ಮಡಿಕೇರಿ, ಸೆ.೨೦: ವೀರಾಜಪೇಟೆ ತಾಲೂಕು ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ವತಿಯಿಂದ ೨೦೨೧-೨೨ ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೨೧ ರಂದು (ಇಂದು) ಬೆಳಗ್ಗೆ ೧೦.೩೦ ಗಂಟೆಗೆ ಚೇಂದ್ರ‍್ರಿಮಾಡ ಕೆ.ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಅಮರ ಜವಾನ ಸ್ಮಾರಕದಲ್ಲಿ ನಡೆಯಲಿದೆ.

ಹಾಗೆಯೇ ಯೋಧರ ಸ್ಮಾರಕ ಸ್ಥಂಭದ ಆವರಣದಲ್ಲಿ ಜಿಲ್ಲಾ ಸಶಸ್ತç ಪೊಲೀಸ್ ತುಕಡಿಯ ಗೌರವದೊಂದಿಗೆ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ಹಾಗೂ ದಿವಂಗತ ಯೋಧರಿಗೆ ಶ್ರದ್ಧಾಂಜಲಿಯನ್ನು ಸಂಘದ ವತಿಯಿಂದ ಅರ್ಪಿಸಲಾಗುವುದು.

ಕರ್ನಲ್ ನಿವೃತ್ತ ಕಂಡ್ರತAಡ ಸಿ.ಸುಬ್ಬಯ್ಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಮೇಜರ್ ಡಾ. ಜೆ.ಆರ್. ಬಾಲಸುಬ್ರಮಣ್ಯಂ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ.ಅಯ್ಯಪ್ಪ, ವೀರಾಜಪೇಟೆ ತಾಲೂಕು ತಹಶೀಲ್ದಾರರು ಮತ್ತು ದಂಡಾಧಿಕಾರಿ ಪ್ಲೆöÊಟ್ ಲೆಫ್ಟಿನೆಂಟ್ ಅರ್ಚನ ಭಟ್, ಮಾಜಿ ಸೈನಿಕ ಸ್ವಾಮಿ ಪರಮಾನಂದ (ಕಡೇಮಡ ಬಿದ್ದಪ್ಪ), ವೀರಾಜಪೇಟೆ ಪುರಸಭೆ ಅಧ್ಯಕ್ಷೆ ಟಿ.ಆರ್.ಸುಶ್ಮಿತಾ ಇತರರು ಪಾಲ್ಗೊಳ್ಳಲಿದ್ದಾರೆ.