ವರದಿ: ಚನ್ನನಾಯಕ ಪೊನ್ನಂಪೇಟೆ, ಸೆ. ೨೫: ಬ್ರಹ್ಮಗಿರಿ ವನ್ಯಧಾಮ ವ್ಯಾಪ್ತಿಯ ಮಾಕುಟ್ಟ ಮೀಸಲು ಅರಣ್ಯ ವಲಯದ ವಿ.ಬಾಡಗ ಗ್ರಾಮದ ಸಮೀಪ ಇರುವ ಕೊಕ್ಕ ವೈಲ್ಡ್ ಲೈಫ್ ಕ್ಯಾಂಪ್‌ನಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ ತರುಣ್ ಕುಮಾರ್ ತಾ. ೨೩ ರಂದು ಮಧ್ಯಾಹ್ನದ ಸಮಯದಲ್ಲಿ ಜಿಪಿಎಸ್ ಸರ್ವೆ ಕಾರ್ಯಾ ಚರಣೆಯ ವೇಳೆ ಕಡಿದಾದ ಬಂಡೆಗಳಿAದ ಕೂಡಿದ ದಟ್ಟಾರಣ್ಯದಲ್ಲಿ ದಿಢೀರ್ ನಾಪತ್ತೆಯಾಗಿದ್ದು, ೩ನೇ ದಿನವೂ ಆತನ ಸುಳಿವು ಕಾರ್ಯಾಚರಣೆ ತಂಡಕ್ಕೆ ಲಭ್ಯವಾಗಿಲ್ಲ.

ಅಂದು ಜೊತೆಗಿದ್ದ ಸಿಬ್ಬಂದಿ, ತರುಣ್ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವೈಲ್ಡ್ ಲೈಫ್ ಸಿಬ್ಬಂದಿಗಳು, ಮಡಿಕೇರಿಯ ಎನ್‌ಡಿಆರ್‌ಎಫ್ ತಂಡ, ಪೊಲೀಸರ ತಂಡ ಬಿರುಸಿನ ಕಾರ್ಯಾಚರಣೆ ನಡೆಸಿದರೂ ಕೂಡ ಆತನ ಸುಳಿವು ಪತ್ತೆಯಾಗಿರಲಿಲ್ಲ. ಆದ್ದರಿಂದ ಇಂದು ಮಂಗಳೂರಿನಿAದ ಮುಳುಗು ತಜ್ಞರನ್ನು ಕರೆಸಿ, ಎನ್ ಡಿ ಆರ್ ಎಫ್ ಜೊತೆಗೂಡಿ ನಾಪತ್ತೆಯಾಗಿರುವ ತರುಣ್ ಪತ್ತೆಗಾಗಿ ಬಿರುಸಿನ ಶೋಧಕಾರ್ಯ ನಡೆಸಲಾಯಿತು. ಅವಿರತ ಪ್ರಯತ್ನ ಕೈಗೊಂಡರೂ ತರುಣ್ ಗುರುತು ದೊರೆತಿಲ್ಲ.

ತರುಣ್ ನದಿಗೆ ಬಿದ್ದಿದ್ದಾರೆ ಎಂದು ಹೇಳಲಾಗುವ ಸ್ಥಳದಲ್ಲಿ ಕಡಿದಾದ ಬಂಡೆಗಳ ಮಧ್ಯೆ ಸುಮಾರು ೪೦ ಅಡಿಗಳಿಗಿಂತಲೂ ಹೆಚ್ಚು ಆಳವಿದ್ದು, ನೀರು ಬಂಡೆಗಳ ಮೇಲಿನಿಂದ ಜಲಪಾತದ ರೀತಿಯಲ್ಲಿ ದುಮ್ಮಿಕ್ಕುತ್ತಿರುವ ಕಾರಣ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ಮುಳುಗು ತಜ್ಞರು ಆಮ್ಲಜನಕ ಸಿಲಿಂಡರ್‌ನೊAದಿಗೆ ನೀರಿಗಿಳಿದು ಹುಡುಕಾಟ ನಡೆಸಿದರೂ ಕೂಡ, ಮೇಲಿನಿಂದ ಬೀಳುತ್ತಿರುವ ನೀರಿನ ರಭಸಕ್ಕೆ ನೀರಿನಿಂದ ನೊರೆ ಏಳುತ್ತಿದ್ದು, ನೀರಿನೊಳಗೆ ಕೂಡ ಬಂಡೆಗಳು ಕಡಿದಾಗಿ ಇರುವ ಕಾರಣ ಕಾರ್ಯಾಚರಣೆಗೆ ಹಿನ್ನಡೆಯಾಗುತಿದೆ ಎಂದು ಹೇಳಲಾಗುತ್ತಿದೆ.

