ಮಡಿಕೇರಿ, ಸೆ. ೨೩: ನಿಮ್ಮ ಸುತ್ತ ಮುತ್ತ ಕೆಲ ಅನಾಗರಿಕ ವ್ಯಕ್ತಿಗಳು ಎಲ್ಲೆಂದರಲ್ಲಿ ಕಸ ಎಸೆದು ಮಾಲಿನ್ಯ ಸೃಷ್ಟಿಸುತ್ತಿದ್ದಾರೆಯೇ? ಇಂತಹ ಸಂದರ್ಭಗಳಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ : ನಿಮ್ಮ ವ್ಯಾಪ್ತಿಯಲ್ಲಿ 'bಟಚಿಛಿಞ sಠಿoಣs' (ಅಕ್ರಮವಾಗಿ ಕಸ ಎಸೆಯುವದಕ್ಕೆ ಕುಖ್ಯಾತಿ ಪಡೆದಿರುವ ಜಾಗ) ಗುರುತಿಸಿ ಫೋಟೋವನ್ನು ಕ್ಲಿಕ್ಕಿಸಿ ವಾಟ್ಸಾö್ಯಪ್ ಮೂಲಕ ಮೊ : ೮೧೯೭೪೪೫೨೦೨ ಗೆ ಅಥವಾ sbmಞoಜಚಿgu@gmಚಿiಟ.ಛಿom ಗೆ ಮೇಲ್ ಮಾಡಿ ಜಾಗದ ಬಗ್ಗೆ ಮಾಹಿತಿ ನೀಡಿದಲ್ಲಿ ಬಹುಮಾನ ಗೆಲ್ಲಬಹುದು.
ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಚ್ಛತಾ ಹೀ ಸೇವಾ -೨೦೨೨ ಅಂಗವಾಗಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ ೨ ರವರೆಗೆ ಫೋಟೋ ತೆಗೆದು ಬಹುಮಾನ ಗೆಲ್ಲುವ ಕಾರ್ಯಕ್ರಮ ಚಾಲ್ತಿಯಲ್ಲಿರಲಿದ್ದು ಸಾರ್ವಜನಿಕರು ಭಾಗವಹಿಸಿ ಸಹಕರಿಸುವಂತೆ ಕೋರಿದೆ.