ಕೂಡಿಗೆ, ಸೆ ೨೩: ಇಲ್ಲಿನ ಸೈನಿಕ ಶಾಲೆಯ ೨೪ನೇ ಆಡಳಿತ ಮಂಡಳಿ ಸಭೆ, ಹವಾಮಾನ ಕೇಂದ್ರ ಉದ್ಘಾಟನೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾಯುಸೇನೆಯ ಆಡಳಿತ, ತರಬೇತಿ ವಿಭಾಗÀದ ಹಿರಿಯ ಅಧಿಕಾರಿ ಹಾಗೂ ಸೈನಿಕ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಏರ್‌ವೈಸ್ ಮಾರ್ಷಲ್ ಪಿ.ಕೆ. ಘೋಷ್ ಶಾಲೆಯ ಆವರಣದಲ್ಲಿರುವ ವೀರ ಯೋಧರ ಸ್ಮಾರಕಕ್ಕೆ ಪುಷ್ಪಾಂಜಲಿ ಯನ್ನು ಸಲ್ಲಿಸುವುದರ ಮೂಲಕ ಗೌರವ ಸಮರ್ಪಿಸಿದರು.

ನಂತರ ಶಾಲೆಯ ಆವರಣದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟಿರುವ ಹವಾಮಾನ ಕೇಂದ್ರವನ್ನು ಉದ್ಘಾಟಿಸಿದರು. ಈ ಕೇಂದ್ರವು ಉಷ್ಣಾಂಶ ಮಾಪನ, ಅನಿಮೊ ಮೀಟರ್, ಮಳೆ ಮಾಪನ, ವಾಯು ದಿಕ್ಸೂಚಿ, ಸ್ಟಿವನ್ ಸನ್ ಸ್ಕಿçÃನ್ ಮೊದಲಾದ ಆಧುನಿಕ ಉಪಕರಣ ಗಳನ್ನೊಳಗೊಂಡಿದ್ದು, ವಿದ್ಯಾರ್ಥಿಗಳ ಚಟುವಟಿಕೆ ಆಧಾರಿತ ಕಲಿಕೆಗೆ ಪೂರಕವಾಗಿದೆ.

(ಮೊದಲ ಪುಟದಿಂದ) ನಂತರ ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆಯನ್ನು ಪ್ರಶಂಸಿಸುವುದ ರೊಂದಿಗೆ, ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹುದ್ದೆಗಳಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು. ಸೈನಿಕ ಶಾಲೆಯು ವಸತಿಯುತ ಶಾಲೆಯಾಗಿದ್ದು, ಇಲ್ಲಿ ಸಂಬAಧಗಳ ದೃಢತೆಗೆ ಹೆಚ್ಚಿನ ಅವಕಾಶಗಳಿವೆ ಯೆಂದು ತಿಳಿಸುತ್ತಾ, ಸೈನಿಕ ಶಾಲೆ ಕೊಡಗು ಅಂರ‍್ರಾಷ್ಟಿçÃಯ ಮಟ್ಟದ ಸೌಲಭ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಸದ್ಭಳಕೆ ಮಾಡಿಕೊಳ್ಳುವುದರೊಂದಿಗೆ, ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಶಾಲೆಯ ವಿದ್ಯಾರ್ಥಿನಿಯರು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರದಡಿಯಲ್ಲಿ ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಗೀತೆಯನ್ನು ಪ್ರದರ್ಶಿಸಿದರು. ಹಾಗೆಯೇ ಶಾಲಾ ವಿದ್ಯಾರ್ಥಿಗಳು ‘ಮಹಿಳಾ ಸಬಲೀಕರಣ’ ವಿಷಯಾಧಾರಿತ ಕಿರು ನಾಟಕವನ್ನು ಪ್ರದರ್ಶಿಸುವು ದರೊಂದಿಗೆ, ಕರ್ನಾಟಕದ ಜನಪದ ನೃತ್ಯಗಳ ಲ್ಲೊಂದಾದ ಕಂಸಾಳೆ ನೃತ್ಯವನ್ನು ಸಾದರಪಡಿಸಿದರು. ಕಾರ್ಯಕ್ರಮದಲ್ಲಿ ಕೆಡೆಟ್ ಶರಣಯ್ಯ ಸ್ವಾಮಿ ಸ್ವಾಗತಿಸಿ, ಕೆಡೆಟ್ ಹಿಮಾಂಶು, ಕೆಡೆಟ್ ಸರ್ವೇಶ್ ನಿರೂಪಿಸಿ, ಕೆಡೆಟ್ ವಿಷ್ಣು ವಂದಿಸಿದರು.

ಸಭೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಕಮಾಂಡ್ ಎಜುಕೇಷನ್ ಆಫೀಸರ್, ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವಿ. ಪ್ರಸಾದ್, ಕೊಡಗು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.