ಮಡಿಕೇರಿ, ಸೆ. ೨೩: ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಈ ಬಾರಿ ಅದ್ಧೂರಿಯಾಗಿ ಆಯುಧ ಪೂಜಾ ಸಮಾರಂಭ ನಡೆಸಲಾಗುವುದಾಗಿ ಸಂಘದ ಪ್ರಕಟಣೆ ತಿಳಿಸಿದೆ.

ಈ ಬಾರಿಯು ಸಂಘದ ವತಿಯಿಂದ ೨೯ನೇ ವರ್ಷದ ಆಯುಧ ಪೂಜೆ ಪ್ರಯುಕ್ತ ಅಕ್ಟೋಬರ್ ೪ ರಂದು ಮಧ್ಯಾಹ್ನ ೨:೩೦ ಗಂಟೆಗೆ ಅಲಂಕೃತ ವಾಹನಗಳಿಗೆ ಪೂಜಾ ಕಾರ್ಯಕ್ರಮ ನಂತರ ೩ ಗಂಟೆಗೆ ವಾಹನಗಳ ಮೆರವಣಿಗೆ ನಡೆಯಲಿದೆ. ಸಂಜೆ ೫ ರಿಂದ ೭ ಗಂಟೆಯವರೆಗೆ ಪಾಂಡಾಣೆ ಮೈದಾನದಲ್ಲಿನ ವೇದಿಕೆಯಲ್ಲಿ ಮೂರ್ನಾಡು ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ೭ ರಿಂದ ೮.೩೦ ರವರೆಗೆ ಮುಖ್ಯ ಅತಿಥಿಗಳಿಂದ ಆಯುಧ ಪೂಜೆಯ ವಿಶೇಷ ಭಾಷಣ ಮತ್ತು ಆಯ್ಕೆಯಾದ ಅಲಂಕೃತ ವಾಹನ ಹಾಗೂ ಅಂಗಡಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು.

ರಾತ್ರಿ ೮.೩೦ ರಿಂದ ೯.೩೦ ರವರೆಗೆ ಮೈಸೂರಿನ ಡೈಮಂಡ್ ಮಾಯಾ ಜಾದೂಗರ್ ಅವರಿಂದ ಜಾದೂ ಕಾರ್ಯಕ್ರಮ ಹಾಗೂ ೯.೩೦ ಕ್ಕೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಜರುಗಲಿದೆ. ಸ್ಥಳೀಯ ಮಕ್ಕಳ ನೃತ್ಯ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಅಕ್ಟೋಬರ್ ೨ರ ಸಂಜೆ ೫ ಗಂಟೆಯ ಒಳಗಾಗಿ ಮೊ. ೯೯೦೨೩೨೨೨೭೮ ಅನ್ನು ಸಂಪರ್ಕಿಸಲು ಕೋರಿದೆ.

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಲ್ಲಿ ಒಟ್ಟು ೭೫ ಸದಸ್ಯರಿದ್ದು, ೨೦೨೧-೨೨ನೇ ಸಾಲಿನಲ್ಲಿ ಸಂಘದ ಸದಸ್ಯರ ಅನಾರೋಗ್ಯದ ನಿಮಿತ್ತ ಸಂಘದಿAದ ರೂ.೪೨,೦೦೦ ಧನಸಹಾಯ ಮಾಡಲಾಗಿದೆ ಹಾಗೂ ಮೂರ್ನಾಡಿನ ನಾಗರಿಕರಿಗೆ ಕಣ್ಣಿನ ಚಿಕಿತ್ಸೆಗಾಗಿ ರೂ.೧೦,೦೦೦ ಧನಸಹಾಯ ಮಾಡಲಾಗಿದೆ ಎಂದು ಅಧ್ಯಕ್ಷ ಬಿ.ಎಸ್. ಅರುಣ್ ರೈ ಮಾಹಿತಿ ನೀಡಿದ್ದಾರೆ.