ಕಾಂಗ್ರೆಸ್‌ನಿAದ ಪೇ ಸಿಎಂ ಪೋಸ್ಟರ್ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ ವಶಕ್ಕೆ

ಬೆಂಗಳೂರು, ಸೆ. ೨೩: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪ ಮುಂದಿಟ್ಟುಕೊAಡು ಪ್ರತಿಪಕ್ಷ ಕಾಂಗ್ರೆಸ್ ಆರಂಭಿಸಿರುವ ‘ಪೇ ಸಿಎಂ ಪೋಸ್ಟರ್’ ಅಭಿಯಾನ ಶುಕ್ರವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸ್ವತಃ ಪೋಸ್ಟರ್ ಅಂಟಿಸಲು ಮುಂದಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ರೇಸ್‌ಕೋರ್ಸ್ ರಸ್ತೆಯಲ್ಲಿ ಪೋಸ್ಟರ್ ಅಂಟಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ರಂದೀಪ್ ಸಿಂಗ್ ಸುರ್ಜೇವಾಲಾ ಮತ್ತಿತರ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಳಿತಾರೂಢ ಬಿಜೆಪಿಯ ನಾಯಕರು ಬಿಲ್ಡರ್‌ಗಳು, ಗುತ್ತಿಗೆದಾರರು ಮತ್ತು ಇತರರಿಂದ ೪೦ ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪಗಳ ಭಾಗವಾಗಿ ಕಾಂಗ್ರೆಸ್, ಪೇ ಸಿಎಂ ಅಭಿಯಾನ ನಡೆಸಿ ಪೋಸ್ಟರ್ ಹಂಚಲು ಮುಂದಾಗಿತ್ತು. ಈ ಪ್ರತಿಭಟನೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಬಿಎಂಎಸ್ ಶಿಕ್ಷಣ ಟ್ರಸ್ಟ್ ಅಕ್ರಮದ ಬಗ್ಗೆ ಪ್ರಧಾನಿಗೆ ದೂರು

ಬೆಂಗಳೂರು, ಸೆ. ೨೩: ಬಿಎಂಎಸ್ ಟ್ರಸ್ಟ್ ಅಕ್ರಮ ಪ್ರಕರಣದ ಕುರಿತು ರಾಜ್ಯ ಸರಕಾರ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕೆಲ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾಖಲೆ ಸಮೇತ ಪತ್ರ ಬರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುಡುಗಿದ್ದಾರೆ. ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ನಂತರ ಅವರು ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು. ಕರ್ನಾಟಕದಲ್ಲಿ ಮೊತ್ತ ಮೊದಲಿಗೆ ಪರ್ಸಂಟೇಜ್ ವಿಷಯ ಎತ್ತಿದವರೇ ಪ್ರಧಾನಿ ಮೋದಿ ಅವರು. ಕೆಂಪುಕೋಟೆ ಮೇಲೆ ಆಗಸ್ಟ್ ೧೫ ರಂದು ಅವರು ಮಾಡಿದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಭಾಷಣದಲ್ಲಿಯೂ ಸೇರಿದಂತೆ ಎಲ್ಲ ಕಡೆ ಕಮಿಷನ್ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಎಂದೆಲ್ಲ ಹೇಳುತ್ತಲೇ ಇದ್ದಾರೆ. ಹಾಗಾದರೆ, ಅವರದ್ದೇ ಬಿಜೆಪಿ ಪಕ್ಷದ ಸರಕಾರ ಇರುವ ಕರ್ನಾಟಕದಲ್ಲಿ ನಡೆಯುತ್ತಿರುವುದು ಪ್ರಧಾನಿಗೆ ಗೊತ್ತಿಲ್ಲವೆ? ಎಂದು ಅವರು ಖಾರವಾಗಿಯೇ ಪ್ರಶ್ನಿಸಿದರು. ಹಾಗೆ ನೋಡಿದರೆ ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಅವರದೇ ಪಕ್ಷದ ಸರಕಾರದಲ್ಲಿ ಸಚಿವರೊಬ್ಬರ ಬ್ರಹ್ಮಾಂಡ ಅಕ್ರಮ ಕುರಿತಂತೆ ನಾನೇ ದಾಖಲೆಗಳ ಸಮೇತ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ. ಕಾದು ನೋಡೋಣ, ಪ್ರಧಾನಿ ಅವರು ಏನು ಕ್ರಮ ಕೈಗೊಳ್ಳುತ್ತಾರೋ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಎಸ್‌ಟಿ ಮೀಸಲಾತಿ ಹೆಚ್ಚಳ: ಸರ್ವಪಕ್ಷ ಸಭೆ ಕರೆದು ತೀರ್ಮಾನ

