ಇಂಗ್ಲೆAಡ್, ಸೆ. ೨೨: ಭಾರತ ಮಹಿಳೆಯರ ಕ್ರಿಕೆಟ್ ತಂಡವು ೨೩ ವರ್ಷಗಳ ಬಳಿಕ ಇಂಗ್ಲೆAಡಿನಲ್ಲಿ ಇಂಗ್ಲೆAಡ್ ಕ್ರಿಕೆಟ್ ತಂಡದ ವಿರುದ್ಧ ೫೦ ಓವರ್ ಪಂದ್ಯಾಟದಲ್ಲಿ ಸರಣಿ ಗೆಲುವು ಸಾಧಿಸಿದೆ. ಈ ಹಿಂದೆ ೧೯೯೯ ರಲ್ಲಿ ೨-೧ ಪಂದ್ಯಗಳ ಗೆಲುವಿನ ಅಂತರದಲ್ಲಿ ಸರಣಿ ಗೆದ್ದಿದ್ದ ಭಾರತ ತಾ.೨೧ ರಂದು ಇಂಗ್ಲೆAಡ್ ವಿರುದ್ಧ ೮೮ ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ೩ ಪಂದ್ಯಗಳ ಸರಣಿಯನ್ನು ೨-೦ ಗೆದ್ದು ಇತಿಹಾಸ ಸೃಷ್ಟಿಸಿದೆ. ತಂಡದ ನಾಯಕಿ ಹರ್ಮಾನ್ ಪ್ರೀತ್ ಕೌರ್ ಅವರ ಭರ್ಜರಿ ಶತಕದ ಮೂಲಕ (೧೧೧ ಎಸೆತಗಳಲ್ಲಿ ೧೪೫ ರನ್) ೫ ವಿಕೆಟ್‌ಗಳ ನಷ್ಟಕ್ಕೆ ೩೩೩ ರನ್ ಗಳಿಸಿದ ಭಾರತ, ಇಂಗ್ಲೆAಡ್‌ಅನ್ನು ೪೪.೨ ಓವರ್‌ಗಳಲ್ಲಿ ೨೪೫ ರನ್‌ಗಳಿಗೆ ಆಲ್‌ಔಟ್ ಮಾಡಲು ಸಫಲವಾಯಿತು. ತಾ.೨೪ ರಂದು ಸರಣಿಯ ೩ನೇ ಪಂದ್ಯ ನಡೆಯಲಿದೆ.