಲಾಗುತ್ತಿವೆ. ವಿಜಯ ದಶಮಿಯಂದು ನಗರಕ್ಕೆ ರಾಜ್ಯದ ಸಚಿವ ಸಂಪುಟದ ಹಲವು ಸಚಿವರು ಆಗಮಿಸಲಿದ್ದಾರೆ ಎಂದು ಮಾಹಿತಿ ಒದಗಿಸಿದ ಪ್ರಕಾಶ್, ನವರಾತ್ರಿಯಂದು ಪ್ರಮುಖ ಆಕರ್ಷಣೆಯಾದ ಸ್ತಬ್ಧಚಿತ್ರ ಮೆರವಣಿಗೆಯನ್ನು ದಸರಾ ನಾಡಹಬ್ಬ ಸಮಿತಿಯೊಂದಿಗೆ ಆರ್‌ಎಂಸಿ ಯಾರ್ಡ್ನಿಂದ ಮುಂಜಾನೆ ೧೦ ಗಂಟೆಗೆ ಆರಂಭ ಮಾಡಲಾಗುವುದು. ಸಂಜೆಯ ವೇಳೆ ಮಂಟಪಗಳು ನಿಗದಿತ ಸಮಯದಲ್ಲಿ ಉಮಾಮಹೇಶ್ವರಿ ದೇವಸ್ಥಾನದ ಆವರಣದಿಂದ ಹೊರಡಲು ಈಗಾಗಲೇ ದಶಮಂಟಪಗಳ ಅಧ್ಯಕ್ಷರುಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ತಾ. ೨೫ ರಂದು ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಮಾಡುವ ಮೂಲಕ ನವರಾತ್ರಿಯನ್ನು ಆರಂಭಿಸಲಾಗುತ್ತದೆ. ಸಂಜೆ ೫ ಗಂಟೆಯಿAದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಕಾವೇರಿ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿಭಿನ್ನ ರೀತಿಯ ಕಾರ್ಯಕ್ರಮಗಳು ಮೂಡಿಬರಲಿವೆ.

ವೈವಿಧ್ಯಮಯ ಕಾರ್ಯಕ್ರಮ

ಹಗಲು ಹೊತ್ತಿನಲ್ಲಿ ಚೆಸ್, ಮಹಿಳಾ ದಸರಾ, ಮಕ್ಕಳ ದಸರಾ, ವಿಜ್ಞಾನ ಮೇಳ, ಚಿತ್ರಕಲಾ ಸ್ಪರ್ಧೆ, ಸ್ವಚ್ಛತಾ ಅಭಿಯಾನ, ಗೀತ ಗಾಯನ, ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ತಾ. ೨೬ ರ ಬೆಳಿಗ್ಗೆ ೭ ಗಂಟೆಗೆ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ ೬-೭ ಗಂಟೆವರೆಗೆ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ, ೭ ಗಂಟೆಯಿAದ ಮಂಗಳೂರು ಹೆಜ್ಜೆನಾದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ

ಸಾಂಸ್ಕೃತಿಕ ಕಲರವ

ತಾ. ೨೭ರ ಸಂಜೆ ೬-೭ ಗಂಟೆವರೆಗೆ ಚೌಡೇಶ್ವರಿ ನಾಟಕ ಮತ್ತು ಜಲಾ ಸಂಘದಿAದ ನೃತ್ಯ ರೂಪಕ, ವಿದುಷಿ ಉಷಾ ಮಂಜುನಾಥ್ ನಟರಾಜ ಬಾಲ್ಯ ನಾಟ್ಯ ಕೇಂದ್ರದ ನೃತ್ಯ, ೭ ಗಂಟೆಗೆ ನಾಟ್ಯ ಕಲಾ ನೃತ್ಯ ಶಾಲೆ ತಂಡದ ಭರತನಾಟ್ಯ, ೮ ಗಂಟೆಗೆ ಕಾವೇರಿ ಕಲಾಸಿರಿ ತಂಡದಿAದ ರಸಮಂಜರಿ, ಪುನ್ನಾಡ್ ಪೊಲಿಗ ತಂಡದ ಕೇರಳ ನಾಡನ್ ಪಾಟ್.

