ಪೊನ್ನಂಪೇಟೆ, ಸೆ. ೨೩: ಅರಣ್ಯ ಪ್ರದೇಶದಲ್ಲಿ ಕೂಂಬಿAಗ್ ಕಾರ್ಯಾ ಚರಣೆ ವೇಳೆ ಅರಣ್ಯ ಇಲಾಖಾ ಹಂಗಾಮಿ ಸಿಬ್ಬಂದಿ ನಾಪತ್ತೆಯಾಗಿದ್ದು ನದಿ ಪಾಲಾಗಿರುವ ಶಂಕೆಯಿAದ ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮಾಕುಟ್ಟ ಮೀಸಲು ಅರಣ್ಯ ವಲಯದ ವಿ.ಬಾಡಗ ಗ್ರಾಮದಲ್ಲಿಂದು ಕೂಂಬಿAಗ್ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ತಂಡದಲ್ಲಿದ್ದ ಅರಣ್ಯ ವೀಕ್ಷಕ ದಿಢೀರ್ ನಾಪತ್ತೆಯಾಗಿದ್ದು, ಆತ ನದಿಗೆ ಬಿದ್ದಿರಬಹುದೆಂಬ ಶಂಕೆಯೊAದಿಗೆ ಹುಡುಕಾಟ ನಡೆಸಲಾಗುತ್ತಿದೆ. ಮಧ್ಯಾಹ್ನ ವೇಳೆ ಈ ಘಟನೆ ಸಂಭವಿಸಿದೆ. ಮೂಲತಃ ಬೆಂಗಳೂರು ನಿವಾಸಿಯಾಗಿರುವ, ಬಾಳೆಲೆಯಲ್ಲಿ ತನ್ನ ಸಂಬAಧಿಕರ ಮನೆಯಲ್ಲಿ ವಾಸವಿದ್ದುಕೊಂಡು ಮಾಕುಟ್ಟ ಅರಣ್ಯ ವಲಯದಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದ ತರುಣ್‌ಕುಮಾರ್ ನಾಪತ್ತೆಯಾಗಿರುವ ಸಿಬ್ಬಂದಿ. ಮಧ್ಯಾಹ್ನ ವೇಳೆ ಘಟನೆ ಸಂಭವಿಸಿದ್ದರೂ ಅರಣ್ಯ ಇಲಾಖೆ ಯವರಿಂದ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ತಡರಾತ್ರಿ ವೇಳೆಗೆ ಮಡಿಕೇರಿಯಿಂದ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ಹುಡುಕಾಟದಲ್ಲಿ ತೊಡಗಿಕೊಂಡಿದೆ. ತರುಣ್ ನಾಪತ್ತೆಯಾಗಿರುವ ಬಗ್ಗೆ ಅದನ್ನು ಇಲಾಖಾ ಸಿಬ್ಬಂದಿಗಳು ಬೆಂಗಳೂರಿ ನಲ್ಲಿರುವ ಆತನ ಕುಟುಂಬದವರಿಗೆ ವಿಷಯ ತಿಳಿಸಿದ್ದು, ಕುಟುಂಬದವರು ಜಿಲ್ಲೆಗೆ ಆಗಮಿಸುವವರಿದ್ದಾರೆ.

- ಚನ್ನನಾಯಕ್