ಬೆಂಗಳೂರು, ಸೆ. ೨೩: ಎಸ್‌ಟಿ ಮೀಸಲಾತಿಯನ್ನು ಶೇ. ೭.೫ ರಷ್ಟು ಹೆಚ್ಚಿಸುವ ವಿಚಾರಕ್ಕೆ ಸಂಬAಧಿಸಿದAತೆ ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ. ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿ ಸಿಎಂ, ಎರಡು ಸಮಿತಿಗಳ ವರದಿ ಬಂದಿದೆ. ಸುಭಾಷ್ ಆಡಿ ಹಾಗೂ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿಗಳಿಂದ ವರದಿ ಬಂದಿದೆ. ಆ ವರದಿ ಇಟ್ಟುಕೊಂಡು ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಮುಂದಿನ ತೀರ್ಮಾನ ಮಾಡ್ತೀನಿ. ಕೆಲವೇ ದಿನಗಳಲ್ಲಿ ಸರ್ವಪಕ್ಷ ಸಭೆ ಕರೆಯುತ್ತೇನೆ ಎಂದರು. ಈ ಸಮಸ್ಯೆ ಬಗೆಹರಿಸಲು ಸೂಕ್ತ ನಿರ್ಧಾರ ಮಾಡುತ್ತೇನೆ. ಆ ಜನಾಂಗಕ್ಕೆ ನ್ಯಾಯ ಕೊಡಿಸುವ ಬಗ್ಗೆ ಎರಡು ಮಾತಿಲ್ಲ. ಅವರ ಜನಸಂಖ್ಯೆಗೆ ಮೀಸಲಾತಿ ಕೊಡಲು ಸರ್ಕಾರ ಬದ್ಧವಿದೆ. ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡ್ತೀವಿ. ಅವರ ಬೇಡಿಕೆಗಳಿಗೆ ಸ್ಪಂದಿಸುವ ಇಚ್ಚೆ ಸರ್ಕಾರಕ್ಕೆ ಇದೆ. ಸರ್ವಪಕ್ಷ ಸಭೆಯಲ್ಲಿ ಕಾನೂನಾತ್ಮಕವಾಗಿ ಚರ್ಚಿಸಿ ನಿರ್ಧಾರ ಮಾಡ್ತೀವಿ. ಹೀಗಾಗಿ ಧರಣಿ ಮಾಡ್ತಿರುವ ಸ್ವಾಮೀಜಿಗಳು ಪ್ರತಿಭಟನೆ ಕೈ ಬಿಡಬೇಕು ಎಂದು ಸದನದ ಮೂಲಕ ಮನವಿ ಮಾಡುತ್ತೇನೆ ಎಂದರು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿಗೂಡಿಸಿ, ಇದರಲ್ಲಿ ಸರ್ಕಾರ ವಿಳಂಬ ಮಾಡಬಾರದು, ಆದಷ್ಟು ಬೇಗ ಸರ್ಕಾರ ಸರ್ವಪಕ್ಷ ಸಭೆ ಕರೆದು ಸೂಕ್ತ ನಿರ್ಣಯ ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ನೊಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆಯುತ್ತೇನೆ ಎಂದು ಸಿಎಂ ತಿಳಿಸಿದರು.

ರೂ. ೧೩.೬೫ ಕೋಟಿ ಮೌಲ್ಯದ ೧.೨೪ ಕೆ.ಜಿ. ಕೊಕೇನ್ ವಶ

ಬೆಂಗಳೂರು, ಸೆ. ೨೩: ಇಥಿಯೋಪಿಯಾದಿಂದ ಬಂದಿಳಿದ ಪ್ರಯಾಣಿಕರೊಬ್ಬರಿಂದ ೧೩.೬೫ ಕೋಟಿ ರೂಪಾಯಿ ಮೌಲ್ಯದ ೧.೨೪ ಕೆ.ಜಿ. ಕೊಕೇನ್‌ಅನ್ನು ಬೆಂಗಳೂರು ಏರ್‌ಪೋರ್ಟ್ನ ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್ (ಸಿಐಯು) ಹೊರತೆಗೆದಿದೆ. ೫೩ ವರ್ಷದ ಪ್ರಯಾಣಿಕನ ವಿರುದ್ಧ ಮಾದಕ ದ್ರವ್ಯ ಮತ್ತು ಉದ್ದೀಪನ ವಸ್ತುಗಳ ಸೇವನೆ ತಡೆ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಮ್ಯಾಜಿಸ್ಟೆçÃಟ್ ಮುಂದೆ ಹಾಜರುಪಡಿಸಲಾಗಿದೆ. ಘಾನಾ ಮೂಲದ ಬಾಹ್ ಅಂಪಾಡು ಕ್ವಾಡ್ವೊ ತಾ. ೧೯ ರಂದು ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಇಥಿಯೋಪಿಯನ್ ಏರ್‌ಲೈನ್ಸ್(ಇಟಿ೬೯೦) ಮೂಲಕ ಆಗಮಿಸಿದ್ದರು ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ. ಕ್ವಾಡ್ವೊನನ್ನು ತಡೆದಾಗ ಆತ ಮಾದಕ ವಸ್ತುವನ್ನು ಮರೆಮಾಚುವ ಮೂಲಕ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಕಂಡುಬAದಿದೆ. ಹೀಗಾಗಿ ನಾವು ಕ್ವಾಡ್ವೊನನ್ನು ಆಸ್ಪತ್ರೆಗೆ ಕರೆದೊಯ್ದು ಎರಡು ದಿನಗಳ ಅವಧಿಯಲ್ಲಿ ಎಲ್ಲಾ ಮಾಧಕ ವಸ್ತುಗಳನ್ನು ಹೊರಕ್ಕೆ ತೆಗೆಸಿದ್ದೇವೆ ಎಂದು ಅಧಿಕಾರಿಗಳು ಹೇಳಿದರು. ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು ಆತ ನಿಯಮಿತ ಕಳ್ಳಸಾಗಾಣಿಕೆದಾರರೇ ಅಥವಾ ಇದು ಅವರ ಮೊದಲ ಪ್ರಯತ್ನವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ಸೇರಿಸಿದೆ.

