ಪಾಲಿಬೆಟ್ಟ, ಸೆ. ೨೦: ನಂ. ೨೮೦೪ ನೇ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ೪೭ ಲಕ್ಷದ ೯೦ ಸಾವಿರ ಲಾಭಗಳಿಸಿದೆ.

ಸಂಘವು ೧೦೦೫ ಸದಸ್ಯರುಗಳನ್ನು ಹೊಂದಿದ್ದು, ಪಾಲು ಬಂಡವಾಳ ರೂ. ೧೨೨.೯೬ ಲಕ್ಷಗಳು ೨೦೨೧-೨೨ನೇ ಸಾಲಿನಲ್ಲಿ ಸಂಘವು ೧೧೭ ಕೋಟಿ ೮೧ ಲಕ್ಷದ ವಹಿವಾಟನ್ನು ನಡೆಸಿರುವ ಸಂಘ ರೂ. ೨೬೨.೨೩ ಲಕ್ಷಗಳ ಕ್ಷೇಮನಿಧಿಯನ್ನು, ೧೩೪.೪೨ ಲಕ್ಷಗಳ ಇತರ ನಿಧಿಗಳನ್ನು, ರೂ ೨೫ ಕೋಟಿ ೪ ಲಕ್ಷ ೧೧ ಸಾವಿರಇತರ ಠೇವಣಿಗಳನ್ನು ಹೊಂದಿದೆ.

ಸAಘವು ಚೆನ್ನಯ್ಯನಕೋಟೆ ಮತ್ತು ಚೆನ್ನಂಗಿಯಲ್ಲಿ ಶಾಖೆಯನ್ನು ಹೊಂದಿದ್ದು ಸಂಘದ ಮಾರಾಟ ಶಾಖೆಯಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ರಸಗೊಬ್ಬರ, ಕ್ರೀಮಿನಾಶಕ ಕೃಷಿ ಸಲಕರಣೆಗಳು, ಪಿವಿಸಿ ಪೈಪ್ ಜಿಇ ಪೈಪ್ ಪ್ರೀಟಿಂಗ್‌ಗಳು ಸೀವೆಂಟ್, ಟಿಎಂಟಿ ಕಂಬಿಗಳು ಹೆಂಚು ಪೈಟ್ ಮಿಕ್ಸಿಂಗ್ ಮತ್ತು ಕೊಂಕಣ್ ಗ್ಯಾಸ್ ಲಭ್ಯವಿದೆ. ಸದಸ್ಯರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಇ - ಸ್ಟಾಂಪಿAಗ್, ಆರ್‌ಟಿಸಿ ಜೆರಾಕ್ಸ್ ಸೌಲಭ್ಯಗಳು ಕೂಡ ಇದ್ದು, ಪ್ರತಿ ವರ್ಷ ೧೦ನೇ ತರಗತಿ, ಪಿಯುಸಿ ಮತ್ತು ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಕ್ರೀಡಾಪಟುಗಳಿಗೆ ಹಾಗೂ ಸಂಘದಲ್ಲಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಸದಸ್ಯರುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತದೆ.

ತಾ, ೨೨ ರಂದು ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎ.ಎಸ್. ಶ್ಯಾಮ್‌ಚಂದ್ರ ಅಧ್ಯಕ್ಷತೆಯಲ್ಲಿ ಅನುಗ್ರಹ ಸಭಾಂಗಣದಲ್ಲಿ ನಡೆಯಲಿದೆ. ಸದಸ್ಯರ ಪಾಲು ಹಣದ ಮೇಲೆ ಶೇಕಡಾ ೧೮ ಡಿವಿಡೆಂಟ್‌ನ್ನು ನೀಡಲು ಸಂಘದ ಅಧ್ಯಕ್ಷ ಶ್ಯಾಮ್‌ಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಕೊಲ್ಲಿರ ಧರ್ಮಜ, ನಿರ್ದೇಶಕರುಗಳಾದ ಕುಟ್ಟಂಡ ಅಜಿತ್ ಕರುಂಬಯ್ಯ , ಕುಪ್ಪಂಡ ಅನಿತಾ ಸುರೇಶ್, ಪುಲಿಯಂಡ ಶೋಭ ಕುಟ್ಟಪ್ಪ, ಸುಭಾಷಿಣಿ ಜೆ.ಕೆ., ತಮ್ಮಯ್ಯ ಪಿ.ಸಿ., ಸೋಮೇಶ್ ಸಿ.ಎಲ್., ಮಾಳೇಟಿರ ಪವಿತ್ರ, ಡಾಲು ವಿ.ವಿ., ಟಿ.ಕೆ. ಯಶೋಧರ, ದಿನೇಶ್ ಹೆಚ್.ಕೆ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಟ್ಟಂಡ ಶಶಿಕಲಾ ಹಾಜರಿದ್ದರು. - ಪುತ್ತಂ ಪ್ರದೀಪ್