ಕೂಡಿಗೆ, ಸೆ. ೨೩: ಇಲ್ಲಿನ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಬೆಳವಣಿಗೆಗೆ ಪೂರಕವಾದ ಅನೇಕ ವಿಷಯಗಳ ಚರ್ಚೆಗಳು ನಡೆದವು. ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿವಿಧ ಹಂತದ ಕಟ್ಟಡ ಕಾಮಗಾರಿ ಪ್ರಗತಿಯ ಬಗ್ಗೆ ಮತ್ತು ಅಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ಹಾಜರಿದ್ದ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಸಂಘವು ಎಲ್ಲಾ ಸದಸ್ಯರ ಸಹಕಾರದೊಂದಿಗೆ ೫೦.೯೨ ಲಕ್ಷ ಲಾಭ ಗಳಿಸಿದೆ. ಸಂಘದ ಕಾರ್ಯಕ್ಷೇತ್ರಕ್ಕೆ ಸೇರಿದ ಎಲ್ಲಾ ವರ್ಗದ ರೈತರಿಗೆ ಅನು ಕೂಲವಾಗುವಂತೆ ಬೈಲಾ ತಿದ್ದುಪಡಿ ಮಾಡಿಕೊಂಡು ಸದಸ್ಯತ್ವ ಠೇವಣಿ ಸೇರಿದಂತೆ ಎಲ್ಲಾ ವಿಧಗಳ ಸಾಲವನ್ನು ಸದಸ್ಯರುಗಳಿಗೆ ನೀಡಲಾ ಗುತ್ತದೆ.
ಸಂಘದ ಅಭಿವೃದ್ಧಿ ದೃಷ್ಟಿಯಿಂದ ರೈತರಿಗೆ ಟ್ರಾಕ್ಟರ್, ಮುಂತಾದ ಕೃಷಿ ಉಪಕರಣಗಳನ್ನು ಸಂಘದ ಮುಖಾಂತರ ಸರ್ಕಾರದ ನಿಯಮಗಳಿಗೊಳಪಟ್ಟು ಕೃಷಿ ಇಲಾಖೆ ಸಹಕಾರದೊಂದಿಗೆ ಮಾರಾಟ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಎಂಎಸ್‌ಸಿ ಸಾಲದ ಮುಖಾಂತರ ಗೋದಾಮು ನಿರ್ಮಾಣ ಮಾಡಿ ರೈತರಿಗೆ ಅನುಕೂ ಲವಾಗುವ ರೀತಿಯಲ್ಲಿ ಕೀಟನಾಶಕ, ಔಷಧಿ ಮೊದಲಾದ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ರೈತರ ಸಹಕಾರ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಕಾಲೇಜು ಹಂತದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ರೈತರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಮೇಲ್ವಿಚಾರಕ ಜಯಪ್ರಕಾಶ್ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಟಿ.ಪಿ. ಹಮೀದ್, ನಿರ್ದೇಶಕರಾದ ತಮ್ಮಣೆಗೌಡ, ಕೆ.ಟಿ. ಅರುಣ್ ಕುಮಾರ್, ಹೆಚ್.ಆರ್. ಪಾರ್ವತಮ್ಮ, ಕೃಷ್ಣಗೌಡ, ವಿ. ಬಸಪ್ಪ, ರಮೇಶ್, ಕೆ.ಕೆ. ಪ್ರವಿತ್ರ, ನಾಗರಾಜ್, ಕೆ.ಜೆ. ಕುಮಾರ್, ಮೇಲ್ವಿಚಾರಕ ಜಯಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ ಹಾಜರಿದ್ದರು. ಸ್ವಾಗತ ಕೆ.ಟಿ. ಅರುಣ್‌ಕುಮಾರ್ ವರದಿ ವಾಚನ ಮೀನಾ ಅವರು ನಡೆಸಿ ಕೊಟ್ಟರು. ತಮ್ಮಣೆಗೌಡ ವಂದಿಸಿದರು.