ಪೋಷಕರ ಅಳಲು

ಮಗ ಕಾಣೆಯಾಗಿ ೩ ದಿನ ಕಳೆದರೂ ಪತ್ತೆಯಾಗದಿರುವ ಕಾರಣ ಬೆಳಿಗ್ಗೆಯಿಂದ ಸಂಜೆವರೆಗೂ ಕ್ಯಾಂಪ್ ನಲ್ಲಿಯೇ ಕಾದು ಕುಳಿತಿರುವ ತರುಣ್ ತಂದೆ, ತಾಯಿ, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಹಾಗೂ ಸಂಬAಧಿಕರು ದುಃಖದ ಮಡುವಿನಲ್ಲಿದ್ದು, ಮನೆ ಮಗನನ್ನು ಕಾಣದೆ ಕಂಗಾಲಾಗಿದ್ದಾರೆ. ತರುಣ್ ವಾಸವಿದ್ದ ಬಾಳೆಲೆ ಗ್ರಾಮದಿಂದ ಆಗಮಿಸಿರುವ ಸ್ನೇಹಿತರು ಹಾಗೂ ಗ್ರಾಮಸ್ಥರು ಕೂಡ ತರುಣ್‌ನ ನಿರೀಕ್ಷೆಯಲ್ಲಿ ಮನಸ್ಸಿನಲ್ಲಿ ಅಪಾರ ನೋವು ತುಂಬಿಕೊAಡು ಕಾದು ಕುಳಿತಿದ್ದರು. ತರುಣ್ ಮೂಲತಃ ಬೆಂಗಳೂರು

(ಮೊದಲ ಪುಟದಿಂದ) ವಾಸಿಯಾಗಿದ್ದು, ಬಾಳೆಲೆಯಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ನೆಲೆಸಿದ್ದ.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ತರುಣ್ ನಾಪತ್ತೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಪೋಷಕರು ಹಾಗೂ ಗ್ರಾಮಸ್ಥರು, ಆತ ಆಕಸ್ಮಿಕವಾಗಿ ನದಿಗೆ ಬಿದ್ದಿರಲು ಸಾಧ್ಯವಿಲ್ಲ. ಈ ಪ್ರಕರಣದ ಹಿಂದೆ ಏನಾದರೂ ಸಂಚು ನಡೆದಿರಬಹುದು. ಈ ಘಟನೆ ನಡೆದ ಸಂದರ್ಭ ಆತನ ಜೊತೆಗಿದ್ದ ಇತರ ನಾಲ್ಕು ಸಿಬ್ಬಂದಿಗಳನ್ನು ಸೂಕ್ತ ತನಿಖೆಗೆ ಒಳಪಡಿಸಿ ಅವರನ್ನು ವಿಚಾರಣೆ ಮಾಡಿದರೆ ಸತ್ಯ ತಿಳಿಯುತ್ತದೆ ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

ತರುಣ್ ಅರಣ್ಯ ಇಲಾಖೆಯ ತಾತ್ಕಾಲಿಕ ನೌಕರ ಆಗಿದ್ದರೂ ಕೂಡ ಕರ್ತವ್ಯದಲ್ಲಿದ್ದಾಗ ಘಟನೆ ನಡೆದಿರುವ ಕಾರಣ ಆತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು. ತರುಣ್ ನಾಪತ್ತೆ ಪ್ರಕರಣದಲ್ಲಿ ನ್ಯಾಯ ಸಿಗದಿದ್ದಲ್ಲಿ ಕೊಕ್ಕ ಕ್ಯಾಂಪ್‌ನಲ್ಲಿಯೇ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಇಲಾಖೆಗೆ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಶಾಸಕ ಕೆಜಿಬಿ ಭೇಟಿ: ಕೊಕ್ಕ ವೈಲ್ಡ್ ಲೈಫ್ ಕ್ಯಾಂಪ್‌ಗೆ ಭೇಟಿ ನೀಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತರುಣ್ ಪೋಷಕರಿಗೆ ಸಾಂತ್ವನ ಹೇಳಿ ಪೋಷಕರ ಅಳಲನ್ನು ಆಲಿಸಿದರು. ನಾಪತ್ತೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಸಂಬAಧಪಟ್ಟವರಿಗೆ ಆದೇಶ ನೀಡುವುದಾಗಿ ತಿಳಿಸಿದರು.

ಕುಟುಂಬದವರಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು. ಪದವಿ ವ್ಯಾಸಂಗ ಮಾಡುತ್ತಿರುವ ತರುಣ್‌ನ ಸಹೋದರಿಯ ವಿದ್ಯಾಭ್ಯಾಸಕ್ಕೆ ಆತನೇ ಶುಲ್ಕ ಕಟ್ಟುವ ವ್ಯವಸ್ಥೆ ಮಾಡುತಿದ್ದ ಎಂದು ಆತನ ಅಜ್ಜಿ ಹೇಳಿದಾಗ, ಸಹೋದರಿಯ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳಿಗೆ ಪತ್ತೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ತಿಳಿಸಿದರು.ಈ ಸಂದÀರ್ಭ ಡಿ.ಎಫ್.ಓ. ಶಿವರಾಮ್ ಬಾಬು, ಮಾಕುಟ್ಟ ವಲಯ ಅರಣ್ಯಾಧಿಕಾರಿ ವಿ.ಎಂ. ದೇಚಮ್ಮ, ವೀರಾಜಪೇಟೆ ಗ್ರಾಮಾಂತರ ಠಾಣೆ ಸಬ್‌ಇನ್ಸ್ಪೆಕ್ಟರ್ ಡಿ.ಆರ್. ರವಿ ಕುಮಾರ್, ಎನ್.ಡಿ.ಆರ್.ಎಫ್. ಸಬ್‌ಇನ್ಸ್ಪೆಕ್ಟರ್ ಶಾಂತಿ ಲಾಲ್, ವೀರಾಜಪೇಟೆ ತಾಲೂಕು ಕೃಷ್ಣಪ್ಪ ಸ್ಥಾಪಿತ ಡಿಎಸ್‌ಎಸ್ ಸಂಚಾಲಕ ಹೆಚ್.ಸಿ. ರವಿ, ರಾಷ್ಟಿçÃಯ ಮಾನವ ಹಕ್ಕುಗಳ ಕೊಡಗು ಜಿಲ್ಲಾ ಅಧ್ಯಕ್ಷೆ ಪಡಿಕಲ್ ಕುಸುಮಾವತಿ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು, ಬಿಟ್ಟಂಗಾಲ ಗ್ರಾ.ಪಂ. ಸದಸ್ಯರಾದ ಕಂಜಿತAಡ ಉತ್ತಪ್ಪ, ನಾಯಡ ಬೋಪಣ್ಣ, ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಪೋಡಮಾಡ ಸುಕೇಶ್ ಭೀಮಯ್ಯ, ಗ್ರಾ.ಪಂ. ಸದಸ್ಯ ವಿನು ಉತ್ತಪ್ಪ, ಬಿಜೆಪಿ ತಾಲೂಕು ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ, ಬಿಜೆಪಿ ಪ್ರಮುಖ ತೀತಮಾಡ ಲಾಲ ಅಯ್ಯಣ್ಣ, ಸಹ ಪ್ರಮುಖ್ ಕುಪ್ಪಂಡ ದಿಲನ್, ತರುಣ್ ತಂದೆ ಮುನಿಯಪ್ಪ, ತಾಯಿ ಪುಷ್ಪ, ಅಜ್ಜಿ ಲಕ್ಷಿö್ಮ, ಸಂಬAಧಿಕರು, ಸ್ಥಳೀಯ ಗ್ರಾಮಸ್ಥರು ಹಾಗೂ ಬಾಳೆಲೆ ಗ್ರಾಮಸ್ಥರು ಇದ್ದರು.