ಹಾಕಿ ಇಂಡಿಯಾ ನೂತನ ಅಧ್ಯಕ್ಷರಾಗಿ ದಿಲೀಪ್ ಟಿರ್ಕಿ

ನವದೆಹಲಿ, ಸೆ. ೨೩: ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಒಲಿಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತ ದಿಲೀಪ್ ಟಿರ್ಕಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಿಲೀಪ್ ಅವರ ವಿರುದ್ಧ ಉತ್ತರ ಪ್ರದೇಶ ಹಾಕಿ ಮುಖ್ಯಸ್ಥ ರಾಕೇಶ್ ಕತ್ಯಾಲ್ ಮತ್ತು ಜಾರ್ಖಂಡ್ ಹಾಕಿ ಮುಖ್ಯಸ್ಥ ಬೋಲಾ ನಾಥ್ ಸಿಂಗ್ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ ಇವರಿಬ್ಬರು ತಮ್ಮ ನಾಮಪತ್ರಗಳನ್ನು ಹಿಂಪಡೆದ ನಂತರ ಹೊಸ ಅಧ್ಯಕ್ಷರನ್ನು ಘೋಷಿಸಲಾಯಿತು. ಹಾಕಿ ಇಂಡಿಯಾ ಚುನಾವಣೆಯನ್ನು ಅಕ್ಟೋಬರ್ ೧ ರಂದು ನಡೆಸಲು ನಿರ್ಧರಿಸ ಲಾಗಿತ್ತು. ಆದರೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಟಿರ್ಕಿ ಅವರನ್ನು ಇಂದೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ದಿಲೀಪ್ ಟಿರ್ಕಿ ಅವರು ದೇಶದ ಅತ್ಯಂತ ಉನ್ನತ ಹುದ್ದೆ ಅಲಂಕರಿಸಿದ ಹಾಕಿ ಆಟಗಾರರಲ್ಲಿ ಒಬ್ಬರು. ಈ ಹಿಂದೆ ಭಾರತ ಪುರುಷರ ಹಾಕಿ ತಂಡವನ್ನು ಮುನ್ನಡೆಸಿದ್ದ ಅವರು ೧೯೯೬, ೨೦೦೦ ಮತ್ತು ೨೦೦೪ರಲ್ಲಿ ಒಲಿಂಪಿಕ್ಸ್ ತಂಡಗಳ ಭಾಗವಾಗಿದ್ದರು. ೨೦೦೩ ಮತ್ತು ೨೦೦೭ರಲ್ಲಿ ಏಷ್ಯಾ ಕಪ್ ವಿಜೇತ ತಂಡಗಳ ಭಾಗವಾಗಿದ್ದರು.

ಐಸಿಎಂಆರ್ ನೂತನ ಮಹಾನಿರ್ದೇಶಕರಾಗಿ ಡಾ. ರಾಜೀವ್ ಬಹ್ಲ್ ನೇಮಕ

ನವದೆಹಲಿ, ಸೆ. ೨೩: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನೂತನ ಮಹಾನಿರ್ದೇಶಕರಾಗಿ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿ ಡಾ. ರಾಜೀವ್ ಬಹ್ಲ್ ಅವರನ್ನು ಮೂರು ವರ್ಷಗಳ ಅವಧಿಗೆ ಶುಕ್ರವಾರ ನೇಮಕ ಮಾಡಲಾಗಿದೆ. ರಾಜೀವ್ ಬಹ್ಲ್ ಪ್ರಸ್ತುತ ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಾಯ್ತನ, ನವಜಾತ ಶಿಶು ಮತ್ತು ಹದಿಹರೆಯದವರ ಆರೋಗ್ಯ ಇಲಾಖೆ ಘಟಕದ ಮುಖ್ಯಸ್ಥರಾಗಿದ್ದಾರೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಮೂರು ವರ್ಷಗಳ ಅವಧಿಗೆ ಐಸಿಎಂಆರ್ ಮಹಾನಿರ್ದೇಶಕರಾಗಿ ಮತ್ತು ಸೆಕ್ರೆಟರಿ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ರಿಸರ್ಚ್ ಡೈರೆಕ್ಟರ್ ಜನರಲ್ ಆಗಿ ಡಾ. ರಾಜೀವ್ ಬಹ್ಲ್ ಅವರನ್ನು ನೇಮಕ ಮಾಡಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.