ತಾ. ೨೮ ರಂದು ಬೆ. ೯ ಗಂಟೆಗೆ ಅನುದಾನಿತ ಪ್ರೌಢಶಾಲೆಯಲ್ಲಿ ದಸರಾ ಚೆಸ್ ಕ್ರೀಡೆ, ಕಾವೇರಿ ಕಲಾ ವೇದಿಕೆಯಲ್ಲಿ ಮಹಿಳಾ ದಸರಾ, ಸಂಜೆ ೬ ಕ್ಕೆ ನಾಟ್ಯನಿಕೇತನ ತಂಡದ ನೃತ್ಯ, ೭ ಗಂಟೆಗೆ ಪಂಚಮ್ ತ್ಯಾಗರಾಜ್ ತಂಡ ಸುಗಮ ಸಂಗೀತ, ೮ ಗಂಟೆಗೆ ಕೊಡವ ನೈಟ್ಸ್.

ತಾ. ೨೯ ರಂದು ಬೆಳಿಗ್ಗೆ ೯ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಮಕ್ಕಳ ದಸರಾ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳ, ಸಂಜೆ ೬ ಗಂಟೆಗೆ ಬಿ.ಎ. ಗಣೇಶ್ ತಂಡದ ಸುಗಮ ಸಂಗೀತ, ೭ ಗಂಟೆಗೆ ನಿಸರ್ಗ ಕಲಾ ತಂಡದ ವೈವಿಧ್ಯಮಯ ಕಾರ್ಯಕ್ರಮ, ೮ ಗಂಟೆಗೆ ಶ್ಯಾಡೋ ಶೋ, ಪೊನ್ನಂಪೇಟೆ ಜನಪದ ಕಲಾ ಪರಿಷತ್ತು ತಂಡದ ಜಾನಪದ ಕಾರ್ಯಕ್ರಮ.

ತಾ. ೩೦ ರಂದು ಬೆ. ೯ ಗಂಟೆಗೆ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಿತ್ರಕಲಾ ಸ್ಪರ್ಧೆ, ಸಂಜೆ ೬ ಗಂಟೆಗೆ ಶಂಕ್ರಯ್ಯ ತಂಡದ ಸುಗಮ ಸಂಗೀತ, ವಿ.ಟಿ. ಶ್ರೀನಿವಾಸ್ ತಂಡದ ಸಂಗೀತ, ದೇಶಭಕ್ತಿ ಗೀತೆ, ೭ ಗಂಟೆಗೆ ಜಗನ್ಮೋಹನ ನಾಟ್ಯಾಲಯ ತಂಡದ ನೃತ್ಯ, ೮ ಗಂಟೆಗೆ ರಿಫ್ಲೆಕ್ಷನ್ ಡ್ಯಾನ್ಸ್ ಇನ್ಟಿಟ್ಯೂಟ್ ತಂಡದ ನೃತ್ಯ.

ಅಕ್ಟೋಬರ್ ೧ ರಂದು ಬೆಳಿಗ್ಗೆ ೧೦ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ದಸರಾ ಕವಿಗೋಷ್ಠಿ, ಸಂಜೆ ೬ಕ್ಕೆ ಲಾಲ್‌ಕುಮಾರ್ ತಂಡದ ಸುಗಮ ಸಂಗೀತ, ೭ ಗಂಟೆಗೆ ಶ್ರೀ ದುರ್ಗಾ ಮ್ಯೂಸಿಕಲ್ ನೈಟ್ಸ್ ರಸಮಂಜರಿ, ೮ ಗಂಟೆಗೆ ಮಯೂರಿ ಬಸವರಾಜ್ ತಂಡದ ಕುಚುಪುಡಿ, ಜೀ ಕನ್ನಡ ಕಾಮಿಡಿ ಕಿಲಾಡಿ ಕಲಾವಿದರ ಹಾಸ್ಯ ಹಬ್ಬ.

