ಶ್ರೀಮಂಗಲ, ಸೆ. ೨೫: ಮುಂದಿನ ತಿಂಗಳು ತಾ. ೧೭ರಂದು ಪವಿತ್ರ ತೀರ್ಥೋದ್ಭವ ಮೂಲಕ ಕಾವೇರಿ ಮಾತೆ ಭಕ್ತಾದಿಗಳಿಗೆ ದರ್ಶನ ನೀಡುವ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರವನ್ನು ನೂರಾರು ಕೊಡವ ಭಕ್ತಾದಿಗಳು ಸ್ವಯಂ ಪ್ರೇರಿತರಾಗಿ ತೊಳೆದು ಶುದ್ಧೀಕರಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಭಾನುವಾರ ಹೊರಜಿಲ್ಲೆ ಮತ್ತು ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೩೦೦ಕ್ಕೂ ಅಧಿಕ ಕೊಡವ ಭಕ್ತಾದಿಗಳು ಭಕ್ತಿ ಭಾವದಿಂದ ಸ್ವಚ್ಛತಾ ಕೆಲಸವನ್ನು ಕೈಗೊಂಡರು. ಬೆಳಿಗ್ಗೆ ೧೧ ಗಂಟೆಯಿAದ ಸಂಜೆ ೪.೩೦ ರವರೆಗೆ ಕ್ಷೇತ್ರದ ಮುಖ್ಯದ್ವಾರದಿಂದ ಸ್ನಾನ ಕೊಳದವರೆಗೆ ಮೆಟ್ಟಿಲು, ಕಬ್ಬಿಣ ತಡೆ ಬೇಲಿ, ಕಲ್ಲಿನ ನೆಲಹಾಸುಗಳಲ್ಲಿ ಕಟ್ಟಿದ್ದ ಪಾಚಿಗಳನ್ನು ಉಜ್ಜಿ ತೊಳೆದು ಶುದ್ಧಗೊಳಿಸಿದರು.
ಈ ಕಾರ್ಯದಲ್ಲಿ ತಲಕಾವೇರಿ- ಭಾಗಮಂಡಲ ಕ್ಷೇತ್ರದ ಮೂಲ ತಕ್ಕ ಕುಟುಂಬಗಳಾದ ಮಂಡೀರ, ಮಣವಟ್ಟಿರ ಕುಟುಂಬದ ಸದಸ್ಯರು ಸಹ ಭಾಗಿಯಾಗಿದ್ದರು.
ಇದಲ್ಲದೆ ಕೊಡಗಿನ ವಿವಿಧ ಭಾಗದಿಂದ ವಿವಿಧ ಕುಟುಂಬಗಳ ಮೂಲಕವೂ ಪ್ರತಿನಿಧಿಗಳು ಭಾಗವಹಿಸಿದ್ದು, ವಿಶೇಷವಾಗಿತ್ತು. ವಿಶೇಷ ಬಸ್ ವ್ಯವಸ್ಥೆ ಮಾಡಿಕೊಂಡು ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು ಸಹ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಕಾವೇರಿ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಸ್ವಚ್ಛ ಕಾರ್ಯಕ್ಕೂ ಮೊದಲು ‘ತಿಂಗಕೊರ್ ಮೊಟ್ಟ್ ತಲಕಾವೇರಿಕ್’ ಸಂಕಲ್ಪದAತೆ ೨೧ನೇ ತಿಂಗಳ ಪೂಜೆಯನ್ನು ಮಹಿಳೆಯರು, ಮಕ್ಕಳು ಸೇರಿದಂತೆ ಹಿರಿಯರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ (ಮೊದಲ ಪುಟದಿಂದ) ನಂತರ ಸಾಮೂಹಿಕವಾಗಿ ಸ್ವಚ್ಛತಾ ಕೆಲಸವನ್ನು ಮಾಡಿದರು. ಕಳೆದ ವರ್ಷವೂ ಸಹ ಕೊಡವ ಭಕ್ತಾದಿಗಳು ಕ್ಷೇತ್ರದಲ್ಲಿ ಸ್ವಚ್ಛತೆ ಕೈಗೊಂಡಿದ್ದರು.