ಮಡಿಕೇರಿ, ಸೆ. ೨೩: ಕೊಡಗು ಗೌಡ ಸಮಾಜ, ವಿಶ್ವೇಶ್ವರಯ್ಯ ಲೇಔಟ್, ಬೆಂಗಳೂರಿನಲ್ಲಿ ಸಂಭ್ರಮದ ಕೈಲ್ ಮುಹೂರ್ತ ಆಚರಣೆ ನಡೆಯಿತು. ಈ ವೇಳೆ ಸಾಂಪ್ರದಾಯಿಕ ಆಯುಧ ಪೂಜೆ ನಡೆಯಿತು. ಜನಾಂಗದ ಬಾಂಧವರಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
೨೦೨೧-೨೨ನೇ ಸಾಲಿನಲ್ಲಿ ೧೦ನೇ ಮತ್ತು ೧೨ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗೌಡ ಜನಾಂಗದ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ವಿಶೇಷವಾಗಿ ರಾಜ್ಯ, ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ವಿಶೇಷವಾದ ಸನ್ಮಾನ ಮಾಡಿ ಗೌರವಿಸಲಾಯಿತು.
ಮುಕ್ಕಾಟಿ ದಿವ್ಯಾ ಅರುಣ್, ತಡಿಯಪ್ಪನ ರಿಶಿಕ ಬೆಳ್ಳಿಯಪ್ಪ, ಮರದಾಳು ಯಶಿಕ, ತೋಟಂಬೈಲು ಹೇಮಂತ್ ಮುದ್ದಪ್ಪ, ಪೊನ್ನಚ್ಚನ ಜಯಶ್ರೀ ನವೀನ್, ಹೊಸೋಕ್ಲು ಚಿಣ್ಣಪ್ಪ, ಸೂದನ ಡಾಲಿ ಅವರುಗಳು ಸನ್ಮಾನ ಸ್ವೀಕರಿಸಿದರು.
ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ ಅವರು ಮಾತನಾಡಿ, ಜನಾಂಗದ ಸಂಸ್ಕೃತಿ, ಆಚಾರ, ವಿಚಾರದ ಉಳಿವಿಗಾಗಿ ಸಮಾಜ ದಿಂದ ಇಂತಹ ಸಂತೋಷ ಕೂಟವನ್ನು ನಡೆಸಲಾಗುವುದು. ಗೌಡ ಜನಾಂಗ ದವರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೊಡಗು ಗೌಡ ಸಮಾಜದಿಂದ ಸಾಧಕರಿಗೆ ಬೇಕಾದ ಸಲಹೆ ಮತ್ತು ಅವಶ್ಯಕತೆ ಇದ್ದಲ್ಲಿ ಆರ್ಥಿಕ ಸಹಾಯವನ್ನು ಕೂಡ ಮಾಡುವುದಾಗಿ ತಿಳಿಸಿದರು. ಕೈಲ್ ಮುಹೂರ್ತ ಔತಣ ಕೂಟದೊಂದಿಗೆ ಸಾಂಪ್ರದಾಯಿಕ ವಾಲಗಕ್ಕೆ ಹಿರಿಯರು, ಕಿರಿಯರೆನ್ನದೆ ಕುಣಿದು ಸಂಭ್ರಮಿಸಿದರು.