ಬೆಂಗಳೂರು, ಸೆ. ೨೨: ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲಾ ಪೌರಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಳೆದ ಸಂಪುಟ ಸಭೆಯಲ್ಲಿ ೧೧ ಸಾವಿರ ಪೌರಕಾರ್ಮಿಕರ ಸೇವೆ ಖಾಯಂಗೆ ತೀರ್ಮಾನಿಸಲಾಗಿತ್ತು. ಇನ್ನೂ ೪೩ ಸಾವಿರ ಜನರು ಬಾಕಿ ಇದ್ದು ಅವರ ಸೇವೆ ಖಾಯಮಾತಿಗೂ ಒತ್ತಾಯ ಕೇಳಿ ಬಂದಿದೆ.

ನೇರ ಪಾವತಿ ವ್ಯವಸ್ಥೆ : ಖಾಯಂ ಆಗಿರುವ ಪೌರಕಾರ್ಮಿಕರಿಗೆ ೧೮ ಸಾವಿರ ರೂ. ವೇತನವಿದ್ದರೆ, ಹೊರಗುತ್ತಿಗೆಯವರಿಗೆ ಶೇ. ೫ ಜಿಎಸ್‌ಟಿ ಹಾಗೂ ಇತರೆ ಕಡಿತಳ ಬಳಿಕ ೧೨ ರಿಂದ ೧೩ ಸಾವಿರ ರೂ. ಸಿಗುತ್ತಿದೆ. ಅವರನ್ನು ಮೊದಲಿಗೆ ನೇರ ಪಾವತಿ ವ್ಯವಸ್ಥೆಗೆ ತಂದು ಹಂತ ಹಂತವಾಗಿ ಖಾಯಂ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.