ಗೋಣಿಕೊಪ್ಪಲು, ಸೆ. ೨೩: ಈ ನಾಡಿನ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಹಿಳೆಯರು ಆಸಕ್ತಿ ವಹಿಸಬೇಕು. ಮಹಿಳೆಯರು ತಮ್ಮ ಹುಟ್ಟು ಹಬ್ಬದ ನೆನಪಿನಲ್ಲಿ ವರ್ಷಕ್ಕೊಂದಾದರೂ ಗಿಡಗಳನ್ನು ನೆಡುವ ಮೂಲಕ ಅದನ್ನು ಪೋಷಿಸಬೇಕು. ಇದರಿಂದ ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಪ್ರಯತ್ನವಾಗಲಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಕೊಟ್ಟಂಗಡ ವಿಜು ದೇವಯ್ಯ ಕರೆ ನೀಡಿದರು.
ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವ ಗೋಣಿಕೊಪ್ಪಲುವಿನ ಕಾವೇರಿ ಪೊಮ್ಮಕ್ಕಡ ಕೂಟವು ಪರಿಸರದ ಕಾಳಜಿ ವಹಿಸಿ ಪ್ರತಿ ವರ್ಷ ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ. ಈ ಬಾರಿ ಹುದಿಕೇರಿ ಮಂದ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಿಗೊತ್ತಿ ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿದೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ನಾಗರಿಕನು ವಿಶೇಷ ಕಾಳಜಿ ವಹಿಸಬೇಕಾಗಿದೆ. ಇದರಿಂದ ನಮ್ಮ ಪರಿಸರವನ್ನು ಕಾಪಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಸಸಿ ನೆಡುವ ಕಾರ್ಯವನ್ನು ವರ್ಷಕ್ಕೊಮ್ಮೆ ಯಾದರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ತಿಳಿಸಿದರು.
ಹಿರಿಯರಾದ ಬೊಳ್ಳಾಜಿರ ಸುಶೀಲ ಅಶೋಕ್ ಅವರ ಮುಂದಾಳತ್ವದಲ್ಲಿ ಹುದಿಕೇರಿ ಕೊಡವ ಸಮಾಜ ಸಮೀಪವಿರುವ ಮಡ್ಕೋಡ್ ಮಂದ್ನಲ್ಲಿ ಹಲವಾರು ಜಾತಿಯ ಗಿಡಗಳನ್ನು ನೆಡಲಾಯಿತು. ಹುದಿಕೇರಿ ಮಡ್ಕೋಡ್ ಮಂದ್ನ ತಕ್ಕರಾದ ಬೊಳ್ಳಾಜಿರ ನಂಜಪ್ಪ, ಚೆಕ್ಕೇರ ರಾಜೇಶ್, ಅಜ್ಜಿಕುಟ್ಟಿರ ಗಿರೀಶ್ ಇವರ ಸಮ್ಮುಖದಲ್ಲಿ ಮುಂಜಾನೆಯಿAದಲೇ ಮಂದ್ನ ಪರಿಸರವನ್ನು ಕಾವೇರಿ ಪೊಮ್ಮಕ್ಕಡ ಕೂಟದ ಮಹಿಳೆಯರು ಸುತ್ತಲಿನ ಪರಿಸರದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು ಶುಚಿಗೊಳಿಸಿದರು. ಮಡ್ಕೋಡ್ ಮಂದ್ನ ತಕ್ಕ ಪ್ರತಿನಿಧಿ ಚೆಕ್ಕೇರ ಗಿರೀಶ್ ಮಾತನಾಡಿ, ಇತಿಹಾಸ ವಿರುವ ಮಂದ್ ಅನ್ನು ಶುಚಿಗೊ ಳಿಸುವ ಕಾರ್ಯದಲ್ಲಿ ಮುಂದೆ ಬಂದಿರುವುದು ಶ್ಲಾಘನೀಯ. ಮಂದ್ಗೆ ವಿಶೇಷ ಸ್ಥಾನಮಾನವಿದೆ. ಅಲ್ಲದೆ ಪವಿತ್ರ ಜಾಗವೂ ಆಗಿದೆ. ಹಲವು ಕಟ್ಟಡಗಳನ್ನು ನಿರ್ಮಿಸಬಹುದು. ಆದರೆ ಮಂದ್ನ್ನು ನಿರ್ಮಿಸಲು ಸಾಧ್ಯವಿಲ್ಲ. ಊರಿಗೊಂದು, ನಾಡಿಗೊಂದು ಇರುವ ಮಂದ್ಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಮಂದ್ನ ಪಾವಿತ್ರö್ಯತೆಯನ್ನು ಕಾಪಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಪ್ರತಿಷ್ಟ ಮಾದಯ್ಯ, ಖಜಾಂಚಿ ಅಡ್ಡೆಂಗಡ ಸವಿತ ನಂಜಪ್ಪ, ಹುದಿಕೇರಿ ಭಾಗದ ಪ್ರಮುಖರಾದ ಚಂಗುಲAಡ ಸೂರಜ್, ಮಂಡAಗಡ ಅಶೋಕ್, ಬೊಳ್ಳಾಜಿರ ಕರುಂಬಯ್ಯ, ಸುಧಿ, ಚಂಗುಲAಡ ಅಯ್ಯಪ್ಪ, ವಿನಯ್, ಚೆಕ್ಕೇರ ರಮೇಶ್ ಚಿಟ್ಟಿಯಪ್ಪ ಸೇರಿದಂತೆ ಕಾವೇರಿ ಪೊಮ್ಮಕ್ಕಡ ಕೂಟದ ಪದಾಧಿಕಾರಿ ಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.