ಕಡಂಗ, ಸೆ. ೨೦: ಸಿದ್ದಾ ಪುರ ಸಮೀ ಪದ ಕರಡಿ ಗೋಡು ಟೀಕ್‌ವುಡ್ ಎಸ್ಟೇಟ್ ಸಿದ್ದಾಪುರ ಇವರ ವತಿ ಯಿಂದ ಎಸ್ಟೇಟ್ ವ್ಯವಸ್ಥಾಪಕರು ಹಾಗೂ ಪಾಲಿಯೇಟಿವ್ ಕೇರ್ ಸ್ವಯಂ ಸೇವಕರಾದ ನೆಲ್ಲಿಹುದಿಕೇರಿಯ ಪ್ರೀತಿ ಮೆಡಿ ಕಲ್ಸ್ ಮಾಲೀಕ ಅನಿಲ್ ಅವರ ಪ್ರಯತ್ನದಿಂದ ಕಂಬೀರAಡ ಎ. ನಂಜಪ್ಪ ಮತ್ತು ಅವರ ಪತ್ನಿ ಬೃಂದ ನಂಜಪ್ಪರವರ ಜ್ಞಾಪಕಾರ್ಥವಾಗಿ ಕೊಡಗು ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ಪಾಲಿಯೇಟಿವ್ ಹೋಂ ಕೇರ್ ತಂಡಕ್ಕೆ ಅಂದಾಜು ಮೂವತ್ತು ಸಾವಿರ ರೂಪಾಯಿ ಬೆಲೆಬಾಳುವ ವೀಲ್ ಚೇರ್ ಹಾಗೂ ಇತರೆ ಪರಿಕರಗಳನ್ನು ಕಂಬೀರAಡ ಕುಟುಂಬಸ್ಥರು ಉದಾರವಾಗಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ಪಾಲಿಯೇಟಿವ್ ಕೇರ್ ತಂಡ ಜಿಲ್ಲೆಯಲ್ಲಿರುವ ಅನಾರೋಗ್ಯ ಪೀಡಿತ ಮನೆಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದು, ಪ್ರಸಕ್ತ ಜಿಲ್ಲೆಯ ೫೪೭ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ ಸಮಾಜದಲ್ಲಿ ನೊಂದವರಿಗೆ ನೆರವು ನೀಡಲು ಸಹ ಸಜ್ಜಾಗಿದೆ.