ಅ. ೨ರಂದು ಬೆಳಿಗ್ಗೆ ೧೦ ಗಂಟೆಗೆ ಗೋಣಿಕೊಪ್ಪ ರೋಟರಿ ಕ್ಲಬ್, ಸಂಜೆ ೬ ಗಂಟೆಗೆ ಚಂದ್ರಶೇಖರ್ ಕಲಾ ತಂಡದ ಸಂಗೀತ ಕಾರ್ಯಕ್ರಮ, ೭ ಗಂಟೆಗೆ ನಾಟ್ಯಮಯೂರಿ ನೃತ್ಯ ಶಾಲೆ ತಂಡದ ಭರತನಾಟ್ಯ, ಇಂಟೋಫಿಸ್ ನೃತ್ಯಶಾಲಾ ತಂಡದ ನೃತ್ಯ ಕಾರ್ಯಕ್ರಮ, ೮ ಗಂಟೆಗೆ ಯುವ ದಸರಾದಲ್ಲಿ ಫ್ಯಾಷನ್ ಶೋ, ಡಿಜೆ.

ಅ. ೩ ಬೆ. ೧೦ ಗಂಟೆಗೆ ರೋಟರಿ ಕ್ಲಬ್ ವತಿಯಿಂದ ಮಕ್ಕಳಿಗೆ ಸಾಮೂಹಿಕ ಮತ್ತು ವೈಯಕ್ತಿಕ ಗೀತ ಗಾಯನ, ಕ್ಲೇ ಮಾಡಲಿಂಗ್, ಸಂಜೆ ೬ ಗಂಟೆಗೆ ಎಸ್.ಟಿ. ಗಿರೀಶ್ ತಂಡದ ಸಂಗೀತ, ಷಡಕ್ಷರಿ ತಂಡದ ಜನಪದ ಗಾಯನ, ೭ ಗಂಟೆಗೆ ಹೇಮಾವತಿ ನಾಟ್ಯಾಂಜಲಿ ನೃತ್ಯ ಸಂಗೀತ ಶಾಲೆಯ ಭರತನಾಟ್ಯ, ಜಾನಪದ, ಪಾಶ್ಚಾತ್ಯ ನೃತ್ಯ. ೮ ಗಂಟೆಗೆ ಸೈಕ್ಲೋನ್ ಡ್ಯಾನ್ಸ್ ಇನ್ಟಿಟ್ಯೂಟ್ ತಂಡದ ನೃತ್ಯ.

ಅ. ೪ ರಂದು ಸಂಜೆ ೬ ಗಂಟೆಯಿAದ ಆಯುಧ ಪೂಜೆ ರಸಮಂಜರಿ ಕಾರ್ಯಕ್ರಮ.

ಅ. ೫ ರಂದು ಬೆಳಿಗ್ಗೆ ೧೦ ಗಂಟೆಯಿAದ ೩ ಗಂಟೆವರೆಗೆ ನಾಡಹಬ್ಬ ದಸರಾ ಸಮಿತಿ ವತಿಯಿಂದ ಸ್ತಬ್ದಚಿತ್ರ ಮೆರವಣಿಗೆ, ಸಂಜೆ ೬ ಕ್ಕೆ ಜಾದೂಗಾರ ವಿಕ್ರಂ ಶೆಟ್ಟಿ ತಂಡದ ಮ್ಯಾಜಿಕ್, ೭ ಗಂಟೆಗೆ ಸುರಕ್ಷಾ ವೈಲಾಯ ತಂಡದ ಭರತ ನಾಟ್ಯ, ೮ ಗಂಟೆಗೆ ಜೀ ಸರಿಗಮಪ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ರಿಷಿ ಪುರುಷೋತ್ತಮ್ ತಂಡದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ವಿಜಯ ದಶಮಿಯಂದು ನಗರದ ಮುಖ್ಯಬೀದಿಗಳಲ್ಲಿ ದಶಮಂಟಪಗಳ ಶೋಭಾಯಾತ್ರೆ ನಡೆಯಲಿದೆ.

ಸಮಿತಿಯ ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಖಜಾಂಚಿ ಮಲ್ಚೀರ ಗಾಂಧಿ ದೇವಯ್ಯ, ಉಪಾಧ್ಯಕ್ಷ ಶಿವಾಜಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ರಮೇಶ್, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ದಸರಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೆ.ಜಿ. ರಾಮಕೃಷ್ಣರವರು ಉಪಸ್ಥಿತರಿದ್ದರು.

-ಚಿತ್ರ-ವರದಿ : ಹೆಚ್.ಕೆ.ಜಗದೀಶ್/ ಎನ್.ಎನ್.ದಿನೇಶ್