ಮಡಿಕೇರಿ, ಸೆ. ೨೪: ಕೊಡವ ನ್ಯಾಷನಲ್ ಕೌನ್ಸಿಲ್ನ ಕೋರಿಕೆ ಮೇರೆಗೆ ರಾಜ್ಯಸಬಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಅವರ ನಿಧಿಯಿಂದ ಜಿಲ್ಲೆಯ ಕುಗ್ರಾಮಗಳ ರಸ್ತೆ ಹಾಗೂ ಐನ್ಮನೆಗಳಿಗೆ ತೆರಳುವ ರಸ್ತೆ ಅಭಿವೃದ್ಧಿಗಾಗಿ ರೂ. ೨,೪೬,೧೪,೦೦೦ ಅನುದಾನ ಬಿಡುಗಡೆಯಾಗಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ವಿಭಾಗದ ನಿಧಿಯಿಂದ ಅನುದಾನ ಬಿಡುಗಡೆಗೊಂಡಿದ್ದು, ಅನುದಾನವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ೧ನೇ ವಿಭಾಗಕ್ಕೆ ರೂ. ೧,೫೦,೦೦,೦೦೦ ಹಣ, ೨ನೇ ವಿಭಾಗಕ್ಕೆ ರೂ. ೨೧,೧೪,೦೦೦, ೩ನೇ ವಿಭಾಗಕ್ಕೆ ರೂ. ೭೫,೦೦,೦೦೦ ಹಣ ಬಿಡುಗಡೆಗೊಳಿಸಿದ್ದು, ಹಣವು ಮುಂಬೈ ನಗರ ಜಿಲ್ಲಾಧಿಕಾರಿಗಳ ಖಾತೆ ಮೂಲಕ ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಖಾತೆಗೆ ಜಮಾವಣೆಗೊಂಡಿದೆ.
ಎಲ್ಲೆಲ್ಲಿ ಅಭಿವೃದ್ಧಿ..?
ರೂ. ೧.೫೦ ಕೋಟಿ ಹಣವನ್ನು ಭಾಗಶಃ ಚೆಟ್ಟಳ್ಳಿ ಪಂಚಾಯಿತಿಗೆ ಸೇರಿದ ಕುಶಾಲನಗರ ತಾಲೂಕಿನ ‘ನೂರೊಕ್ಕನಾಡ್ ಹಿಲ್ಸ್’ ರಸ್ತೆ ಅಭಿವೃದ್ಧಿಯಿಂದ ಭಾಗಶಃ ಮರಗೋಡು ಪಂಚಾಯಿತಿ ಮಡಿಕೇರಿ ತಾಲೂಕಿನ ಕತ್ತಲೆಕಾಡು ರಸ್ತೆ ಅಭಿವೃದ್ಧಿಗೆ ರೂ. ೨೧.೧೪ ಲಕ್ಷ ಹಣವನ್ನು ಕಡಗದಾಳು ಪಂಚಾಯಿತಿ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಎನ್.ಎ. ಅಪ್ಪಯ್ಯ ಮತ್ತು ಎನ್.ಕೆ. ನಂದಾ ಅವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿಗೆ ರೂ. ೭೫ ಲಕ್ಷ ಹಣವನ್ನು ಜಿಲ್ಲೆಯ ಐದು ತಾಲೂಕುಗಳ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಇನ್ನುಳಿದ ರೂ. ೭೫ ಲಕ್ಷ ಹಣದಲ್ಲಿ ರೂ. ೩೦ ಲಕ್ಷ, ಕೆದಕಲ್ ಗ್ರಾಮದ ಪುಲ್ಲೇರ ಐನ್ಮನೆ ರಸ್ತೆ ಅಭುವೃದ್ಧಿಗೆ ೧ ಲಕ್ಷ, ಚೆಯ್ಯಂಡಾಣೆ ಕರಡ ಗ್ರಾಮದ ಮಲೆತಿರಿಕೆ ದೇವನೆಲೆಗೆ ತೆರಳುವ ರಸ್ತೆ ಅಭಿವೃದ್ಧಿಗೆ, ೧೦ ಲಕ್ಷ, ಕಂಡAಗಾಲ ಗ್ರಾಮದ ಬಲ್ಲಡಿಚಂಡ ಐನ್ಮನೆ ರಸ್ತೆಗೆ ೫ ಲಕ್ಷ, ಚೆಂಬೆಬೆಳ್ಳೂರು ಚಂಬಾAಡ ಜನತ್ಕುಮಾರ್ ಮನೆಗೆ ತೆರಳುವ ರಸ್ತೆಗೆ ೭ ಲಕ್ಷ, ಕೊಳಗದಾಳು ಗ್ರಾಮದ ಅಜ್ಜಿನಂಡ ಐನ್ಮನೆ ರಸ್ತೆಗೆ ೬ ಲಕ್ಷ, ಬೇಂಗೂರು ಗ್ರಾಮದ ಮಂದಪAಡ ಐನ್ಮನೆ ರಸ್ತೆಗೆ ೩.೫ ಲಕ್ಷ, ಗುಡ್ಡೆಹೊಸೂರು ಗ್ರಾ.ಪಂ.ನ ಚಿಕ್ಕಬೆಟ್ಟಗೇರಿ ಗ್ರಾಮದ ಎನ್.ಯು. ಅಚ್ಚಯ್ಯ ಅವರ ಮನೆಗೆ ತೆರಳುವ ರಸ್ತೆಗೆ ೩.೫ ಲಕ್ಷ, ಕುಟ್ಟ ಚೂರಿಕಾಡ್ ಗ್ರಾಮದ ಅಜ್ಜಿಕುಟ್ಟಿರ ಲೋಕೇಶ್ ಮನೆಗೆ ತೆರಳುವ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ ಎಂದು ನಾಚಪ್ಪ ಮಾಹಿತಿ ನೀಡಿದ್ದಾರೆ. ಮುಂದಿನ ನವೆಂಬರ್ ೨೬ ರಂದು ನಡೆಯಲಿರುವ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮಕ್ಕೆ ಆಗಮಿಸಲಿರುವ ಸುಬ್ರಮಣಿಯನ್ ಸ್ವಾಮಿ ಆವರು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.